241ನಮ್ಮ ಪುಟ್ಟಿಗಳಿಗೂ ಕೋಣವಿಗಳಿಗೂ ಶುಭವುಂಟಾಗುವುದು. ಧರ್ಮೋ.28:4
242ನಾವು ಕೆಲಸಕ್ಕೆ ಹೋಗುವಾಗಲೂ ಶುಭವುಂಟಾಗುವದು. ಧರ್ಮೋ.28:6
243ನಮಗೆ ವಿರೋಧವಾಗಿ ಏಳುವ ನಮ್ಮ ಶತ್ರುಗಳನ್ನು ಕರ್ತನು ನಮ್ಮ ಮುಂಭಾಗದಲ್ಲಿ ಸೋತು ಹೋಗುವಂತೆ ಮಾಡುವನು. ಧರ್ಮೋ.28:7
244ಶತ್ರುಗಳು ಒಂದೇ ದಾರಿಯಿಂದ ನಮ್ಮ ಮೇಲೆ ಬಂದರು ಏಳು ದಾರಿಗಳಿಂದ ಓಡಿ ಹೋಗುವರು ಧರ್ಮೋ.28:7
245ನಾವು ನಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಅನುಸರಿಸಿ ಆತನ ಮಾರ್ಗದಲ್ಲಿ ನಡೆಯುವಾಗ ಕರ್ತನು ತಾನು ಆಜ್ಞೆ ಮಾಡಿದ ಹಾಗೆಯೇ ನಮ್ಮನ್ನು ಪರಿಶುದ್ಧ ಜನಾಂಗವಾಗಿ ಸ್ಥಾಪಿಸುವನು. ಧರ್ಮೋ.28:9
246ಭೂಮಿಯಲ್ಲಿರುವ ಎಲ್ಲಾ ಜನಗಳೂ ನಮ್ಮನ್ನು ಕರ್ತನ ಜನರೆಂದು ತಿಳಿದುಕೊಂಡು ನಮಗೆ ಭಯಪಡುವರು. ಧರ್ಮೋ.28:10
247ಕರ್ತನು ನನ್ನ ಸಂತಾನ ಪಶು ವ್ಯವಸಾಯಗಳ ಸಮೃದ್ಧಿಯುಂಟು ಮಾಡುವನು. ಧರ್ಮೋ.28:11
248ಕರ್ತನು ಆಕಾಶದಲ್ಲಿರುವ ತನ್ನ ಜನ ನಿಧಿಯನ್ನು ತೆರೆದು ನಮ್ಮ ದೇಶದ ಮೇಲೆ ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ ನಮ್ಮ ಎಲ್ಲಾ ವ್ಯವಸಾಯವನ್ನು ಸಫಲ ಮಾಡುವನು. ಧರ್ಮೋ.28:12
249ನಾನು ಧೈರ್ಯಗೊಂಡು ಒಂದೇ ಮನಸ್ಸಿನಿಂದಿರುತ್ತೇನೆ. ನನ್ನ ಶತ್ರುಗಳಿಗೆ ಅಂಜುವುದಿಲ್ಲ, ಕಳವಳಪಡುವದಿಲ್ಲ. ಧರ್ಮೋ.31:6
250ನನ್ನ ಕರ್ತನಾಗಿರುವವನು ತಾನೇ ನಿನ್ನ ಮುಂದುಗಡೆ ಹೋಗುವನು. ಆತನೇ ನಿನ್ನ ಸಂಗಡವಿರುವನು. ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದಿಲ್ಲ. ಕೈಬಿಡುವುದಿಲ್ಲ, ಅಂಜಬೇಡ ಧೈರ್ಯದಿಂದಿರು ಧರ್ಮೋ.31:6,8
