558ನೀನು ನನ್ನನ್ನು ಶತ್ರುಗಳ ಕೈಕೆಳಗೆ ಬೀಳಿಸದೆ ನಿರಾತಂಕ ಸ್ಥಾನದಲ್ಲಿ ನನ್ನನ್ನು ನಿಲ್ಲಿಸಿದ್ದಕ್ಕಾಗಿ ಸ್ತೋತ್ರಪ್ಪ ಸ್ತೋತ್ರ ಕೀರ್ತ 31:8
559ಇಕ್ಕಟ್ಟನಲ್ಲಿ ಮೊರೆಯಿಟ್ಟಾಗ ಸದುತ್ತರವನ್ನು ದಾಯಪಾಲಿಸಿದಾತನೇ ಸ್ತೋತ್ರಯ್ಯ ಕೀರ್ತ 118:5
560ಎಲ್ಲಾ ಸಂಕಷ್ಟಗಳಿಂದ ಬಿಡಿಸಿದಾತನೇ, ರಾಜಾ ಸ್ತೋತ್ರ ಕೀರ್ತ 54:6
561ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವಾತನೇ ಸ್ತೋತ್ರ 2 ಸಮು 22:3
562ಕೋಟೆ ಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಸೇರಿಸಿದಾತನೇ ಸ್ತೋತ್ರ ಕೀರ್ತ 60:9
563ನನಗೆ ಯುದ್ಧ ವಿದ್ಯೆಯನ್ನು ಕಲಿಸಿಕೊಟ್ಟಾತನೇ ಸ್ತೋತ್ರ ಕೀರ್ತ 18:34
564ನನ್ನ ಕೈಗಳಿಗೆ ಯುದ್ಧ ವಿದ್ಯೆಯನ್ನು ನನ್ನ ಬೆರಳುಗಳಿಗೆ ಕಾಳಗವನ್ನು ಕಲಿಸಿಕೊಟ್ಟಾತನೇ ಸ್ತೋತ್ರ ಸ್ತೋತ್ರ ಸ್ತೋತ್ರ ಕೀರ್ತ 144:1
565ಕೈಹಿಡಿದು ನಡೆಯಲು ಕಲಿಸುವಾತನೇ ಸ್ತೋತ್ರ ಹೋಶೆ 11:3
566ಯುದ್ಧ ಸಮಯದಲ್ಲಿ ನನ್ನ ಶಿರಸ್ತ್ರಾಣವಾಗಿರುವಾತನೇ ಸ್ತೋತ್ರ ಕೀರ್ತ 140:7
567ನನ್ನನ್ನು ಮುಟ್ಟದಂತೆ ರಕ್ಷಿತವಾಗಿ ಇಡುವಾತನೇ, ಅಯ್ಯಾ ಸ್ತೋತ್ರ ಕೀರ್ತ 55:18
568ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನ ಮಾಡಿದಾತನೇ ಸ್ತೋತ್ರ ಕೀರ್ತ 18:39
569ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿದಾತನೇ ಸ್ತೋತ್ರ ಕೀರ್ತ 18:32
570ದೇವರೆ ನಿನ್ನ ಬಲವನ್ನು ಪ್ರಕಟಪಡಿಸುವಾತನೇ ಸ್ತೋತ್ರ ಕೀರ್ತ 68:28
571ನಿನ್ನನ್ನು ಪ್ರೀತಿಸುವುದು ಶಾಶ್ವತ ಪ್ರೇಮದಿಂದಲೇ, ಆದಕಾರಣ ಮಮತೆಯಿಂದ ನಿನ್ನನ್ನು ಸೆಳೆದುಕೊಂಡೆನು ಎಂದಾತನೇ ಸ್ತೋತ್ರ ಯೇರೆ 31:3