519ನೀತಿವಂತರನ್ನು ಉದ್ಧರಿಸುವ ಕರ್ತನಾಗಿರುವಾತನೇ ಸ್ತೋತ್ರ ಕೀರ್ತ 37:17
520ನೀತಿವಂತರಿಗೆ ಸಹಾಯಕನಾಗಿ ಅವರನ್ನು ತಪ್ಪಿಸಿ ಬಿಡಿಸುವಾತನಿಗೆ ಸ್ತೋತ್ರ ಕೀರ್ತ 37:40
521ನೀತಿವಂತರನ್ನು ಎಂದಿಗೂ ಕದಲಗೊಡಿಸದಿರುವಾತನಿಗೆ ಸ್ತೋತ್ರ ಕೀರ್ತ 55:22
522ನೀತಿವಂತರನ್ನು ಖರ್ಜುರ ಮರದಂತೆ ಬೆಳೆಯಮಾಡಿ ಲೆಬನೋನಿನ ದೇವದಾರು ವೃಕ್ಷದ ಹಾಗೆ ವೃದ್ಧಿಮಾಡುವ ಕರ್ತನಿಗೆ ಸ್ತೋತ್ರ ಕೀರ್ತ 92:12
523ನೀತಿವಂತರಿಗೆ ಸ್ನೇಹಿತನಾಗಿರುವಾತನಿಗೆ ಸ್ತೋತ್ರ ಕೀರ್ತ 146:8
524ನೀತಿವಂತರು ಮುಪ್ಪಿನಲ್ಲಿ ಫಲಿಸಿ ಪುಷ್ಟಿಯಾಗಿದ್ದು ಶೋಭಿಸುವಂತೆ ಮಾಡುವಾತನೇ ಸ್ತೋತ್ರ ಕೀರ್ತ 92:14
525ಸಜ್ಜನರ ಸಹಾಯಕನಾಗಿರುವಾತನಿಗೆ ಸ್ತೋತ್ರ 1 ಯೋಹಾ 4:8
526ಸದ್ಭಕ್ತರ ಜೀವಮಾನವನ್ನು ಲಕ್ಷಿಸುವಾತನೇ ಸ್ತೋತ್ರ ಕೀರ್ತ 37:18
527ಸದ್ಭಕ್ತರಿಗೆ ಎಲ್ಲಾ ಶುಭವನ್ನು ದಯಾಪಾಲಿಸುವಾತನೇ ಸ್ತೋತ್ರ ಕೀರ್ತ 84:11
528ದೀನರಿಗೆ ಆಧಾರವಾಗಿರುವ ಕರ್ತನಿಗೆ ಸ್ತೋತ್ರ ಕೀರ್ತ 147:6
529ದೀನರನ್ನು ರಕ್ಷಣೆಯಿಂದ ಭೂಷಿಸುವಾತನಿಗೆ ಸ್ತೋತ್ರ ಕೀರ್ತ 149:4
530ದೀನರನ್ನು ತನ್ನ ವಿಧಿಗನುಗುಣವಾಗಿ ನಡೆಸುವಾತನೇ ಸ್ತೋತ್ರ ಕೀರ್ತ 25:9
531ದಾರಿ ತಪ್ಪಿದವರನ್ನು ಬೋಧಿಸಿ ಸನ್ಮಾರ್ಗದಲ್ಲಿ ನಡೆಸುವಾತನೇ ಸ್ತೋತ್ರ ಕೀರ್ತ 25:8
532ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ನಿನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವಾತನೇ ಸ್ತೋತ್ರ ಕೀರ್ತ 25:14
533ತನ್ನ ಭಕ್ತರನ್ನು ಎಂದಿಗೂ ಕೈಬಿಡದ ಕರ್ತನಿಗೆ ಸ್ತೋತ್ರ ಕೀರ್ತ 37:25
534ತನ್ನ ಭಕ್ತ ಜನರಿಗೆ ಸಮಾಧಾನ ವಾಕ್ಯವನ್ನು ಹೇಳುವಾತನಿಗೆ ಸ್ತೋತ್ರ ಕೀರ್ತ 85:8
535ಪರಿಶುದ್ಧ ಸಭೆಯಲ್ಲಿ ಭಯಂಕರನಾಗಿರುವಾತನಿಗೆ ಸ್ತೋತ್ರ ಕೀರ್ತ 89:7
536ನಮ್ಮ ಎಲ್ಲಾ ಪರಿವಾರದವರಿಗಿಂತ ಭೀಕರನಾಗಿರುವಾತನಿಗೆ ಸ್ತೋತ್ರ ಕೀರ್ತ 89:7
537ಕೆರೂಬಿಯರಿಂದಲೂ ಸೆರಾಫಿಯರಿಂದಲೂ ನಿತ್ಯವು ಸ್ತುತಿಸಲ್ಪಡುತ್ತಿರುವಾತನಿಗೆ ಸ್ತೋತ್ರ ಯೆಶಾ 6:3
