281ಯೇಸು ಕ್ರಿಸ್ತನು ನನಗಾಗಿ ಶಿಲುಬೆಯ ಮೇಲೆ ಸುರಿಸಲ್ಪಟ್ಟ ರಕ್ತದಿಂದ ತಾನು ಸಮಾಧಾನ ಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಶೆ ಮಾಡಿದನು ಕೊಲೆ.1:2
282ನನ್ನ ಪಾಪಗಳನ್ನು ಅರಿಕೆ ಮಾಡಿ ಬಿಟ್ಟು ಬಿಟ್ಟು ದೇವರ ಕರುಣೆಯನ್ನು ಹೊಂದಿಕೊಂಡೆನು. ಜ್ಞಾನೋ.28:13
283ಕ್ರಿಸ್ತನನ್ನು ಅಂಗೀಕಾರ ಮಾಡಿಕೊಂಡ ನಾನು ನನ್ನ ಶರೀರದ ಅದರ ಆಸೆಯನ್ನು ಶಿಲುಬೆಯ ಮೇಲೆ ಜಡಿದಿದ್ದೇನೆ. ಗಲಾ.5:24
284ನಾನೋ ಕರ್ತನಾಗಿರುವ ಯೇಸು ಕ್ರಿಸ್ತನ ಶಿಲುಬೆಯೇ ಹೊರತು ಬೇರೊಂದು ಕುರಿತು ಹೆಚ್ಚಳ ಪಡುವುದು ಬೇಡವೇ ಬೇಡ. ಗಲಾ.6:14
285ಲೋಕವು ನನಗಾಗಿ ಶಿಲುಬೆಗೆ ಹಾಕಿಸಿಕೊಂಡು ನನ್ನ ಪಾಲಿಗೆ ಸತ್ತಿತು. ನಾನು ಶಿಲುಬೆಗೆ ಹಾಕಿಸಿಕೊಂಡು ಲೋಕದ ಪಾಲಿಗೆ ಸತ್ತೆನು. ಗಲಾ.6:14
286ಕ್ರಿಸ್ತನೊಡನೆ ನಾನೂ ಕೂಡ ಶಿಲುಬೆಯಲ್ಲಿ ಜಡಿಯಲ್ಪಟ್ಟೆನು. ಇನ್ನು ಜೀವಿಸುತ್ತಿರುವವನು ನಾನಲ್ಲ ಕ್ರಿಸ್ತನು ನನ್ನಲ್ಲಿ ಜೀವಿಸುತ್ತಿದ್ದಾನೆ. ಗಲಾ.2:20
287ಈಗ ಶರೀರದಲ್ಲಿರುವ ನಾನು ಜೀವಿಸುವುದು ಹೇಗೆಂದರೆ ನನ್ನ ಮೇಲೆ ಪ್ರೀತಿ ಹೊಂದಿ ನನಗಾಗಿ ತನ್ನನ್ನು ತಾನೆ ಒಪ್ಪಿಸಿಕೊಟ್ಟು, ದೇವರ ಕುಮಾರನ ಮೇಲನ ನಂಬಿಕೆಯಲ್ಲಿಯೇ ಜೀವಿಸುತ್ತಿದ್ದೇನೆ. ಗಲಾ.2:20
288ನನ್ನನ್ನು ಈ ಕೆಟ್ಟ ಪ್ರಪಂಚದೊಳಗಿಂದ ಬಿಡಿಸಬೇಕೆಂದು ಯೇಸು ಕ್ರಿಸ್ತನು ನಮ್ಮ ಪಾಪಗಳಿಗಾಗಿ ತನ್ನನ್ನು ಒಪ್ಪಿಸಿಕೊಟ್ಟನು. ಗಲಾ.1:4
289ನನ್ನನ್ನು ತನ್ನ ಕೃಪೆಯಿಂದ ಕರೆದು ಕ್ರಿಸ್ತನನ್ನು ಬಿಟ್ಟು ಬಿಟ್ಟು ಒಂದು ದಿನವು ಲೋಕದ ಪ್ರಕಾರ ಸಂತೋಷದಿಂದಿರಲಾರೆ. ನಾನು ಪಾಪದಲ್ಲಿ ತಿರುಗಿ ಬೀಳುವುದೇ ಇಲ್ಲ. ಗಲಾ.1:6
290ನಾನು ತಾಯಿಯ ಗರ್ಭದಲ್ಲಿದ್ದಾಗಲೇ ನನ್ನನ್ನು ಪ್ರತ್ಯೇಕಿಸಿ ತನ್ನ ಕೃಪೆಯಿಂದ ಕರೆದು ನನ್ನ ದೇವರು ಮುಂಭಾಗದಲ್ಲಿ ನಂಬಿಗಸ್ತನಾಗಿರುವೆನು. ಗಲಾ.1:15
291ನಾನು ಕ್ರಿಸ್ತನವನಾಗಿದ್ದರೆ ಅಬ್ರಹಾಮನ ಸಂತತಿಯವನು. ವಾಗ್ಧಾನಕ್ಕನುಸಾರವಾಗಿ ಬಾಧ್ಯನೂ ಆಗಿದ್ದೇನೆ. ಗಲಾ.3:29.
