679ಪ್ರಾರ್ಥನೆ ನಿರಾಕರಿಸದೆ ನಮ್ಮ ಇಷ್ಟಾರ್ಥವನ್ನು ನೆರವೇರಿಸುವಾತನೇ ಸ್ತೋತ್ರ. ಕೀರ್ತ 21:2
680ದೀನಾವಸ್ಥೆಯಲ್ಲಿರುವಾಗ ನಮ್ಮನ್ನು ನೆನಪುಮಾಡಿಕೊಂಡಾತನೇ ಸ್ತೋತ್ರ ಕೀರ್ತ 136:23
681ನಮ್ಮನ್ನು ನೆನಪು ಮಾಡಿಕೊಳ್ಳುವ ಕರ್ತನೇ ಸ್ತೋತ್ರ ಕೀರ್ತ 115:12
682ನಮ್ಮನ್ನು ಎದ್ದು ನಿಲ್ಲುವಂತೆ ಮಾಡುವಾತನೇ ಸ್ತೋತ್ರ ಕೀರ್ತ 20:8
683ಕುಗ್ಗಿಸಿದ ನೊಗವನ್ನು ಮುರಿದು ನಾವು ನೆಟ್ಟಗೆ ನಿಂತು ನಾವು ನಡೆಯುವಂತೆ ಮಾಡುವಾತನೇ ಸ್ತೋತ್ರ ಯಾಜ 26:13
684ನಮ್ಮನ್ನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದ ಪಡಿಸಿದಾತನೇ ಸ್ತೋತ್ರ ಕೀರ್ತ 21:6
685ನಿನ್ನ ಸಂಭ್ರಮದಲ್ಲಿ ನಮಗೆ ಪಾನ ಮಾಡಿಸುವಾತನೇ ಸ್ತೋತ್ರ ಕೀರ್ತ 36:8
686ಪರಲೋಕದಿಂದ ಸಹಾಯ ಮಾಡಿ ನಿಂದಕರ ಬಾಯಿಗೆ ನನ್ನನ್ನು ತಪ್ಪಿಸುವಾತನೇ ಸ್ತೋತ್ರ ಕೀರ್ತ 57:3
687ನಮ್ಮ ವೈರಿಗಳನ್ನು ತುಳಿದು ಬಿಡುವಾತನೇ ಸ್ತೋತ್ರ ಕೀರ್ತ 108:13
688ಹಿಂಸಕರಿಂದ ಬಿಡಿಸಿದವನೂ ಹಗೆಗಳಿಗೆ ಆಶಾಭಂಗಪಡಿಸಿದವನೂ ಆಗಿರುವಾತನೇ ಸ್ತೋತ್ರ ಕೀರ್ತ 44:7
689ಬೆಳ್ಳಿಯನ್ನು ಪುಟ್ಟಕ್ಕೆ ಹಾಕುವ ಮೇರೆಗೆ ನಮ್ಮನ್ನು ಶುದ್ಧಿಮಾಡಿದಾತನೇ ಸ್ತೋತ್ರ ಕೀರ್ತ 66:10
690ನಮ್ಮ ನೊಗವನ್ನು ಮುರಿದಾತನೇ ಸ್ತೋತ್ರ ಯಜ 26:13
691ಚಿಕ್ಕವರನ್ನೂ ದೊಡ್ಡವರನ್ನೂ ತನ್ನ ಭಕ್ತರನ್ನೂ ಆಶೀರ್ವಾದಿಸುವಾತನೇ ಸ್ತೋತ್ರ ಕೀರ್ತ 115:12
692ನಮ್ಮನ್ನೂ ನಮ್ಮ ಮಕ್ಕಳನ್ನೂ ಅಭಿವೃದ್ಧಿಪಡಿಸುವಾತನೇ ಸ್ತೋತ್ರ ಕೀರ್ತ 115:14