538ನನ್ನ ತಲೆಯನ್ನು ಎತ್ತುವಂತೆ ಮಾಡಿದಾತನಿಗೆ ಸ್ತೋತ್ರ ಕೀರ್ತ 3:3
539ನನ್ನ ಕೊಂಬನ್ನು ಕಾಡು ಕೋಣದ ಕೊಂಬಿನಂತೆ ಎತ್ತಿದಕ್ಕಾಗಿ ಸ್ತೋತ್ರ ಕೀರ್ತ 92:10
540ನನ್ನನ್ನು ಉನ್ನತ ಪ್ರದೇಶಗಳಲ್ಲಿ ನಿಲ್ಲಿಸುವಾತನೇ ಸ್ತೋತ್ರ ಕೀರ್ತ 18:33
541ನನ್ನನ್ನು ಕಾಪಾಡುವ ಕರ್ತನೇ ಸ್ತೋತ್ರ ಕೀರ್ತ 3:5
542ನನ್ನನ್ನು ಸುರಕ್ಷಿತನಾಗಿರುವಂತೆ ಕಾಪಾಡಿದ್ದಿ ಸ್ತೋತ್ರ ಕೀರ್ತ 4:8
543ನನ್ನ ಉದ್ಧಾರಕನಾದವನೇ ಸ್ತೋತ್ರ ಕೀರ್ತ 18:18
544ನನಗೆ ಬೆಳಕನ್ನು ಕೊಡುವಾತನೇ ಸ್ತೋತ್ರ ಕೀರ್ತ 18:28
545ನನ್ನ ಕತ್ತಲನ್ನು ಪರಿಹರಿಸುವಾತನೇ ಸ್ತೋತ್ರ ಕೀರ್ತ 18:28
546ನನಗೆ ಶ್ರವಣ ಶಕ್ತಿಯನ್ನು ಅನುಗ್ರಹಿಸುವಾತನೇ ಸ್ತೋತ್ರ ಕೀರ್ತ 40:6
547ನನ್ನ ವಿಜ್ಞಾಪನೆಯನ್ನು ಕೇಳುವಾತನೇ ಸ್ತೋತ್ರ ಕೀರ್ತ 28:6
548ನನ್ನ ಗೋಳಾಟಕ್ಕೆ ಕಿವಿಗೊಡುವಾತನೇ ಸ್ತೋತ್ರ ಕೀರ್ತ 6:8
549ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿಟ್ಟಿರುವಾತನೇ ಸ್ತೋತ್ರ ಕೀರ್ತ 56:8
550ನನ್ನ ಕಣ್ಣುಗಳನ್ನು ಕಣ್ಣಿರಿಗೂ ತಪ್ಪಿಸಿದ್ದಕ್ಕಾಗಿ ಸ್ತೋತ್ರ ಕೀರ್ತ 116:9
551ನನ್ನ ಕಾಲನ್ನು ಕೆಟ್ಟದರಿಂದ ತಪ್ಪಿಸಿದಾತನೇ ಸ್ತೋತ್ರ ಕೀರ್ತ 116:9
552ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿ ಪೆಟ್ಟುಗಳಿಂದ ಗುಣಪಡಿಸಿದಾತನೇ ಸ್ತೋತ್ರ ಕೀರ್ತ 40:2
553ನನ್ನ ಕಾಲುಗಳನ್ನು ಬಲೆಯಿಂದ ಬಿಡಿಸಿದಾತನೇ ಸ್ತೋತ್ರ ಕೀರ್ತ 25:15
554ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕುಗೊಳಿಸುವಾತನೇ ಸ್ತೋತ್ರ ಕೀರ್ತ 18:33
555ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಾತನೇ ಸ್ತೋತ್ರ ಕೀರ್ತ 18:36
556ನನ್ನ ಮಾರ್ಗವನ್ನು ಸರಾಗ ಮಾಡುವಾತನೇ ಸ್ತೋತ್ರ ಕೀರ್ತ 18:32
557ನನ್ನನ್ನು ವಿಶಾಲ ಸ್ಥಳಕ್ಕೆ ಸೇರಿಸಿದಾತನೇ ಸ್ತೋತ್ರ ಕೀರ್ತ 18:19