970 ಇಗೋ ನನ್ನ ಅಂಗೈಗಳಲ್ಲಿ ನಿನ್ನನ್ನು ಚಿತ್ರಿಸಿದ್ದೇನೆ ನಿನ್ನ ಪೌಳಿಗೋಡೆಗಳು ಸಹ ನನ್ನ ಕಣ್ಣೆದುರಿನಲ್ಲಿವೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 49:16
971 ನಾನು ನಿನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸರಿಮಾಡುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 45:2
972 ನೀನು ಜಲರಾಶಿಯನ್ನು ಹಾದುಹೋಗುವಾಗ ನಾನು ನಿನ್ನ ಸಂಗಡ ಇರುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 43:2
973 ನೀನು ನದಿಯನ್ನು ದಾಟುವಾಗ ಅವು ನಿನ್ನನ್ನು ಮುಣುಗಿಸವು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 43:2
974 ನೀನು ಉರಿಯಲ್ಲಿ ನಡೆಯುವಾಗ ಕಂದದಿರುವಿ ಜ್ವಾಲೆಯು ನಿನ್ನನ್ನು ದಹಿಸದು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 43:2
975 ನೀವು ಅನೇಕ ಜನರಿಗೆ ಸಾಲ ಕೊಡುವಿರೇ ಹೊರತು ಸಾಲ ತೆಗೆದು ಕೊಳ್ಳುವುದಿಲ್ಲ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಧರ್ಮೋ 28:12
976 ಆತನು ಇತರರಿಗೆ ನಿಮ್ಮನ್ನು ಅಧೀನಮಾಡದೆÉ ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವೆನು ನೀವು ಎಲ್ಲರಿಗಿಂತಲೂ ್ಲ ಮೇಲಣವರಾಗಿರೇ ಹೊರತು ಕೆಳಗಣದವರಾಗುವುದಿಲ್ಲ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಧರ್ಮೋ 28:14
977 ನಾನೇ ಕರ್ತನು ನನ್ನನ್ನು ನಿರೀಕ್ಷಿಸಿಕೊಂಡವರು ಆಶಾಭಂಗಪಡರು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೆಶಾ 49:23
978 ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು ಆಗ ನೀನು ರಕ್ಷಣೆ ಹೊಂದುವಿ ನಿನ್ನ ಮನೆಯವರೆಲ್ಲರೂ ರಕ್ಷಣೆಹೊಂದುವರು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಅ.ಕೃ 16:31
979 ನಿತ್ಯ ಜೀವವನ್ನು ಕೊಡುತ್ತೇನೆಂದು ವಾಗ್ದಾನ ಮಾಡಿದ ಕರ್ತನೇ ನಿನಗೆ ಸ್ತೋತ್ರ 1 ಯೋಹಾ 2:25
980 ನಿಶ್ಚಯವಾಗಿ ನಾನು ನಿನ್ನನ್ನು ಆಶೀರ್ವದಿಸೇ ಆಶೀರ್ವದಿಸುವೆನು ನಿನ್ನನ್ನು ಹೆಚ್ಚಿಸೇ ಹೆಚ್ಚಿಸುವೆನು ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಇಬ್ರಿ 6:14
981 ನಾನು ಒಂದು ಸ್ಥಳವನ್ನು ನಿಮಗೋಸ್ಕರ ಸಿದ್ದಮಾಡಲು ಹೋಗುತ್ತೇನೆ ಸಿದ್ದವಾದ ಮೇಲೆ ನಾನು ತಿರುಗಿ ಬಂದು ನಿಮ್ಮನ್ನು ನನ್ನೊಡನೆ ಸೇರಿಸಿಕೊಳ್ಳುವೆನು ಎಂದು ಅಭಯ ಕೊಟ್ಟಿರುವದಕ್ಕಾಗಿ ಸ್ತೋತ್ರ ಯೋಹಾ 14:2,3
982 ಶಾಂತಿಯನ್ನು ನಿಮಗೆ ಬಿಟ್ಟು ಹೋಗುತ್ತೇನೆ ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಯೋಹಾ 14:27
983 ಇಗೋ ಬೇಗನೆ ಬರುತ್ತೇನೆ ಎಂಬ ವಾಗ್ದಾನಕ್ಕಾಗಿ ಸ್ತೋತ್ರ ಆಮೆನ್ ಪ್ರಕ 22:7