881ತಂದೆಗಳ ದೋಷಫಲವನ್ನು ಅವರ ತರುವಾಯ ಮಕ್ಕಳ ಮಡಲಿಗೆ ಹಾಕುವಾತನೇ ಸ್ತೋತ್ರ ಯೆರೆ 32:18
882ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಪಡುವವರಿಗೆ ಸಹಾಯ ಮಾಡುವದಕ್ಕೆ ಶಕ್ತನಾಗಿರುವಾತನೇ ಸ್ತೋತ್ರ ಇಬ್ರಿ 2:18
883ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾದವನೇ ಸ್ತೋತ್ರ ಇಬ್ರಿ 7:25
884ತನ್ನ ಪ್ರಭಾವದ ಸಮಕ್ಷಮದಲ್ಲಿ ನಮ್ಮನ್ನು ನಿರ್ದೋಷಿಗಳನ್ನಾಗಿ ಹರ್ಷದಿಂದ ನಿಲ್ಲುವಂತೆ ಮಾಡುವಾತನೇ ಸ್ತೋತ್ರ ಯೂದ 1:24
885ಮಹಿಮೆಯೊಡನೆ ನಿನ್ನ ಸನ್ನಿಧಾನದಲ್ಲಿ ನಮ್ಮನ್ನು ನಿರ್ದೋಷಿಗಳನ್ನಾಗಿ ನಿಲ್ಲುವಂತೆ ಮಾಡಿದಾತನೇ ಸ್ತೋತ್ರ ಯೂದ 1:24
886ಜನಸಮೂಹದೊಡನೆ ಹರ್ಷಧ್ವನಿಮಾಡುತ್ತಾ ಸ್ತೋತ್ರ ಪದಗಳನ್ನು ಹಾಡುವಂತೆ ಮಾಡಿದಾತನೇ ಸ್ತೋತ್ರ ಕೀರ್ತ 42:4
887ನನಗಾಗಿ ಕಾರ್ಯವನ್ನು ಸಿದ್ಧಿಗೆ ತರುವಾತನೇ ಸ್ತೋತ್ರ ಕೀರ್ತ 57:2
888ನಿರಂತರವೂ ನಮ್ಮನ್ನು ನಡೆಸುವವನಾಗಿರುವಾತನೇ ನಿನಗೆ ಸ್ತೋತ್ರ ಕೀರ್ತ 48:14
889ನುಡಿದ ಮಾತ್ರದಿಂದ ಸಮಸ್ತವನ್ನು ಉಂಟುಮಾಡಿ ಆಜ್ಞಾಪನೆಯಿಂದ ಸಮಸ್ತವನ್ನು ಸ್ಥಾಪನೆ ಮಾಡಿದಾತನೇ ಸ್ತೋತ್ರ ಕೀರ್ತ 33:9
890ಕರ್ತನೇ ನಿನ್ನ ಕಾರ್ಯಗಳೂ ಕ್ರಿಯೆಗಳೂ ಎಷ್ಟೋ ಅಪಾರವಾದವುಗಳು, ಅವುಗಳನ್ನೆಲ್ಲಾ ನಿನ್ನ ಜ್ಞಾನದಿಂದ ಉಂಟುಮಾಡಿದ್ದಿ ಸ್ತೋತ್ರ ಯೆಶಾ 53:5
891ಭೂಮ್ಯಾಕಾಶಗಳನ್ನು ಉಂಟುಮಾಡಿದಾತನೇ ಸ್ತೋತ್ರ ಯೆಶಾ 53:5
892ಬೆಳಕನ್ನು ಉಂಟುಮಾಡಿದಾತನೇ ಸ್ತೋತ್ರ ಯೆಶಾ 53:5
893ವಿಸ್ತಾರವಾದ ಆಕಾಶವನ್ನೂ ಸಮುದ್ರವನ್ನೂ ಉಂಟುಮಾಡಿದಾತನೇ ಸ್ತೋತ್ರ ಯೆಶಾ 53:5
894ಹೂವುಗಳು, ಫಲಗಳು, ಕಾಯಿಪಲ್ಯ ಗೆಡ್ಡೆಗೆಣಸು ಇವುಗಳನ್ನು ಕೊಡುವ ಮರಗಿಡಗಳ ಸೃಷ್ಠಿಗೆ ಮೂಲನಾದಾತನೇ ಸ್ತೋತ್ರ ಯೆಶಾ 53:5
895ಸೂರ್ಯಚಂದ್ರ ನಕ್ಷತ್ರ ಇವುಗಳಿಗಾಗಿ ಸ್ತೋತ್ರ ಯೆಶಾ 53:5
896ಸಮುದ್ರ ಜಲಚರ ಪ್ರಾಣಿಗಳು ಮತ್ತು ಮೀನುಗಳಿಗಾಗಿ ಸ್ತೋತ್ರ ಯೆಶಾ 53:5
897ಪಕ್ಷಿಗಳು, ಸಾಧುಪ್ರಾಣಿಗಳು, ಕಾಡುಪ್ರಾಣಿಗಳು, ಹರಿದಾಡುವ ಕ್ರಿಮಿ ಕೀಟಗಳಿಗಾಗಿ ಸ್ತೋತ್ರ  
898ಮಣ್ಣಿನಿಂದ ಮನುಷ್ಯನನ್ನು ಉಂಟುಮಾಡಿ ಜೀವಶ್ವಾಸವನ್ನು ಊದಿ ಬಾಳಸಂಗಾತಿಯನ್ನು ಉಂಟುಮಾಡಿದಾತನೇ ಸ್ತೋತ್ರ 
899ನೀನು ಉಂಟುಮಾಡಿದ ಕಾಲಗಳಿಗಾಗಿ ಇಬ್ಬನಿ ಮೋಡ ಬಿಸಿಲಿಗಾಗಿ ಉಕ್ಕಿಬರುವ ಬುಗ್ಗೆಗಳಿಗಾಗಿ ಸ್ತೋತ್ರ - 
900ನದಿಗಳಿಗಾಗಿ ಕಾಲುವೆ ಕೆರೆ ಕೊಳಗಳಿಗಾಗಿ ಮರುಭೂಮಿ ಹಿಮಪ್ರದೇಶಕ್ಕಾಗಿ ಸ್ತೋತ್ರ 
901ಪರ್ವತ ಹಳ್ಳ ದಿಣ್ಣೆ ತಗ್ಗು ಮರುಭೂಮಿ ಹಿಮಪ್ರದೇಶಕ್ಕಾಗಿ ಸ್ತೋತ್ರ 
902ಕಾಡುಗಳಿಗಾಗಿ ಗುಹೆಗಳಿಗಾಗಿ ನೆಲದಲ್ಲಿನ ಖನಿಜ ಸಂಪತ್ತುಗಳಿಗಾಗಿ ಆಸ್ತಿಭಾರಕ್ಕಾಗಿ ಎಣ್ಣೆ ಉಕ್ಕುವ ಬುಗ್ಗೆಗಳಿಗಾಗಿ ಜ್ವಾಲಾಮುಖಿಗಾಗಿ ಸ್ತೋತ್ರ