660ಹಗಲಿನಲ್ಲಿ ಸೂರ್ಯನೂ ಇರುಳಿನಲ್ಲಿ ಚಂದ್ರನೂ ನನ್ನನ್ನು ಬಾಧಿಸದಿರುವದಕ್ಕಾಗಿ ಸ್ತೋತ್ರ ಕೀರ್ತ 121:6
661ಕರ್ತನು ನನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವಾತನಾಗಿರುವದಕ್ಕಾಗಿ ಸ್ತೋತ್ರ ಕೀರ್ತ 121:7
662ನಾನು ಹೋಗುವಾಗಲೂ ಬರುವಾಗಲೂ ಇಂದಿನಿಂದ ಸದಾಕಾಲವೂ ನನ್ನನ್ನು ಕಾಪಾಡುವಾತನೇ ಸ್ತೋತ್ರ ಕೀರ್ತ 121:8
663ನನ್ನ ಪ್ರಾಣವನ್ನು ಕಾಯುವಾತನೇ ಸ್ತೋತ್ರ ಕೀರ್ತ 121:7
664ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆಯಲ್ಲಾ, ಕರ್ತನೇ ಸ್ತೋತ್ರ ಕೀರ್ತ 139:3
665ನನಗೋಸ್ಕರ ಮುಂದೆ ಹೋಗುವಾತನೇ ಸ್ತೋತ್ರ ಧರ್ಮೋ 9:3
666ಕರ್ತನೇ ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದಕ್ಕಾಗಿ ಸ್ತೋತ್ರ ಕೀರ್ತ 139:1
667ನಾನು ಕೂತುಕೊಳ್ಳುವದೂ ಏಳುವುದೂ ನಿನಗೆ ಗೊತ್ತಿರುವುದಕ್ಕಾಗಿ ಸ್ತೋತ್ರ ಕೀರ್ತ 139:2
668ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುವಾತನೇ ಸ್ತೋತ್ರ ಕೀರ್ತ 139:2
667ಕರ್ತನೇ ನನ್ನ ನಾಲಿಗಯ ಮಾತುಗಳಲ್ಲಿ ನೀನು ಆರಿಯದೆ ಇರುವಂಥದ್ದು ಒಂದೂ ಇಲ್ಲ ಸ್ತೋತ್ರ ಕೀರ್ತ 139:4
668ನಾನು ನಡೆಯುವುದನ್ನು ಮಲಗುವುದನ್ನು ಶೋಧಿಸಿ ಗ್ರಹಿಸಿಕೊಳ್ಳುವಾತನೇ ಸ್ತೋತ್ರ ಕೀರ್ತ 139:3
669ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ ನನ್ನನ್ನು ಚೈತನ್ಯಗೊಳಿಸುವಾತನೇ ಸ್ತೋತ್ರ ಕೀರ್ತ 138:7
670ನನ್ನ ಆತ್ಮವು ಕುಂದಿಹೋದಾಗ ನನ್ನ ಮಾರ್ಗವನ್ನು ಬಲ್ಲಾತನೇ ಸ್ತೋತ್ರ ಕೀರ್ತ 142:3
671ಸುತ್ತಲೂ ನನ್ನನ್ನು ಆವರಿಸಿ ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿರುವದಕ್ಕಾಗಿ ಸ್ತೋತ್ರ ಕೀರ್ತ 139:5
672ನನ್ನನ್ನು ಕಠಿಣವಾಗಿ ಶಿಕ್ಷಿಸಿದ್ದಾಗ್ಯೂ ಮರಣಕ್ಕೆ ಒಪ್ಪಿಸದಿರುವದಕ್ಕಾಗಿ ಸ್ತೋತ್ರ ಕೀರ್ತ 118:18
673ಆತನು ನಮ್ಮನ್ನು ವೈರಿಗಳ ಹಲ್ಲುಗಳಿಗೆ ಕೊಳ್ಳೆ ಕೊಡಲಿಲ್ಲ ಸ್ತೋತ್ರ ಕೀರ್ತ 124:6
674ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಾತನೇ ಸ್ತೋತ್ರ ಕೀರ್ತ 138:3
675ದೇವರೇ ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟು ಗೌರವವಾಗಿವೆ ಸ್ತೋತ್ರ ಕೀರ್ತ 139:17
676ಆತನು ನನ್ನ ಹೆಬ್ಬಾಗಿಲುಗಳ ಅಗುಳಿಗಳನ್ನು ಬಲಪಡಿಸಿದ್ದಾನೆ ಸ್ತೋತ್ರ ಕೀರ್ತ 147:13
677ನನ್ನ ಪ್ರಾಂತದೊಳಗೆ ಸೌಭಾಗ್ಯವನ್ನುಂಟು ಮಾಡುವಾತನೇ ಸ್ತೋತ್ರ ಕೀರ್ತ 147:14
678ಆತನು ಆನಂದಿಸುವದು ತನ್ನ ಕೃಪೆಯನ್ನು ನಿರೀಕ್ಷಿಸುವ ಭಕ್ತರಲ್ಲೇ ಸ್ತೋತ್ರ ಕೀರ್ತ 147:11