277. ನಮ್ಮ ದ್ರೋಹಗಳ ದೆಸೆಯಿಂದ ಗಾಯಪಟ್ಟಾತನೇ ಸ್ತೋತ್ರ ಯೆಶಾ 53:5
278. ನಮ್ಮ ಅಪರಾಧಗಳ ನಿಮಿತ್ತ ಜಜ್ಜಲ್ಪಟ್ಟಾತನೇ ಸ್ತೋತ್ರ ಯೆಶಾ 53:5
279. ನಮ್ಮ ಪಾಪಗಳ ನಿಮಿತ್ತ ಶಿಲುಬೆಯನ್ನು ಹೊತ್ತುಕೊಂಡು ಬಾಧೆಯನ್ನು ಅನುಭವಿಸಿದಾತನಿಗೆ ಸ್ತೋತ್ರ 1 ಪೇತ್ರ 2:24
280. ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡಾತನಿಗೆ ಸ್ತೋತ್ರ ಮತ್ತಾ 8:17
281. ನಮ್ಮ ಸಂಕಟಗಳನ್ನು ಹೊತ್ತುಕೊಂಡು ನಮ್ಮ ವ್ಯಾಧಿಯನ್ನು ಅನುಭವಿಸಿದಾತನೇ ಸ್ತೋತ್ರ ಯೆಶಾ 53:4
282. ನಮಗಾಗಿ ರಕ್ತ ಸುರಿಸಿದಾತನಿಗೆ ಸ್ತೋತ್ರ ಕೊಲೊ 1:20
283. ನಮಗೆ ಸಮಾಧಾನ ಉಂಟುಮಾಡುವ ದಂಡನೆಯನ್ನು ಅನುಭವಿಸಿದಾತನೇ ಸ್ತೋತ್ರ ಯೆಶಾ 53:5
284. ನಮ್ಮೆಲ್ಲರಿಗಾಗಿ ಮರಣವನ್ನು ಅನುಭವಿಸಿದಾತನೇ ಸ್ತೋತ್ರ ಯೆಶಾ 53:12
285. ನಮಗೋಸ್ಕರ ಹಾಸ್ಯಕ್ಕೆ ಗುರಿಯಾದಾತನೇ ಸ್ತೋತ್ರ ಕೀರ್ತ 22:7
286. ಮನುಷ್ಯರಿಂದ ನಿಂದಿಸಲ್ಪಟ್ಟಾತನೇ ಸ್ತೋತ್ರ ಕೀರ್ತ 22:6
287. ಜನರಿಂದ ತಿರಸ್ಕಾರ ಹೊಂದಿದಾತನೇ ಸ್ತೋತ್ರ ಕೀರ್ತ 22:6
288. ದ್ರೋಹಿಗಳಿಗಾಗಿ ವಿಜ್ಞಾಪಿಸಿದಾತನೇ ಸ್ತೋತ್ರ ಯೆಶಾ 53:12
289. ದ್ರೋಹಿಗಳೊಂದಿಗೆ ಎಣಿಸಲ್ಪಟ್ಟಾತನೇ ಸ್ತೋತ್ರ ಯೆಶಾ 53:12
290. ಗುಣಪಡಿಸುವ ನಿನ್ನ ಬಾಸುಂಡೆಗಳಿಗಾಗಿ ಸ್ತೋತ್ರ ಯೆಶಾ 53:5
291. ಜೀವದಿಂದೆದ್ದಾತನಿಗೆ ಸ್ತೋತ್ರ ಲೂಕ 24:6
292. ಪುನರುತ್ಥಾನವೂ ಜೀವವೂ ಆಗಿರುವಾತನಿಗೆ ಸ್ತೋತ್ರ ಯೋಹಾ 11:25