802ಕಡಲನ್ನೇ ಸೀಳಿ ದಾರಿ ಮಾಡಿದಾತನೇ ಸ್ತೋತ್ರ ವಿಮೋ 14:17
803ಹಗಲು ಮೋಡದಿಂದಲೂ ಇರುಳು ಬೆಂಕಿಯ ಬೆಳಕಿನಿಂದಲೂ ಅವರನ್ನು ಕರೆದೊಯ್ದಾತನೇ ಸ್ತೋತ್ರ ಕೀರ್ತ 78:14
804ಮರಳುಕಾಡಿನ ಬಂಡೆಯನ್ನು ಸೀಳಿ ಬುಗ್ಗೆಯಿಂದ ನೀರನ್ನು ಚಿಮ್ಮುವಂತೆ ಮಾಡಿ ಅವರಿಗೆ ನೀರನ್ನು ದಯಪಾಲಿಸಿದಾತನೇ ಸ್ತೋತ್ರ ಕೀರ್ತ 78:15
805ಮಾರಾ ಎಂಬಲ್ಲಿನ ನೀರನ್ನು ಮಧುರ ಮಾಡಿದಾತನೇ ಸ್ತೋತ್ರ ವಿಮೊ 15:25
806ದೇವದೂತರ ಆಹಾರ ಮನ್ನವನ್ನು ಕೊಟ್ಟಾತನೇ ಸ್ತೋತ್ರ ಕೀರ್ತ 78:25
807ಫರೋಹನ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಕೆಡವಿ ಬಿಟ್ಟಾತನೇ ಸ್ತೋತ್ರ ಕೀರ್ತ 136:15
808ಯೆರಿಕೋ ಪಟ್ಟಣದ ಗೋಡೆಯನ್ನು ಕೆಡವಿ ಬಿಟ್ಟಾತನೇ ಸ್ತೋತ್ರ ಯೊಹೋ 6:20
809ದೊಡ್ಡ ಅರಸನನ್ನು ಹೊಡೆದು ಹಾಕಿದಾತನೇ ಸ್ತೋತ್ರ ಕೀರ್ತ 136:17
810ಕತ್ತೆಯ ಬಾಯನ್ನು ತೆರೆದಾತನೇ ಸ್ತೋತ್ರ ಅರಣೈ 22:28
811ಸೂರ್ಯನನ್ನು ಗಿಬ್ಯೋನಿನಲ್ಲೂ ಚಂದ್ರನನ್ನು ಅಯ್ಯಾಲೋನ್ ತಗ್ಗಿನಲ್ಲಿ ನಿಲ್ಲಿಸಿದಾತನೇ ಸ್ತೋತ್ರ ಯೆಹೋ 10:12
812ನಿವಾಸಿಗಳ ದುಷ್ಟತನಕ್ಕಾಗಿ ನದಿಗಳನ್ನು ಅರಣ್ಯವಾಗುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 107:33
813ಬುಗ್ಗೆಗಳನ್ನು ಒಣನೆಲವನ್ನಾಗಿಯೂ ಮಾಡುವಾತನೇ ಸ್ತೋತ್ರ ಯೆಶಾ 53:5
814ಫಲಭೂಮಿಯನ್ನು ಉಪ್ಪು ನೆಲವಾಗುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 107:34
815ಅರಣ್ಯವನ್ನು ಕೆರೆಯನ್ನಾಗಿಯೂ ಒಣನೆಲವನ್ನು ಬುಗ್ಗೆನ್ನಾಗಿಯೂ ಮಾಡಿದಾತನೇ ಸ್ತೋತ್ರ ಕೀರ್ತ 107:35
816ಬಂಡೆಯನ್ನು ಕೆರೆಯನ್ನಾಗಿ ಮಾಡಿದಾತನೇ ಸ್ತೋತ್ರ ಕೀರ್ತ 114:8
817ಶಿಲೆಯನ್ನು ಬುಗ್ಗೆಯನ್ನಾಗಿ ಮಾರ್ಪಾಡಿಸಿದಾತನೇ ಸ್ತೋತ್ರ ಕೀರ್ತ 114:8
