301ಕ್ರಿಸ್ತನ ರಕ್ತವು ಜೀವವುಳ್ಳ ದೇವರಿಗೆ ಸೇವೆ ಮಾಡುವುದಕ್ಕೆ ನನ್ನ ಮನಸ್ಸಾಕ್ಷಿಯನ್ನು ಶುದ್ಧೀಕರಿಸಲ್ಪಡುವುದು. ರಕ್ತಧಾರೆಯಿಲ್ಲದೆ ಪಾಪ ಪರಿಹಾರವಿಲ್ಲ ಎಂದು ಸತ್ಯವೇದ ಹೇಳುತ್ತದೆ. ಇಬ್ರಿ.9:22
302ನನಗಾಗಿ ಚೆಲ್ಲಲ್ಪಟ್ಟ ಯೇಸು ಕ್ರಿಸ್ತನ ರಕ್ತವು ನನಗೆ ಪಾಪ ಪರಿಹಾರವನ್ನೂ ರಕ್ಷಣಾ ಅನುಭವವನ್ನೂ ತಂದಿತು. ಇಬ್ರಿ.9:22
303ನಾನು ಪರಿಶುದ್ಧ ಸ್ಥಳಕ್ಕೆ ಪ್ರವೇಶಿಸುವದಕ್ಕೆ ಯೇಸು ಕ್ರಿಸ್ತನು ತಾನೇ ತನ್ನ ದೇಹಕ್ಕೆ ಮಾತ್ರ ಸಂಬಂಧಪಟ್ಟ ನಿಯಮಗಳಾಗಿದ್ದು ತಿದ್ದುಪಾಟಿನ ಕಾಲದವರೆಗೆ ಮಾತ್ರ ನೇಮಕವಾದವು ಇಬ್ರಿ.9:10
304ಆತನ ರಕ್ತದಿಂದ ಧೈರ್ಯವುಂಟಾಗಿದೆ. ಆ ಮಾರ್ಗವಾಗಿ ಪ್ರವೇಶಿಸುವುದಕ್ಕೆ ಇಬ್ರಿ.10:20
305ಚೀಯೋನ್ ಪರ್ವತಕ್ಕೂ, ಪರಲೋಕದ ಯೆರೂಸಲೇಮಿಗೂ ಉತ್ಸವ ಸಂಘದಲ್ಲಿ ಕೂಡಿರುವ ಕೋಟ್ಯಾನುಕೋಟಿ ದೇವದೂತರ ಬಳಿಗೂ ಕೂಡಿಕೊಂಡು ಸೇರಿರುವೆ. ಇಬ್ರಿ.12:22
306ಸಾವಿರ ಹತ್ತು ಸಾವಿರ ದೇವದೂತರ ಬಳಿಯಲ್ಲಿ ಪರಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಬಂದಿರುವೆನು. ಇಬ್ರಿ 17:22
307ಎಲ್ಲರಿಗೂ ನ್ಯಾಯಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ ಬಂದು ಸೇರಿದ್ದೇವೆ ಇಬ್ರಿ 12:23
308ಹೊಸ ಒಡಂಬಡಿಕೆಗೆ ಮದ್ಯಸ್ಥನಾಗಿರುವ ಯೇಸುವಿನ ಬಳಿಗೆ ಹೆಬೇಲನ ರಕ್ತಕ್ಕಿಂತ ಹಿತಕರವಾಗಿ ಮಾತಾಡುವ ಪ್ರೋಕ್ಷಣಾ ರಕ್ತದ ಬಳಿಗೂ ಸೇರಿದ್ದೇನೆ. ಇಬ್ರಿ.12:24
309ಕರ್ತನು ನನ್ನನ್ನು ನಿಷ್ಕಳಂಕವಾದ ದೇವರ ಕುರಿಯಾಗಿರುವ ಕ್ರಿಸ್ತನ ಅಮೂಲ್ಯರನ್ನಾಗಿ ಮಾಡಿದನು. 1 ಪೇತ್ರ 1:19
310ಕರ್ತನು ನನ್ನೊಡನೆ ಪ್ರೀತಿ ತೋರಿಸಿ ತನ್ನ ರಕ್ತದ ಮೂಲಕ ನನ್ನನ್ನು ಶುದ್ಧಿಕರಿಸಿ ತಂದೆಯಾಗಿರುವ ದೇವರ ಮುಂದೆ ನನ್ನನ್ನು ರಾಜನನ್ನಾಗಿಯೂ ಯಾಜಕನನ್ನಾಗಿಯೂ ಮಾಡಿರುವನು. ಪ್ರಕ.1:6
311ಕ್ರಿಸ್ತನು ನನಗಾಗಿ ಯಜ್ಞಾರ್ಪಿತನಾಗಿ ತನ್ನ ರಕ್ತದಿಂದ ಮನುಷ್ಯರನ್ನು ದೇವರಿಗಾಗಿ ಆದುಕೊಂಡನು. ಪ್ರಕ.5:9
312ನಾನು ನನ್ನ ನಿಲುಗಂಗಿಯನ್ನು ಯಜ್ಞದ ಕುರಿಯಾದಾತನ ರಕ್ತದಲ್ಲಿ ಶುಭ್ರ ಮಾಡಿಕೊಂಡಿದ್ದೇನೆ. ಪ್ರಕ.7:14
313ನಾನು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳು ಆತನನ್ನೇ ಸೇವಿಸುವೆನು. ಪ್ರಕ.7:15
314ಪರಿಶುದ್ಧತೆಯಲ್ಲಿರಬೇಕಾದ ವಿಶ್ವಾಸ ಅರಿಕೆಗಳು
315ನನ್ನ ದೇವರು ಪರಿಶುದ್ಧನು. ಪರಿಶುದ್ಧತ್ವದಲ್ಲಿ ಮಹತ್ವವುಳ್ಳವನು ವಿಮೋ.15:11
316ಕರ್ತನು ನನ್ನನ್ನು ಪರಿಶುದ್ಧ ಮಾಡುವಾತನು. ಆತನು ಯೆಹೋವ ಮೆಕ್ಕದೇಶ್ ಎಂಬಾತನು. ಯಾಜ 20:8
317ನನ್ನ ದೇವರಾಗಿರುವ ಕರ್ತನು ಪರಿಶುದ್ದವಾಗಿರುವಂತೆ ನಾನೂ ಪರಿಶುದ್ದನಾಗಿರುವೆನು. ಯಾಜ.20:26
318ಸೇನಾಧೀಶ್ವರನಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಭೂಮಂಡಲದಲ್ಲೆಲ್ಲಾ ಆತನ ಮಹಿಮೆ ತುಂಬಿರುತ್ತದೆ. ಯೆಶಾ.6:3
319ದೇವರಾದ ಕರ್ತನು ಪರಿಶುದ್ಧನು, ಪರಿಶುದ್ಧನು, ಪರಿಶುದ್ಧನು. ಆತನು ಸರ್ವಶಕ್ತನು. ವರ್ತಮಾನ ಭೂತ ಭವಿಷ್ಯತ್ ಕಾಲಗಳಲ್ಲಿರುವಾತನೂ ಆಗಿದ್ದಾನೆ. ಪ್ರಕ.4:8
320ತಂದೆಯಾಗಿರುವ ಕರ್ತನು ಪರಿಶುದ್ಧನು, ಕುಮಾರನಾಗಿರುವ ಕರ್ತನು ಪರಿಶುದ್ಧನು. ಪರಿಶುದ್ಧಾತ್ಮನಾಗಿರುವ ದೇವರು ಪರಿಶುದ್ಧನು.