913 ಮೀನಿನ ಬಾಯಿಯ ಮೂಲಕ ರೂಪಾಯಿಯನ್ನು ಒದಗಿಸಿದಾತನೇ ಸ್ತೋತ್ರ ಮತ್ತಾ 17:27
914 ರಕ್ತ ಕುಸುಮ ರೋಗಿಯನ್ನು, ಪೇತ್ರನ ಅತ್ತೆಯನ್ನು ಜ್ವರದಿಂದ ಸ್ವಸ್ಥಮಾಡಿದಾತನೇ ಸ್ತೋತ್ರ ಮತ್ತಾ 9:22
915 5 ರೊಟ್ಟಿ 2 ಮೀನುಗಳಿಂದ ಐದುಸಾವಿರ ಜನರಿಗೆ ಊಟಮಾಡಿಸಿ ಮಿಕ್ಕ ತುಂಡುಗಳಿಂದ 12 ಪುಟ್ಟಿ ತುಂಬುವಂತೆ ಅದ್ಭುತ ಮಾಡಿದಾತನೇ ಸ್ತೋತ್ರ ಮತ್ತಾ 14:20
916 ಏಳು ರೊಟ್ಟಿ ಮತ್ತು ಕೆಲವು ಸಣ್ಣ ಮೀನುಗಳಿಂದ ನಾಲ್ಕು ಸಾವಿರ ಜನರಿಗೆ ಊಟಮಾಡಿಸಿದಾತನೇ ಸ್ತೋತ್ರ ಮತ್ತಾ 15:38
917 ಮಹಾಯಾಜಕನ ಆಳಾದ ಮಲ್ಕನ ಕತ್ತರಿಸಿದ ಕಿವಿಯನ್ನು ಸರಿಪಡಿಸಿದಾತನೇ ಸ್ತೋತ್ರ ಲೂಕ 22:51
918 ನಿನ್ನನ್ನು ಕೊಲ್ಲಬೇಕೆಂದಿದ್ದವರ ಮಧ್ಯದಲ್ಲಿ ಅದ್ಭುತವಾಗಿ ಹೊರಟು ಹೋದ ಯೇಸುವೇ ಸ್ತೋತ್ರ ಲೂಕ 4:30
919 ನಿನ್ನನ್ನು ಹಿಡಿಯಲು ಬಂದ ಸೈನಿಕರನ್ನು ಹಿಂದೆ ಸರಿದು ನೆಲದ ಮೇಲೆ ಬೀಳುವಂತೆ ಮಾಡಿದ ಯೇಸುವೇ ಸ್ತೋತ್ರ ಯೋಹಾ 18:6
920 ದೆವ್ವವನ್ನು ಗದರಿಸಿ ಮೂರ್ಛಾರೋಗಿಯನ್ನು ವಾಸಿಮಾಡಿದ ಯೇಸುವೇ ಸ್ತೋತ್ರ ಮತ್ತಾ 17:18
921 ನಿನ್ನ ಶಾಪಕ್ಕೊಳಗಾದ ಅಂಜೂರದ ಮರ ಒಣಗಿಹೋದದ್ದಕ್ಕಾಗಿ ಸ್ತೋತ್ರ ಮತ್ತಾ 21:20
922 ಮನುಷ್ಯರ ಪಾಪದ ಹೃದಯವನ್ನು ನಿನ್ನ ಪರಿಶುದ್ಧ ರಕ್ತದಿಂದ ತೊಳೆದು ಅವನನ್ನು ನೂತನ ಸೃಷ್ಠಿಯಾಗಿ ಮಾಡಿದಾತನೇ ಈ ಮಹತ್ವಕ್ಕಾಗಿ ಸ್ತೋತ್ರ 2 ಕೊರಿ 5:17
923 ಸತ್ಯವೇದದಲ್ಲಿರುವ ನಿನ್ನ ವಾಗ್ದಾನಗಳಿಗಾಗಿ ಸ್ತೋತ್ರ ಅಪ್ಪಾ ಯೇಸುವೇ ನಿನಗೆ ಸ್ತೋತ್ರ 
924 ನನ್ನನ್ನು, ಬೇಟೆಗಾರನ ಬಲೆಯಿಂದಲೂ ಮರಣಕರವಾದ ವ್ಯಾಧಿಯಿಂದಲೂ ತಪ್ಪಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:3
925 ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:4
926 ಆತನ ಸತ್ಯತೆಯೂ ನಿನಗೆ ಖೇಡ್ಯವೂ ಗುರಾಣಿಯೂ ಆಗಿರುವದಕ್ಕೆ ಸ್ತೋತ್ರ ಕೀರ್ತ 91:4
927 ಇರುಳಲ್ಲಿ ಭಯಹುಟ್ಟಿಸುವ ಯಾವದಕ್ಕೂ ಹಗಲಲ್ಲಿ ಹಾರಿಬರುವ ಬಾಣಕ್ಕೂ ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಹಾನಿಕರವಾದ ಮಧ್ಯಾಹ್ನದ ಕೇಡಿಗೂ ಅಂಜುವ ಕಾರಣವಿಲ್ಲ ಎಂಬುವ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:5