928 ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರು ಸತ್ತು ಬಿದ್ದರೂ ನಿನಗೇನು ತಟ್ಟದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:10
929 ಯಾವ ಕೇಡು ಸಂಭವಿಸದು ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದೂ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:10
930 ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:11
931 ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:12
932 ಸಿಂಹಗಳ ಮೇಲೆ ನಡೆದು ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:23
933 ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು, ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:4
934 ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು, ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:15
935 ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು, ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 91:16
936 ಕರ್ತನು ತನ್ನ ಜನರನ್ನು ಬೇಡವೆಂದು ತಳ್ಳಿಬಿಡುವುದಿಲ್ಲ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 94:14
937 ನಿನ್ನ ಕಷ್ಟಾರ್ಜಿತವನ್ನು ನೀನೇ ಅನುಭವಿಸುವಿ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 128:2
938 ನಿನಗೆ ಶುಭವಿರುವುದು, ಒಳ್ಳೆಯ ಭಾಗ್ಯವಿರುವುದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 128:2
939 ಅಂತ:ಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 128:3
940 ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 128:3
941 ಚೀಯೋನಿನಲ್ಲಿರುವ ಕರ್ತನು ನಿನ್ನನ್ನು ಆಶೀರ್ವದಿಸಲಿ, ಜೀವಮಾನವೆಲ್ಲಾ ಯೆರೂಸಲೇಮಿನ ಸೌಭಾಗ್ಯವನ್ನು ನೋಡುವವನಾಗು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 128:5
942 ಮಕ್ಕಳ ಮಕ್ಕಳನ್ನು ಕಾಣುವವನಾಗು, ಇಸ್ರಾಯೇಲ್ಯರಿಗೆ ಶುಭವಾಗಲಿ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 128:6
943 ನಿನ್ನ ಸಂತತಿಯವರ ಮೇಲೆ ನನ್ನ ಆಶೀರ್ವಾದವನ್ನು ಸುರಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 44:3
944 ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ದ್ಧರಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 49:25
945 ನಿನ್ನ ಮಕ್ಕಳೆಲ್ಲರೂ ಕರ್ತನಿಂದ ಶಿಕ್ಷಿತರಾಗುವರು, ಅವರಿಗೆ ಅಧಿಕ ಸುಕ್ಷೇಮ ಉಂಟಾಗುವುದು, ಮಕ್ಕಳ ಸಮಾಧಾನ ದೊಡ್ಡದಾಗಿರುವುದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 54:13
946 ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯೂ ನಿನ್ನನ್ನು ಬಿಟ್ಟುಹೋಗದು ಎಂದು ನಿನ್ನನ್ನು ಕರುಣಿಸುವ ಕರ್ತನು ಹೇಳುತ್ತಾನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 54:10