221ನನ್ನ ದೇವರಾದ ಕರ್ತನು ನನ್ನನ್ನು ಹೆಚ್ಚಿಸಿದ್ದರಿಂದ ನಾನು ಹೆಚ್ಚಿ ಆಕಾಶದ ನಕ್ಷತ್ರಗಳಷ್ಟಾಗಿದ್ದೀನಲ್ಲಾ. ಧರ್ಮೋ. 1:10
222ನಾನು ಈಗ ಇರುವುದಕ್ಕಿಂತಲೂ ಇನ್ನು ಸಾವಿರದಷ್ಟಾಗುವಂತೆ ನನ್ನ ಪಿತೃಗಳ ದೇವರಾದ ಕರ್ತನು ನನ್ನನ್ನು ಆಶೀರ್ವದಿಸಿದನು. ಧರ್ಮೋ.1:13
223ಒಬ್ಬ ಮನುಷ್ಯನು ತನ್ನ ಮಗುವನ್ನು ಹೊತ್ತುಕೊಂಡಂತೆ ಕರ್ತನು ಇದುವರೆಗೂ ನನ್ನನ್ನು ಹೊತ್ತನಲ್ಲವೇ. ಕೊನೆವರೆಗೂ ಹೊತ್ತುಕೊಂಡು ನಡಿಸುತ್ತಾನೆ ಧರ್ಮೋ.1:31
224ನನ್ನ ದೇವರಾದ ಕರ್ತನು ತನ್ನ ಕೈಯಿಂದ ಆಶೀರ್ವದಿಸಿಕೊಂಡು ಬರುವನು. ಕರ್ತನು ನನ್ನೊಡನಿರುವುದರಿಂದ ನನಗೆ ಒಂದೂ ಕೊರತೆಯಾಗುವದಿಲ್ಲ. ಧರ್ಮೋ.2:7
225ನಾನು ನನ್ನ ಶತ್ರುಗಳಿಗೆ ಭಯಪಡುವದಿಲ್ಲ. ಯಾಕೆಂದರೆ ನನ್ನ ದೇವರಾಗಿರುವ ಕರ್ತನು ತಾನೇ ನನಗಾಗಿ ಯುದ್ಧ ಮಾಡುವನು. ಧರ್ಮೋ.3:22
226ನಮ್ಮ ಕರ್ತನಿಗೆ ಮೊರೆಯಿಡುವಾಗೆಲ್ಲಾ ಆತನು ನನಗೆ ಸಮೀಪವಾಗಿಯೇ ಇದ್ದಾನೆ. ಇಂಥ ದೇವರು ಹೀಗೆ ಸಮೀಪವಾಗಿ ಹೊಂದಿರುವೆವು. ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪಿಸುವನು? ಧರ್ಮೋ.4:7
227ನಾನು ನನ್ನ ದೇವರಾಗಿರುವ ಕರ್ತನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸುತ್ತೇನೆ. ಧರ್ಮೋ.6:5
228ನಾನು ಕೂಡಿಸದ ಉತ್ತಮ ವಸ್ತುಗಳಿಂದ ತುಂಬಿದ ಮನೆಗಳನ್ನೂ ನಾನು ಅಗಿಯುವ ನೀರು ಗುಂಡಿಗಳನ್ನು ನಾನು ಬೆಳೆಸದ ದ್ರಾಕ್ಷಿ ತೋಟಗಳನ್ನು ಎಣ್ಣೆ ಮರಗಳನ್ನು ಆತನು ನನಗೆ ದಯಪಾಲಿಸುತ್ತಾನೆ.
