181ಕರ್ತನು ನನ್ನ ಕುರುಬನಾಗಿರುವದರಿಂದ ನಾನು ಕೊರತೆ ಪಡುವುದಿಲ್ಲ. ಕಮ್ಮಿಯಾಗುವುದಿಲ್ಲ. ಓಲಾಡುವುದಿಲ್ಲ ಕೀರ್ತ.23:1
182ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ. ವಿಶ್ರಾಂತಿಕರವಾದ ಹುಲ್ಲುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ. ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ. ಕೀರ್ತ.23:2
183ಆತನು ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿ ಮಾರ್ಗದಲ್ಲಿ ನಡಿಸುತ್ತಾನೆ. ಕೀರ್ತ.23:3
184ನಾನು ಕಾರ್ತತ್ತಲಿನ ಕಣ ವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು. ಕರ್ತನು ಯಾವಾಗಲೂ ನನ್ನ ಬಳಿ ಇರುವನು. ಆತನ ದೊಣ್ಣೆಯು ಕೋಲೂ ನನಗೆ ಧೈರ್ಯ ಕೊಡುತ್ತದೆ ಕೀರ್ತ.23:4
185ನನ್ನ ಶತೃಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ. ಕೀರ್ತ.23:5
186ಅಭಿಷೇಕವುಳ್ಳನಾದಾತನಾದ ದೇವರು ನನ್ನ ತಲೆಯನ್ನು ಎಣ್ಣೆಯಿಂದ ಅಭಿಷೇಕಿಸುತ್ತಾನೆ. ನನ್ನ ಪಾತ್ರೆ ತುಂಬಿ ಹೊರಸೂಸುತ್ತದೆ. ಕೀರ್ತ 23:5
187ನನ್ನ ಜೀವಮಾನದಲ್ಲೆಲ್ಲಾ ಶುಭವು ಕೃಪೆಯೂ ನನ್ನನ್ನು ಹಿಂಬಾಲಿಸುವವು ಕೀರ್ತ.23:6
188ನಾನು ಕರ್ತನ ಮಂದಿರದಲ್ಲಿ ನೆಲೆಸಿರುವೆನು. ಕೀರ್ತ.23:6
189ದೇವರು ನನಗೆ ಆಶ್ರಯವೂ ದುರ್ಗವೂ, ಆಪತ್ತು ಕಾಲದಲ್ಲಿ ಅನುಕೂಲವಾದ ಸಹಾಯಕನು. ಕೀರ್ತ 46:1
190ಆದುದರಿಂದ ಭೂಮಿಯು ಮಾರ್ಪಟ್ಟರೂ ಬೆಟ್ಟಗಳು ಸಮುದ್ರದಲ್ಲಿ ಮುಣುಗಿ ಹೋದರೂ ನನಗೇನು ಭಯವಿಲ್ಲ. ಕೀರ್ತ 46:2
191ಸಮುದ್ರವು ಘೋಷಿಸುತ್ತಾ ನೊರೆಯನ್ನು ಕಾರಿದರೇನು? ಅದರ ಅಲ್ಲಕಲ್ಲೋಲಗಳಿಂದಲೂ ಪರ್ವತಗಳು ಕದಲಿದರೇನು? ನಾನು ಭಯಪಡುವುದಿಲ್ಲ ಕೀರ್ತ.46:3
192ಸೇನಾಧೀಶ್ವರನಾದ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಕೀರ್ತ.46:7
193ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೆ ಎಂದು ತಿಳಿದುಕೊಳ್ಳಿರಿ. ಭೂಮಿಯಲ್ಲಿರುವ ಆತನ ನಾಮವನ್ನು ಎತ್ತಿಯೇ ಘನ ಮಹಿಮೆ ಪಡಿಸುತ್ತೇನೆ ಕೀರ್ತ.46:10.
194ನಾನು ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವೆನು. ಕೀರ್ತ.91:1
195ಕರ್ತನು ನನ್ನ ಆಶ್ರಯವು ನನ್ನ ಕೋಟೆಯು ನನ್ನ ದೇವರೂ ನಾನು ನಂಬಿರುವಾತನು ಆಗಿದ್ದಾನೆ. ಕೀರ್ತ.91:2
196ಆತನು ನನ್ನನ್ನು ಬೇಟೆಗಾರನ ಬಲೆಯಿಂದಲೂ, ಮರಣಕರ ವ್ಯಾಧಿಯಿಂದಲೂ ತಪ್ಪಿಸುವವನೂ, ಕೀರ್ತ.91:3
197ಆತನು ನನ್ನನ್ನು ತನ್ನ ರೆಕ್ಕಗಳಿಂದ ಹೊದಗಿಸುವನು. ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ. ಆತನ ಸತ್ಯತೆಯೇ ನನಗೆ ಖೇಡ್ಯವೂ, ಗುರಾಣ ಯೂ ಆಗಿದೆ. ಕೀರ್ತ 91:4
198ಇರುಳಿನಲ್ಲಿ ಭಯಹುಟ್ಟಿಸುವ ಯಾವುದಕ್ಕೂ, ಹಗಲಲ್ಲಿ ಬರುವ ಬಾಣಕ್ಕೂ ನಾನು ಭಯಪಡುವುದಿಲ್ಲ. ಕೀರ್ತ 91:5
199ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಹಾನಿಕರವಾದ ಮದ್ಯಾನ್ಹದ ಕೇಡಿಗೂ ಅಂಜುವ ಕಾರಣವಿಲ್ಲ. ಕೀರ್ತ.91:6
200ನನ್ನ ಮಗ್ಗುಲಲ್ಲಿ ಸಾವಿರ ಜನರೂ, ನನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಸತ್ತುಬಿದ್ದರೂ ನನಗೇನೂ ಕೇಡು ತಟ್ಟದು ಕೀರ್ತ.91:7