292ಯೇಸು ಕ್ರಿಸ್ತನ ಕೃಪೆಯು ಐಶ್ವರ್ಯಕ್ಕೆ ತಕ್ಕ ಹಾಗೆ ಆತನ ರಕ್ತದಿಂದ ಪಾಪ ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಎಫೆ.1:7, ಕೊಲೊ.1:14
293ಯೇಸು ಕ್ರಿಸ್ತನು ಸ್ವಂತ ರಕ್ತದಿಂದ ನಮ್ಮನ್ನು ಬಾಧ್ಯರನ್ನಾಗಿ ಮಾಡಿಕೊಂಡನು. ಆದುದರಿಂದಲೇ ನಾವು ಆತನವರು. ಅ.ಕೃ.20:28
294ನಾನು ಕ್ರಿಸ್ತನ ರಕ್ತದಿಂದ ನೀತಿವಂತನಾಗಿರಲಾಗಿ ಆತನ ಮೂಲಕ ಬರುವ ಕೋಪಕ್ಕೆ ತಪ್ಪಿಸಿಕೊಳ್ಳುವುದು ಮತ್ತೂ ನಿಶ್ಚಯವಲ್ಲವೇ. ರೋಮಾ.5:9
295ನನ್ನನ್ನು ಆಶೀರ್ವದಿಸುವ ಆಶೀರ್ವಾದದ ಪಾತ್ರೆಯು ಕ್ರಿಸ್ತನ ರಕ್ತದಲ್ಲಿ ಪಾಲುದಾರರಾಗಿದ್ದೇವೆಂಬುದನ್ನು ಸೂಚಿಸುತ್ತದೆ. 2 ಕೊರಿ.10:16
296ಈಗಾಗಲೇ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ ಎಫೆ.2:13
297ಯೇಸು ಕ್ರಿಸ್ತನ ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟು ಮಾಡಿದನು ಕೊಲೊ.1:20
298ಭೂಪರಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂದು ನಿಷ್ಕರ್ಷೆ ಮಾಡಿದನು. ಕೊಲೊ.1:20
299ಯೇಸು ಕ್ರಿಸ್ತನ ಮರಣಾಧಿಕಾರಿಯಾದ ಸೈತಾನನನ್ನು ಅಡಗಿಸಿ ಬಿಡುವುದಕ್ಕೂ ಮರಣ ಭಯದ ದೆಸೆಯಿಂದ ಇಬ್ರಿ.2:14
300ಕ್ರಿಸ್ತನ ರಕ್ತವು ನನ್ನನ್ನು ತೊಳೆದು ಶುದ್ಧೀಕರಿಸುವುದರಿಂದ ದುಷ್ಟ ಮನಃಸಾಕ್ಷಿ ಬಾಧಿಸದಂತೆ ನೋಡಿಕೊಳ್ಳುವೆ.