201ನಾನು ಅದನ್ನು ಕಣ್ಣಾರೆ ಕಂಡು ದುಷ್ಟರಿಗೆ ಪ್ರತಿ ದಂಡನೆಯುಂಟೆಂಬುದಕ್ಕೆ ಸಾಕ್ಷಿಯಾಗಿರುವೆನಷ್ಟೇ. ಕೀರ್ತ 91:8
202ಕರ್ತನು ನನಗೆ ಆಶ್ರಯ ದುರ್ಗವಾಗಿದ್ದಾನೆ. ಪರಾತ್ಪರನನ್ನು ನಿವಾಸ ಸ್ಥಾನ ಮಾಡಿಕೊಡಿದ್ದಿಯಲ್ಲಾ. ಕೀರ್ತ.91:9
203ಯಾವ ಕೇಡೂ ನನಗೆ ಸಂಭವಿಸದು. ಉಪದ್ರವಗಳು ನನ್ನ ಗುಡಾರದ ಸಮೀಪಕ್ಕೂ ಬಾರದು. ಕೀರ್ತ.91:10
204ನನ್ನ ಮಾರ್ಗದಲ್ಲಿ ನನ್ನನ್ನು ಕಾಯುವುದಕ್ಕೆ ತನ್ನ ದೂತರಿಗೆ ಅಪ್ಪಣೆ ಕೊಡುತ್ತಾನೆ. ಕೀರ್ತ.91:11
205ನನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು. ಕೀರ್ತ.91:12
206ಸಿಂಹ ಸರ್ಪಗಳ ಮೇಲೆ ನಡೆಯುವಿ. ಪ್ರಾಯದ ಸಿಂಹವನ್ನು ಘಟಸರ್ಪವನ್ನು ತುಳಿದುಬಿಡುವಿ ಕೀರ್ತ 92:13
207ನಾನು ಕರ್ತನ ಬಳಿ ಯಾವಾಗಲೂ ಆಸಕ್ತನಾಗಿರುವುದರಿಂದ ಅವನನ್ನು ರಕ್ಷಿಸುವನು ಕೀರ್ತ.59:14
208ನಾನು ಕರ್ತನ ನಾಮವನ್ನು ಅರಿತವನಾಗಿರುವದರಿಂದ ಆತನು ನನ್ನನ್ನು ಉದ್ಧರಿಸುವನು ಕೀರ್ತ.91:14
209ನಾನು ಕರ್ತನನ್ನು ನೋಡಿ ಮೊರೆಯಿಡುವಾಗೆಲ್ಲಾ ಆತನು ಸದುತ್ತರವನ್ನು ದಯಪಾಲಿಸುವನು. ಕೀರ್ತ 91:15
210ಆತನು ಇಕ್ಕಟ್ಟಿನ ಸಮಯದಲ್ಲಿ ಹತ್ತಿರವಿದ್ದು, ಅವರನ್ನು ತಪ್ಪಿಸಿ ಘನಪಡಿಸುವನು. ಕೀರ್ತ 91:15
211ಆತನು ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವನು. ತನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವನು. ಕೀರ್ತ.91:16
212ನನಗೆ ಸಹಾಯ ಬರುವ ಪರ್ವತಗಳ ಕಡೆಗೆ ಕಣ್ಣೆತ್ತಿ ನೋಡುತ್ತೇನೆ. ಕೀರ್ತ 121:1
213ಭೂಮ್ಯಾಕಾಶಗಳನ್ನು ನಿರ್ಮಿಸಿದ ಕರ್ತನಿಂದಲೇ ನನ್ನ ಸಹಾಯ ಬರುವುದು. ಕೀರ್ತ.121:2
214ನನ್ನ ಪಾದಗಳನ್ನು ಕದಲಗೊಡಿಸದಿರಲಿ ನನ್ನನ್ನು ಕಾಯುವಾತನು ತೂಕಡಿಸದಿರಲಿ ಕೀರ್ತ.121:3
215ನನ್ನನ್ನು ನನ್ನ ಕುಟುಂಬವನ್ನು ಕಾಯುವಾತನು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ ಕೀರ್ತ.121:4
216ಕರ್ತನು ನನ್ನನ್ನು ಕಾಯುವನು. ಆತನು ನನ್ನ ಬಲಗಡೆಯಲ್ಲಿ ನೆರಳಿನಂತಿರುವನು. ಕೀರ್ತ.121:5
217ಹಗಲಲ್ಲಿ ಸೂರ್ಯನು, ಇರುಳಿನಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವುದಿಲ್ಲ. ಕೀರ್ತ.121:6
218ಕರ್ತನು ನನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು. ನನ್ನ ಪ್ರಾಣವನ್ನು ಕಾಯುವನು. ಕೀರ್ತ.121:7
219ಕರ್ತನು ನಾನು ಹೋಗುವಾಗಲೂ ಬರುವಾಗಲೂ ಇಂದಿನಿಂದ ಸದಾಕಾಲವೂ ಕರ್ತನು ನನ್ನನ್ನು ಕಾಪಾಡುವನು . ಕೀರ್ತ.121:8
220ಧರ್ಮೋಪದೇಶಕಾಂಡದಲ್ಲಿನ ನನ್ನ ವಿಶ್ವಾಸದ ಅರಿಕೆಗಳು