251ಭೂಮಿಯ ಎತ್ತರವಾದ ಪ್ರದೇಶಗಳ ಮೇಲೆ ಹತ್ತಿಸಿ ಅವರಿಗೆ ವ್ಯವಸಾಯ ವೃದ್ಧಿಯನ್ನುಂಟು ಮಾಡಿ ಉಣ್ಣುವಂತೆ ಮಾಡಿದನು. ಧರ್ಮೋ.31:13
252ಬಂಡೆಯ ಮೇಲೆ ಜೇನುಗಿರಿಯಿಂದಲೂ ಎಣ್ಣೆಯು ದೊರೆಯುವಂತೆ ಮಾಡಿ ಉಣ್ಣುವಂತೆ ಮಾಡಿದನು. ಧರ್ಮೋ.32:13
253ನಾನು ಕರ್ತನಿಗೆ ಪ್ರಿಯನಾದವನೂ ಆತನೊಡನೆ ಸುಖವಾಗಿ ತಂಗಿರುವೆ. ಆತನು ಯಾವಾಗಲೂ ಕಾಪಾಡಿ ನಿರ್ಭಯವಾಗಿ ವಾಸಿಸುವಂತೆ ಮಾಡಿದನು. ಧರ್ಮೋ.33:12
254ಕರ್ತನಿಂದ ನಾನು ಆಶೀರ್ವದಿಸಲ್ಪಟ್ಟವನು. ಮೇಲಿನ ಆಕಾಶದಿಂದುಂಟಾಗುವ ಮಂಜು ಕೆಳಗಣ ಸಾಗರದ ಸೆಲೆಗಳಿಂದಲೂ ಆತನು ನನ್ನನ್ನು ಆಶೀರ್ವದಿಸುವನು. ಧರ್ಮೋ.33:13
255ಸೂರ್ಯನಿಂದ ಪರಿಪಕ್ವವುಂಟಾಗುವಂತೆ ಮಾಡುವ ಫಲಗಳಿಂದಲೂ, ಚಂದ್ರನಿಂದ ಪರಿಪಕ್ವವುಂಟಾಗುವ ಸುಂದರವಾದ ಫಲಗಳಿಂದಲೂ ನನ್ನನ್ನು ಆಶೀರ್ವದಿಸುವನು. ಧರ್ಮೋ.33:14
256ಅನಾದಿಯಾದ ಪರ್ವತಗಳ ಉತ್ಪನ್ನ, ಶಾಶ್ವತವಾದ ಬೆಟ್ಟಗಳಿಂದುಂಟಾಗುವ ಮೇಲು ಭೂಮಿಯಲ್ಲಿನ ಸಮೃದ್ಧಿಯಾಗಿ ಬೆಳೆಯುವ ಫಲ ಇವೆಲ್ಲವುಗಳಲ್ಲಿ ಶ್ರೇಷ್ಟವಾದುದ್ದರಿಂದ ನನ್ನನ್ನು ಆಶೀರ್ವದಿಸುವನು. ಧರ್ಮೋ.33:15-16
257ನನ್ನ ಅಲಂಕಾರವು ನನ್ನ ಕೋಡುಗಳು ಕಾಡುಕೋಣದ ಕೊಂಬುಗಳಂತಿರುವುದು. ಧರ್ಮೋ.33:17
258ನಿಮ್ಮ ಕೋಟೆಯ ಬಾಗಿಲುಗಳಿಗೆ ಕಬ್ಬಿಣದ ಮತ್ತು ತಾಮ್ರದ ಅಗುಳಿಗಳಿರುವವು. ನೀವು ಇರುವವರೆಗೂ ನಿಮಗೆ ಸೌಖ್ಯವು ಇರುವದು. ಧರ್ಮೋ.33:26
259ನಮಗೆ ಸಹಾಯಕನಾಗಿ ಆಕಾಶವನ್ನೇರಿ ಮೇಘರೂಢನಾಗಿ ಮಹಾಗಂಭೀರದಿಂದ ನಮ್ಮ ಸಹಾಯಕ್ಕೆ ಬರುವನು ಧರ್ಮೋ.33:26
260ಆದಿಯಿಂದಲೂ ನಮಗೆ ನಿವಾಸಸ್ಥಾನ. ಸದಾ ದೇವರ ಹಸ್ತವೇ ನಮಗೆ ಆಧಾರ ಧರ್ಮೋ.33:27