480. ದಿಕ್ಕಿಲ್ಲದವರನ್ನು ಪರಾಂಬರಿಸಿ ಆಪತ್ಕಾಲದಲ್ಲಿ ರಕ್ಷಿಸಿ ಅವನ ಪ್ರಾಣವನ್ನು ಕಾಪಾಡಿ ಶತ್ರುಗಳ ಅಧೀನಕ್ಕೆ ಕೊಡದೆ ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಅವನನ್ನು ಉದ್ಧರಿಸುವಾತನೇ ಸ್ತೋತ್ರ ಕೀರ್ತ 41:1-3
481. ದೀನರನ್ನು ಉದ್ಧರಿಸುವಾತನೇ ಸ್ತೋತ್ರ ಕೀರ್ತ 18:27
482. ಹಮ್ಮಿನ ಕಣ್ಣುಳ್ಳವರನ್ನು ತಗ್ಗಿಸಿ ಬಿಡಿಸುವಾತನೇ ಸ್ತೋತ್ರ ಕೀರ್ತ 18:27
483. ಕರ್ತನು ನೀತಿಯನ್ನು ಸಾಧಿಸುವವನಾಗಿ ಕುಗ್ಗಿ ಹೋದವರೆಲ್ಲರ ನ್ಯಾಯವನ್ನು ಸ್ಥಾಪಿಸುವವನಾಗಿರುವಾತನೇ ಸ್ತೋತ್ರ ಕೀರ್ತ 103:6
484. ಬಲಿಷ್ಠನ ಕೈಯಿಂದಾಗಲಿ ಬಲಹೀನನ ಕೈಯಿಂದಾಗಲಿ ನಮ್ಮನ್ನು ರಕ್ಷಿಸುವ ದೇವರಾದ ಕರ್ತನೇ ಸ್ತೋತ್ರ 2 ಪೂರ್ವ. 14:11
485. ಕುಗ್ಗಿದವರ ಬಾಧೆಯನ್ನು ಗತಿಯಿಲ್ಲದವರ ನರಳುವಿಕೆಯನ್ನು ಕೇಳಿ ಅವರನ್ನು ಸುರಕ್ಷಿತವಾಗಿ ಇರಿಸುವಾತನೇ ಸ್ತೋತ್ರ ಕೀರ್ತ 12:5
486. ಬಡವರ ಮೊರೆಗೆ ಲಕ್ಷ್ಯ ಕೊಡುವಾತನೇ ಸ್ತೋತ್ರ ಕೀರ್ತ 69:33
487. ಕಷ್ಟದಲ್ಲಿದ್ದ ದೀನರನ್ನು ಉನ್ನತ ಸ್ಥಿತಿಗೆ ಏರಿಸಿ ಕುರಿಹಿಂಡಿನಂತೆ ಹೆಚ್ಚಿಸಿದಾತನೇ ಸ್ತೋತ್ರ ಕೀರ್ತ 107:41
488. ನಮ್ಮ ವಿಷಯವಾಗಿ ನುಡಿದಿರುವ ಕೇಡನ್ನು ಮನಮರುಗಿ ಮಾಡದಿರುವಾತನೇ ಸ್ತೋತ್ರ ಯೆರೆ 26:13
489. ದೀನರ ಕುಟುಂಬವನ್ನು ಕುರಿಹಿಂಡಿನಂತೆ ಹೆಚ್ಚಿಸುವಾತನೇ ಸ್ತೋತ್ರ ಕೀರ್ತ 57:3
490. ದೀನರ ಬಲಗಡೆ ನಿಂತು ಪ್ರಾಣ ಶಿಕ್ಷೆ ವಿಧಿಸುವವರ ಕೈಯಿಂದ ತಪ್ಪಿಸಿ ರಕ್ಷಿಸುವಾತನೇ ಸ್ತೋತ್ರ ಕೀರ್ತ 109:31
491. ದೀನರನ್ನು ತಿಪ್ಪೆಯಿಂದ ಎತ್ತಿದಾತನೇ ಸ್ತೋತ್ರ ಕೀರ್ತ 113:7
492. ದೀನರನ್ನು ಪ್ರಭುಗಳ ಜೊತೆಯಲ್ಲಿ ಅವರ ಜನಾಧಿಪತಿಗಳೊಡನೆ ಅವರನ್ನು ಕುಳ್ಳಿರಿಸುವಾತನೇ ಸ್ತೋತ್ರ ಕೀರ್ತ 113:7
493. ದೀನರ ಮತ್ತು ಬಡವರ ನ್ಯಾಯವನ್ನು ಸ್ಥಾಪಿಸುವಾತನೇ ಸ್ತೋತ್ರ ಕೀರ್ತ 140:12
494. ದಿಕ್ಕಿಲ್ಲದವರಿಗೆ ತಂದೆಯಾಗಿರುವಾತನೇ ಸ್ತೋತ್ರ ಕೀರ್ತ 68:5
495. ಅನಾಥರನ್ನು ವಿಚಾರಿಸುವಾತನೇ ಸ್ತೋತ್ರ ಯೋಹಾ 14:18
496. ವಿಧವೆಯರಿಗೆ ಸಹಾಯಕನಾಗಿರುವಾತನೇ ಸ್ತೋತ್ರ ಕೀರ್ತ 68:5
497. ದಿಕ್ಕಿಲ್ಲದವರಿಗೆ ನೀನೇ ದಿಕ್ಕಾಗಿರುವಾತನೇ ಸ್ತೋತ್ರ ಕೀರ್ತ 10:14
498. ಗತಿಹೀನರ ಮೊರೆಯನ್ನು ಅಲಕ್ಷಮಾಡದೇ ಅವನ ವಿಜ್ಞಾಪನೆಗಳನ್ನು ಕೇಳುವಾತನೇ ಸ್ತೋತ್ರ ಕೀರ್ತ 102:15
499. ಅನಾಥರಿಗೂ ವಿಧೆವೆಯರಿಗೂ ಆಧಾರವಾಗಿರುವಾತನಿಗೆ ಸ್ತೋತ್ರ ಕೀರ್ತ 146:9
500. ಪರದೇಶದವನನ್ನು ಕಾಪಾಡುವಾತನೇ ಸ್ತೋತ್ರ ಕೀರ್ತ 146:9
501. ಒಬ್ಬಂಟಿಗರನ್ನು ಸಂಸಾರಿಕರನ್ನಾಗಿ ಮಾಡುವಾತನೇ ಸ್ತೋತ್ರ ಕೀರ್ತ 68:6
502. ನೀನು ದಯಾಪರನಾಗಿ ದರಿದ್ರರಿಗೆ ಬೇಕಾದದೆಲ್ಲವನ್ನು ಕೊಡುವಾತನೇ ಸ್ತೋತ್ರ ಕೀರ್ತ 68:10