818ಹಸಿದವರ ನಿವಾಸವನ್ನು ನೆಲೆಗೊಳಿಸಿ ಪಟ್ಟಣವನ್ನು ಕಟ್ಟುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 107:35
819ಬಂಜೆಯು ಮಕ್ಕಳೊಂದಿಗೆ ಸಂತೋಷದಿಂದ ವಾಸಿಸುವಂತೆ ಮಾಡುವಾತನೇ ಸ್ತೋತ್ರ ಕೀರ್ತ 139:9
820ಬಿದ್ದುಹೋದದನ್ನು ಕಟ್ಟುವಾತನೇ ಸ್ತೋತ್ರ ಯೆಹೆ 36:36
821ಹಾಳಾದದ್ದನ್ನು ಬೆಳೆಯಿಸುವಾತನೇ ಸ್ತೋತ್ರ ಯೆಹೆ 36:36
822ತಪ್ಪಿಸಿಕೊಂಡದ್ದನ್ನು ಹುಡುಕುವವನೇ ಸ್ತೋತ್ರ ಯೆಹೆ 34:16
823ದುರ್ಬಲವಾದದ್ದನ್ನು ಬಲಗೊಳಿಸುವಾತನೇ ಸ್ತೋತ್ರ ಯೆಹೆ 34:16
824ಓಡಿಸಿದ್ದನ್ನು ಮಂದೆಗೆ ಸೇರಿಸುವಾತನೇ ಸ್ತೋತ್ರ ಯೆಹೆ 34:16
825ಮುರಿದ ಅಂಗವನ್ನು ಕಟ್ಟುವಾತನೇ ಸ್ತೋತ್ರ ಯೆಹೆ 34:16
826ಗಾಳಿಯಲ್ಲಿ ಮರೆಯಂತೆಯೂ ಇರುವಾತನೇ ಸ್ತೋತ್ರ ಯೆಶಾ 32:2
827ಮರಭೂಮಿಯಲ್ಲಿ ನೀರಿನ ಕಾಲುವೆಗಳ ಪ್ರಕಾರ ಇರುವಾತನೇ ಸ್ತೋತ್ರ ಯೆಶಾ 32:2
828ಅತಿವೃಷ್ಟಿಯಲ್ಲಿ ಆವರಣದ ಹಾಗೆ ಇರುವಾತನೇ ಸ್ತೋತ್ರ ಯೆಶಾ 32:2
829ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿರುವಾತನೇ ಸ್ತೋತ್ರ ಯೆಶಾ 32:2
830ಕುರುಡರಿಗೆ ಕಣ್ಣು ಕೊಡುವಾತನೇ ಸ್ತೋತ್ರ ಕೀರ್ತ 146:8
831ಸೋತವನಿಗೆ ತ್ರಾಣವನ್ನು ಕೊಡುವಾತನೇ ಸ್ತೋತ ಯೆಶಾ 40:29
832ನಿರ್ಬಲನಿಗೆ ಬಹುಬಲವನ್ನು ದಯಪಾಲಿಸುವಾತನೇ ಸ್ತೋತ್ರ ಯೆಶಾ 40:29
833ಬತ್ತಿದ ಭೂಮಿಯಲ್ಲಿ ಮಳೆಗರೆದು ದಾಹವುಳ್ಳವನ ಮೇಲೆ ತಣ್ಣೀರನ್ನು ಹೊಯುವಾತನೇ ಸ್ತೋತ್ರ ಯೆಶಾ 40:3
834ಒಣನೆಲದಲ್ಲಿ ಕಾಲುವೆಗಳನ್ನು ಹರಿಸುವಾತನೇ ಸ್ತೋತ್ರ ಯೆಶಾ 40:3
835ಎಲ್ಲರನ್ನು ಕರುಣಿಸುವಾತನೇ ಸ್ತೋತ್ರ ಕೀರ್ತ 145:9
836ಎಲ್ಲಾ ಜೀವಿಗಳಿಗೆ ಆಹಾರವನ್ನು ತಕ್ಕ ಸಮಯದಲ್ಲಿ ಕೊಡುವಾತನೇ ಸ್ತೋತ್ರ ಕೀರ್ತ 145:15
837ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಆಹಾರವನ್ನೂ ಕೊಡುವಾತನೇ ಸ್ತೋತ್ರ 2 ಕೊರಿ 9:10