958 ನೀನು ಭಯಪಡಬೇಡ, ನಾನು ನಿನ್ನ ಸಂಗಡ ಇರುತ್ತೇನೆ; ದಿಗ್ಬ್ರಮೆಗೊಳ್ಳದಿರು, ನಾನು ನಿನ್ನ ದೇವರು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 41:10
959 ನಾನು ನಿನ್ನನ್ನು ಬಲಪಡಿಸುತ್ತೇನೆ, ನಿನಗೆ ಸಹಾಯಮಾಡುತ್ತೇನೆ ಎಂಬ ವಾಗ್ದಾನಕ್ಕೆ ಸ್ತೋತ್ರ ಯೆಶಾ 41:10
960 ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಭದ್ರಪಡಿಸುತ್ತೇನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 41:10
961 ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವುದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿರುತ್ತಾನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯಾಕೋ 1:5
962 ಭಯಪಡಬೇಡ, ನಾನು ನಿನ್ನೊಂದಿಗಿರುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 41:13
963 ನಿನ್ನ ಜೀವಮಾನದಲೆಲ್ಲಾ ಒಬ್ಬನೂ ನಿನ್ನ ಮುಂದೆ ನಿಲ್ಲನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಹೋ 1:5
964 ನಾನು ನಿನ್ನನ್ನು ಕೈಬಿಡುವುದಿಲ್ಲ, ತೊರೆಯುವುದಿಲ್ಲ; ಸ್ಥಿರ ಚಿತ್ತನಾಗಿರು, ಧೈಯದಿಂದಿರು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಹೋ 1:6
965 ಒಂದು ಕಾಲ ಉಂಟು, ನಿನ್ನ ನಿರೀಕ್ಷೆ ನಿರರ್ಥಕವಾಗದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಜ್ಞಾನೋ 23:18
966 ಕರ್ತನು ನಿಮಗೋಸ್ಕರ ಯುದ್ದಮಾಡುವನು, ನೀವಂತೂ ಸುಮ್ಮನಿರಿ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ವಿಮೋ 14:14
967 ಇವತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ವಿಮೋ 14:13
968 ಯಾಕೋಬ್ಯರಲ್ಲಿ ಶಕುನ ನೋಡುವುದಿಲ್ಲ, ಇಸ್ರಾಯೇಲ್ಯರಲ್ಲಿ ಕಣಿಕೇಳುವುದಿಲ್ಲ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಅರಣ್ಯ 23:23
969 ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆ ಇಡದೆ ತನ್ನ ಮೊಲೆ ಕೂಸನ್ನು ಮರೆತಾಳು, ನಾನದರೋ ನಿನ್ನನ್ನು ಮರೆಯೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 49:15