261ಇಸ್ರಾಯೇಲ್ಯರಾದ ನಾವು ಎಷ್ಟೋ ಧನ್ಯರು. ನಮ್ಮಷ್ಟು ಬಾಗ್ಯವಂತರು ಯಾರಿದ್ದಾರೆ? ಧರ್ಮೋ.33:29
262ಕರ್ತನು ನಮ್ಮನು ಕಾಯುವ ಢಾಲು, ನಮ್ಮ ಗೌರವವನ್ನು ಕಾಪಾಡುವ ಕತ್ತಿಯು ಆಗಿದ್ದಾನೆ. ಆದುದರಿಂದ ನಮ್ಮ ಮುಂದೆ ಮುದುರಿಕೊಳ್ಳುತ್ತಾರೆ. ನಾವು ಅವರಿಗಿದ್ದ ಎತ್ತರವಾದ ಸೀಮೆಯಲ್ಲಿ ಜಯಶಾಲಿಗಳಾಗಿ ಸಂಚರಿಸುತ್ತೇವೆ. ಧರ್ಮೋ.33:29
263ನಾನು ಯೇಸು ಕ್ರಿಸ್ತನ ರಕ್ತದ ಕೋಟೆಯೊಳಗೆ
264ಗೋಲ್ಗೋಥಾ ಗುಡ್ಡದ ಮೇಲಿರುವ ಕಲ್ವಾರಿ ಶಿಲುಬೆಯ ಬಳಿ ಬಂದು ನಿಂತಿರುವೆ.
265ಯೇಸು ಕ್ರಿಸ್ತನ ರಕ್ತ ಹನಿಹನಿಯಾಗಿ ನಮ್ಮ ಮೇಲೆ ಬೀಳುತ್ತದೆ.
266ಮುಳ್ಳು ಮುಡಿ ಸುತ್ತಲ್ಪಟ್ಟ ಕ್ರಿಸ್ತನ ಶಿರಸ್ಸಿನ ಮೇಲಿಂದ ಬೀಳುತ್ತಿರುವ ರಕ್ತವು ನಮ್ಮ ಶಿರಸ್ಸಿನ ಮೇಲೆ ಬೀಳುತ್ತಿರುವುದು. ನಮ್ಮ ಚಿಂತೆಗಳನ್ನು, ಯೋಚನೆಗಳನ್ನು ತೊಳೆದು ಪರಿಶುದ್ಧ ಪಡಿಸುತ್ತದೆ.
267ನನ್ನ ಮೇಲೆ ಪ್ರೀತಿಗೊಂಡು ಶಾಪವಾದ ಮುಳ್ಳು ಮುಡಿಯನ್ನು ಶಿರದಲ್ಲಿ ಧರಿಸಿಕೊಂದು ಹೊತ್ತ ನನಗಾಗಿ ಶಿಲುಬೆಯ ಮೇಲೆ ಆತನು ಶಾಪಗ್ರಸ್ತನಾದಂತೆ - ಸಕಲ ಶಾಪಗಳಿಂದ ನಾನು ಬಿಡುಗಡೆ ಹೊಂದಿದ್ದೇನೆ. ಧರ್ಮೋ.23:5, ಗಲಾ.3:13
268ನನ್ನ ಬಾಳಿನಲ್ಲಿ ಇನ್ನು ಬರುವ ಶಾಪಗ್ರಸ್ತರು ಇನ್ನು ಇರುವುದಿಲ್ಲ. ಪ್ರಕ.22:3
269ಕ್ರಿಸ್ತನ ಕೈಗಳಿಂದ ಹೊರ ಬಂದ ರಕ್ತ ನನ್ನ ಕೈಗಳಲ್ಲಿ ಬೀಳುವುದು.
270ನಾನು ನನ್ನ ಕೈಗಳಲ್ಲಿ ಶುದ್ಧವುಳ್ಳವನೂ, ಹೃದಯದಲ್ಲಿ ನಿರ್ಮಲ ಮನಸ್ಸುಳ್ಳವನೂ ಆಗಿದ್ದು, ನನ್ನ ಆತ್ಮವನ್ನು ಮಾಯಾ ಜಾಲಕ್ಕೆ ಒಪ್ಪಿಸಿ ಬಿಡದಿರುವನು ಕೀರ್ತ.24:4
271ಕ್ರಿಸ್ತನಲ್ಲಿ ಹೊರ ಹೊಮ್ಮುವ ಪಾದಗಳಿಂದ ಸುರಿಯುವ ರಕ್ತವು ನನಗಾಗಿ ಶತ್ರುವಿನ ತಲೆಯನ್ನು ಜಜ್ಜುವುದು.
