947 ನನ್ನ ಕೃಪೆಯೇ ನಿನಗೆ ಸಾಕು, ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ 2ಕೊರಿ 12:9
948 ರಕ್ಷಿಸುವ ಒಳ್ಳೆಯದನ್ನು ಕೊಡುತ್ತೇನೆ, ಇವತ್ತೇ ಕೊಡುತ್ತೇನೆ, ನಿನಗೆ ಎರಡಷ್ಟು ಸುಖವನ್ನು ದಯಪಾಲಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಜೆಕ 9:12
949 ಪ್ರಾಯದ ಸಿಂಹಗಳಾದರೋ ಹೊಟ್ಟೆಗೆ ಇಲ್ಲದೆ ಹಸಿದಾವು, ಕರ್ತನ ಸನ್ನಿಧಾನದಲ್ಲಿ ಬೇಡಿಕೊಳ್ಳುವವರಿಗೆ ಯಾವ ಮೇಲಿಗೂ ಕಡಿಮೆಯಿಲ್ಲ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 34:10
950 ಕರ್ತನು, ನಿನ್ನನ್ನು ಉಪದೇಶಿಸಿ ನಡೆಯ ಬೇಕಾದ ಮಾರ್ಗವನ್ನು ತಿಳಿಸುವೆನು, ನಿನ್ನನ್ನು ಕಟ್ಟಾಕ್ಷಿಸಿ ಆಲೋಚನೆ ಹೇಳುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 32:8
951 ಕಷ್ಟಕಾಲದಲ್ಲಿ ಮೊರೆಯಿಡು, ಬಿಡಿಸುವೆನು. ನನ್ನನ್ನು ನೋಡಿ ಕರೆ, ನಾನು ನಿನ್ನನ್ನು ಬಿಡುಗಡೆ ಮಾಡುವೆನು. ನೀನು ನನ್ನನ್ನು ಮಹಿಮೆಪಡಿಸುವಿ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಕೀರ್ತ 50:15
952 ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ ನಿನಗೆ ತಿಳಿಯದ ಮಹತ್ತಾದ ಗೂಡಾರ್ಥಗಳನ್ನು ಗೋಚರಪಡಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆರೆ 33:3
953 ಬೇಡಿಕೊಳ್ಳಿರಿ, ನಿಮಗೆ ದೊರೆಯುವುದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಮತ್ತಾ 7:7
954 ಹುಡುಕಿರಿ ನಿಮಗೆ ಸಿಕ್ಕುವುದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಮತ್ತಾ 7:7
955 ತಟ್ಟರಿ ನಿಮಗೆ ತೆರೆಯುವುದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಮತ್ತಾ 7:7
956 ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ಮಧ್ಯದಲ್ಲಿ ನಾನು ಇದ್ದೇನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಮತ್ತಾ 18:20
957 ನೋಡಿರಿ ನಾನು ಯುಗದ ಸಮಾಪ್ತಿವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಮತ್ತಾ 28:20