229ನಾನು ನನ್ನ ದೇವರಾಗಿರುವ ಕರ್ತನಿಗೆ ಪರಿಶುದ್ಧ ಜನಾಂಗವು, ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನನ್ನ ದೇವರಾಗಿರುವ ಕರ್ತನು ನನ್ನನ್ನು ತನಗೆ ಸ್ವಂತವಾಗಿರುವುದಕ್ಕಾಗಿ ಆದುಕೊಂಡನು. ಧರ್ಮೋ.7:6
230ಕರ್ತನು ನನ್ನನ್ನು, ನನ್ನ ಸಂತಾನವನ್ನು ವ್ಯವಸಾಯವನ್ನು, ನನಗಿರುವ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನೂ, ನನ್ನ ದನ, ಕುರಿಗಳನ್ನೂ ಆಶೀರ್ವದಿಸುವನು ಧರ್ಮೋ.7:13
231ಸಕಲ ಜನಾಂಗಗಳಲ್ಲಿ ನಾನು ಆಶೀರ್ವದಿಸಲ್ಪಟ್ಟಿದ್ದೇನೆ. ನನ್ನ ಸಕಲ ಮೃಗ ಜೀವಿಗಳಿಗೂ ಹೆಣ್ಣುಗಳಾಗಲಿ ಗಂಡುಗಳಲ್ಲಾಗಲಿ ಬಂಜೆತನವಿರುವುದಿಲ್ಲ. ಧರ್ಮೋ.7:11
232ಕರ್ತನು ಸಕಲ ವ್ಯಾಧಿಗಳನ್ನು ನನ್ನಿಂದ ತೊಲಗಿಸುವನು. ಐಗುಪ್ತ ದೇಶದಲ್ಲಿ ಬಾಧಿಸಿದ ರೋಗಗಳು ಒಂದೂ ನನ್ನನ್ನು ಮುಟ್ಟಗೊಡದಂತೆ ನನ್ನನ್ನು ಕಾಯ್ದುಕೊಳ್ಳುವನು ಧರ್ಮೋ.7:15
233ಕರ್ತನು ನನಗೆ ಐಶ್ವರ್ಯ ಸಂಪಾದಿಸಲು ಬಲವನ್ನು ತಂದುಕೊಡುವಾತನಾಗಿದ್ದಾನೆ. ಧರ್ಮೋ.8:18
234ನನ್ನ ದೇವರಾಗಿರುವ ಕರ್ತನು ನನ್ನ ಮುಂಭಾಗದಲ್ಲಿ ಹೊರಟು ಹೋಗುವನು. ಆತನು ದಹಿಸುವ ಅಗ್ನಿಯಂತೆ ಶತ್ರುಗಳನ್ನು ದಹಿಸಿ ಬಿಡುವನು. ಅವರನ್ನು ನನ್ನ ಮುಂಭಾಗದಲ್ಲಿ ಸೋತುಹೋಗುವಂತೆ ಬೀಳ ಮಾಡುವನು. ಧರ್ಮೋ.9:3
235ನಾನು ಸ್ವತಂತ್ರಿಸಿಕೊಳ್ಳಲು ಹೋಗುವ ದೇಶ ಬೆಟ್ಟಗಳು ಹಳ್ಳ ದಿಣ್ಣೆಗಳುಳ್ಳ ದೇಶ. ಅದು ಆಕಾಶದ ಮಳೆಯ ನೀರನ್ನು ಕುಡಿಯುವ ದೇಶ ಧರ್ಮೋ.11:11
236ಸಂವತ್ಸರದ ಪ್ರಾರಂಭ ಮೊದಲುಗೊಂಡು ಕೊನೆಯವರೆಗೂ ಯಾವಾಗಲೂ ನನ್ನ ದೇವರಾಗಿರುವ ಕರ್ತನ ಕಣ್ಣುಗಳು ನನ್ನ ಮೇಲೆಯೂ, ಕರ್ತನು ಕೊಡುವ ಸ್ವತಂತ್ರತೆಯ ಮೇಲೆಯೂ ಇಟ್ಟಿರುವನು. ಧರ್ಮೋ.12:12
237ಕರ್ತನು ನನ್ನನ್ನು ಆಶೀರ್ವದಿಸಿದ್ದರಿಂದ ಅನೇಕ ಜನಗಳಿಗೆ ಸಾಲ ಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ. ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವದಿಲ್ಲ. ಧರ್ಮೋ.15:6
238ಕರ್ತನು ಉಂಟು ಮಾಡದ ಬೇರೆ ಎಲ್ಲಾ ಜನಾಂಗಗಳಿಗಿಂತಲೂ ನಮಗೆ ಹೆಚ್ಚಾದ ಕೀರ್ತಿ ಘನಮಾನಗಳನ್ನು ಕೊಟ್ಟು ಉನ್ನತ ಸ್ಥಿತಿಯಲ್ಲಿರಿಸುವನು. ಧರ್ಮೋ.26:19
239ಕರ್ತನು ನಮ್ಮನ್ನು ಊರಲ್ಲಿಯೂ, ಅಡವಿಯಲ್ಲಿಯೂ ಆಶೀರ್ವದಿಸುವನು. ಧರ್ಮೋ.28:3
240ಕರ್ತನು ನಮ್ಮ ಸಂತಾನವನ್ನು ವ್ಯವಸಾಯ, ದನಕುರಿಗಳನ್ನು ಮುಂತಾದ ಪಶುಗಳನ್ನು ಆಶೀರ್ವದಿಸುವನು. ಧರ್ಮೋ.28:4