272ಹೌದು! ದೇವರ ಕುರಿಮರಿಯ ರಕ್ತದಿಂದಲೂ ಸಾಕ್ಷಿಯ ವಚನದಿಂದಲೂ ನಾನು ಸೈತಾನನನ್ನು ಜೈಸಿರುವೆನು ಪ್ರಕ.12:11
273ಕೊರಡೆಗಳಿಂದ ಹೊಡೆಯಲ್ಪಟ್ಟು, ಮುರಿಯಲ್ಪಟ್ಟು, ಕ್ರಿಸ್ತನ ಶರೀರರಿಂದ ಸಂಪೂರ್ಣವಾಗಿ ಹರಿಯುವ ರಕ್ತವು ನನ್ನನ್ನು ತೊಳೆದು ಶುದ್ಧೀಕರಿಸಿ ನೀತಿವಂತರಾಗಿ ಪರಿಶುದ್ಧರಾಗಿ ನೆಲೆಯಾಗಿ ಮಾಡುವುದು.
274ಆದಾಮನ ಎಲುಬಿನಿಂದ ರೂಪಿತವಾದಂತೆ, ಕ್ರಿಸ್ತನ ಪಕ್ಕೆಯು ಸೀಳಲ್ಪಟ್ಟು ಅದರಿಂದ ಚಿಮ್ಮಿ ಬಂದ ರಕ್ತವು ಅದರ ಪುಣ್ಯದಿಂದ (ಪುಣ್ಯದ ರಕ್ತದಿಂದ) ಕ್ರಿಸ್ತನ ಮದುವಣಗಿತ್ತಿಯಾಗಿ ನಾನು ಸೃಷ್ಟಿಸಲ್ಪಟ್ಟಿದ್ದೇನೆ. ಅ.ಕೃ.20:28
275ಕಳಂಕ, ಸುಕ್ಕು ಮುಂತಾದದ್ದೊಂದೂ ಇಲ್ಲದ ಕನ್ನಿಕೆಯೋ ಎಂಬಂತೆ ಪರಿಶುದ್ಧನೂ, ನಿರ್ದೋಷನೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜನ ಸ್ನಾನ ಮಾಡಿಸಿ ಶುದ್ಧೀ ಮಾಡಿದರು ಎಫೆ.5:27
276ನಾನು ಕ್ರಿಸ್ತನ ಅಂಗಗಳಾಗಿಯೂ ಆತನ ಶರೀರಕ್ಕೂ ಎಲುಬುಗಳಿಗೂ ನಾನು ಬಾಧ್ಯನಾಗಿದ್ದೇನೆ. ಎಫೆ.5:30
277ಯೇಸು ಕ್ರಿಸ್ತನ ಕೂಡ ತನ್ನ ಸ್ವಂತ ರಕ್ತದಿಂದ ಪರಿಶುದ್ಧ ಪಡಿಸಿದ್ದಕ್ಕಾಗಿ ಪಟ್ಟಣದ ಹೊರಗೆ ಸತ್ತನು. ಇಬ್ರಿ.13:12
278ಯೇಸು ಕ್ರಿಸ್ತನ ರಕ್ತವು ಸಕಲ ಪಾಪವನ್ನು ನೀಗಿಸಿ ನನ್ನನ್ನು ಶುದ್ಧೀಕರಿಸುವದು 1 ಯೋಹಾ.1:7
279ನಾನು ನನ್ನ ಪಾಪವನ್ನು ಅರಿಕೆ ಮಾಡುವಾಗೆಲ್ಲಾ ಕೃಪೆಯಾಗಿ ನನ್ನ ಪಾಪವನ್ನು ಮನ್ನಿಸಿ ಎಲ್ಲಾ ಅನ್ಯಾಯವನ್ನು ನೀಗಿಸಿ ಶುದ್ಧೀಕರಿಸುವುದಕ್ಕೆ ಯೇಸುವು ನಂಬಿಗಸ್ತನು ನೀತಿವಂತನೂ ಆಗಿರುವನು 1 ಯೋಹಾ.1:9
280ಯೇಸು ಕ್ರಿಸ್ತನ ರಕ್ತವು ನನಗಾಗಿ ಸುರಿಸಲ್ಪಟ್ಟ ಹೊಸ ಒಡಂಬಡಿಕೆಯ ರಕ್ತವಾಗಿರುವದು. ಮತ್ತಾ.26:28