766ದೇವರೇ ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು ಅದಕ್ಕಾಗಿ ಸ್ತೋತ್ರ ಕೀರ್ತ 36:7
767ಶಾಶ್ವತವಾಗಿರುವ ನಿನ್ನ ಕೃಪೆಗಾಗಿ ಸ್ತೋತ್ರ ಕೀರ್ತ 106:1
768ನಮ್ಮನ್ನು ಉಳಿಸಿರುವ ಕರ್ತನ ಕರುಣೆಗಾಗಿ ಸ್ತೋತ್ರ ಯೆಶಾ 53:5
769ದಿನ ದಿನವೂ ಹೊಸಹೊಸದಾಗಿ ಒದಗುವ ನಿನ್ನ ಕೃಪೆಗಾಗಿ ಸ್ತೋತ್ರ ಯೆಶಾ 53:5
770ಪ್ರೀತಿ ಕೃಪೆಗಳೆಂಬ ಕಿರೀಟದಿಂದ ನನ್ನನ್ನು ಶೃಂಗರಿಸುವವನೇ ಸ್ತೋತ್ರ ಕೀರ್ತ 103:4
771ನೀನು ಮಾಡಿರುವ ಉಪಕಾರಗಳಿಗಾಗಿ ಸ್ತೋತ್ರ ಕೀರ್ತ 103:2
772ಮಹಿಮಾಪ್ರಭಾವಗಳಿಂದ ಭೂಷಿತನಾಗಿರುವ ಕರ್ತನೇ ಸ್ತೋತ್ರ ಕೀರ್ತ 104:1
773ರಾಜ್ಯಾಧಿಕಾರವನ್ನೂ ಮಹಿಮೆಯ ವಸ್ತ್ರವನ್ನೂ ಧರಿಸಿರುವ ಕರ್ತನೆ ಸ್ತೋತ್ರ ಕೀರ್ತ 93:1
774ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವಾತನೇ ಸ್ತೋತ್ರ ಕೀರ್ತ 104:2
775ಗಾಳಿಗಳನ್ನು ದೂತರನ್ನಾಗಿ ಮಾಡಿಕೊಂಡಿರುವಾತನೇ ಸ್ತೋತ್ರ ಕೀರ್ತ 104:4
776ನಿನ್ನ ಕೃಪೆಗೋಸ್ಕರವೂ ನೀನು ಮಾನವರಿಗಾಗಿ ನಡೆಸಿದ ಅದ್ಭುತ ಕಾರ್ಯಕ್ಕಾಗಿ ಸ್ತೋತ್ರ ಕೀರ್ತ 107:8
777ಬಾಯಾರಿದವರ ಆಶೆಯನ್ನು ಪೂರೈಸಿದಾತನೇ ಸ್ತೋತ್ರ ಕೀರ್ತ 107:8
778ವಾಕ್ಯವನ್ನು ಕಳುಹಿಸಿ ಅವರನ್ನು ಗುಣಪಡಿಸಿದಾತನೇ ಸ್ತೋತ್ರ ಕೀರ್ತ 107:20
779ನಿನ್ನ ಧರ್ಮಶಾಸ್ತ್ರದ ಅದ್ಭುತಗಳನ್ನು ಕಂಡುಕೊಳ್ಳುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 119:18
780ಚಿಕ್ಕಂದಿನಿಂದಲೂ ನನಗೆ ಆದರಣೆಯಾಗಿದ್ದ ನಿನ್ನ ವಾಕ್ಯಕ್ಕಾಗಿ ಸ್ತೋತ್ರ ಕೀರ್ತ 14:13
781ನಿನ್ನ ವಾಕ್ಯವನ್ನು ನಂಬುವಂತೆ ನಿರೀಕ್ಷೆ ಹುಟ್ಟಿಸಿದಾತನೇ ಸ್ತೋತ್ರ ಕೀರ್ತ 119:49
782ನಿನ್ನ ನುಡಿಯು ನನ್ನನ್ನು ಚೈತನ್ಯಗೊಳಿಸುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 119:50
783ನಿನ್ನ ವಾಗ್ದಾನಕ್ಕೆ ತಕ್ಕಂತೆ ನಿನ್ನ ಸೇವಕನಿಗೆ ಮಹೋಪಕಾರಿಯಾಗಿದ್ದಿ ಸ್ತೋತ್ರ ಕೀರ್ತ 119:65
784ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿರುವದಕ್ಕೆ ಸ್ತೋತ್ರ ಕೀರ್ತ 119:105
785ನಿನ್ನ ವಾಕ್ಯ ವಿವರಣೆಯಿಂದ ಯುಕ್ತಿ ಹೀನರಿಗೆ ಜ್ಞಾನೋದಯವಾಗುವದಕೋಸ್ಕರ ಸ್ತೋತ್ರ ಕೀರ್ತ 119:130
786ನಿನ್ನ ನುಡಿಯೂ ಪರಿಶುದ್ದವಾಗಿರುವದಕ್ಕೆ ಸ್ತೋತ್ರ ಕೀರ್ತ 119:140
787ನಿನ್ನ ವಾಕ್ಯಗಳು ನನಗೆ ಹರ್ಷವೂ ನನ್ನ ಹೃದಯಾನಂದವೂ ಆಗಿರುವದಕ್ಕಾಗಿ ಸ್ತೋತ್ರ ಯೆರೆ 15:16
788ನಿನ್ನ ವಾಕ್ಯವು ಯಥಾರ್ಥವಾಗಿರುವದಕ್ಕೆ ಸ್ತೋತ್ರ ಕೀರ್ತ 33:4
789ನಿನ್ನ ಕೃಪೆಗಳೆಲ್ಲಾ ನಂಬಿಕೆಯಾಗಿರುವದಕ್ಕಾಗಿ ಸ್ತೋತ್ರ ಕೀರ್ತ 33:4
790ನೀನು ಭಯಂಕರವಾದ ಮಹತ್ಕಾರ್ಯಗಳನ್ನು ಮಾಡುವಾತನಾಗಿರುವದಕ್ಕೆ ಸ್ತೋತ್ರ ಕೀರ್ತ 65:5
791ನೀತಿಗನುಸಾರವಾಗಿ ನಮಗೆ ಸದುತ್ತರವನ್ನು ದಯಪಾಲಿಸುವವನಾಗಿರುವದಕ್ಕಾಗಿ ಸ್ತೋತ್ರ ಕೀರ್ತ 65:5
792ನಿನ್ನ ಕೋಪವೂ ಕ್ಷಣ ಮಾತ್ರವೇ ದೇವಾ ನಿನಗೆ ಸ್ತೋತ್ರ ಕೀರ್ತ 30:5
793ನೀನು ಎಂದು ಸೇಡು ತೀರಿಸಿಕೊಳ್ಳುವವನಲ್ಲ ಅದಕ್ಕಾಗಿ ಸ್ತೋತ್ರ ಕೀರ್ತ 30:5
794ನಿರಂತರ ಕೋಪದಿಂದ ಇರುವವನಲ್ಲ ಅದಕ್ಕಾಗಿ ಸ್ತೋತ್ರ ಕೀರ್ತ 103:9
795ನೀನು ತಪ್ಪು ಹುಡುಕುವವನಲ್ಲ ಅದಕ್ಕಾಗಿ ಸ್ತೋತ್ರ ಕೀರ್ತ 103:9
796ಐಗುಪ್ತ್ಯದ ಚೊಚ್ಚಲವಾದವುಗಳನ್ನು ಸಂಹರಿಸಿದ ದೇವರಿಗೆ ಕೊಂಡಾಟವಾಗಲಿ ಸ್ತೋತ್ರ ಕೀರ್ತ 136:10
797ಸಮುದ್ರವನ್ನು ಒಣಗಿಸಿ ಒಣನೆಲವನ್ನಾಗಿ ಮಾರ್ಪಡಿಸಿದಾತನೇ ಸ್ತೋತ್ರ ಕೀರ್ತ 136:13
798ಸಮುದ್ರವನ್ನು ಛೇದಿಸಿ ಜಲರಾಶಿಗಳ ಮೇಲೆ ತಿಮಿಂಗಿಲಗಳ ತಲೆಯನ್ನು ಜಜ್ಜಿಬಿಟ್ಟಾತನೇ ಸ್ತೋತ್ರ ಕೀರ್ತ74:13
799ಲಿವ್ಯತಾನದ ಶಿರಃಖಂಡನ ಮಾಡಿ ಅಡವಿಯ ಮೃಗಕ್ಕೆ ತಿನ್ನ ಕೊಟ್ಟಾತನೇ ಸ್ತೋತ್ರ ಕೀರ್ತ 74:14
800ಬುಗ್ಗೆ ಹಳ್ಳಗಳನ್ನು ಉಕ್ಕಿಸಿದಾತನೇ ಸ್ತೋತ್ರ ಕೀರ್ತ 74:15
801ಮಹಾನದಿಗಳನ್ನು ಉಕ್ಕಿಸಿದಾತನೇ ಸ್ತೋತ್ರ ಕೀರ್ತ 74:15