321ಪರಲೋಕದಲ್ಲಿ ಸಾಕ್ಷಿ ಕೊಡುವ ಮೂವರು; ತಂದೆ, ಮಗ, ಪರಿಶುದ್ಧಾತ್ಮ - ಈ ಆತ್ಮ, ನೀರು, ರಕ್ತ ಎಂಬ ಮೂರು ಸಾಕ್ಷಿಗಳುಂಟು. ಈ ಮೂರು ಒಂದೇ ಅಭಿಪ್ರಾಯವಾದ ಸಾಕ್ಷಿಗಳು. 1 ಯೋಹಾ.5:7
322ಕರ್ತನು ತನ್ನ ಶರೀರವನ್ನು ಪರಿಶುದ್ಧ ಪಡಿಸುವಾತನು. ಪ್ರಾಣ, ಆತ್ಮ ಶರೀರವನ್ನು ಪರಿಶುದ್ಧ ಪಡಿಸುವಾತನು. ಯಾಜ.20:8
323ಸಮಾಧಾನದ ದೇವರಾಗಿರುವಾತನು ತಾನೇ ಪರಿಪೂರ್ಣವಾಗಿ ಪವಿತ್ರ ಮಾಡುವಾತನು 1 ಥೆಸ.5:23
324ನನ್ನ ಶರೀರ ಆತ್ಮ ಪ್ರಾಣ ಸಂಪೂರ್ಣವಾಗಿ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ದೋಷವಿಲ್ಲದೆ ಇರುವಂತೆ ಕಾಪಾಡಲ್ಪಡುತ್ತದೆ. 1 ಥೆಸ 5:23
325ಕರ್ತನು ತನ್ನ ಮಹಿಮೆಯುಳ್ಳ ಸನ್ನಿಧಾನದಲ್ಲಿ ನಿರ್ದೋಷಿಗಳಾಗಿ ಹರ್ಷದೊಡನೆ ನಿಲ್ಲಿಸುವದಕ್ಕೂ ಶಕ್ತನಾಗಿರುವನು. ಯೂದ 24
326ನನ್ನ ದೇವರಾಗಿರುವ ಕರ್ತನಿಗೆ ಸಮಾನನು ಯಾರು? ಆತನು ಪರಿಶುದ್ಧತ್ವದಿಂದ ಸರ್ವೋತ್ತಮನು ಆಗಿರುವನು. ವಿಮೋ.15:11
327ನಾನು ಪರಿಶುದ್ಧನಾಗಿರಬೇಕೆಂದು ನನ್ನ ಕುರಿತು ದೇವರ ಚಿತ್ತವಾಗಿದೆ. 1 ಥೆಸ.4:3
328ಕರ್ತನು ನನ್ನನ್ನು ಅಶುದ್ಧದಲ್ಲಿಂದ ಪರಿಶುದ್ಧತ್ವಕ್ಕೆ ಕರೆದಿರುವನು. 1 ಥೆಸ.4:7
329ಕರ್ತನು ರಕ್ಷಕನು ಆಗಿರುವ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದರಿಂದ ಪ್ರಪಂಚದ ಶುದ್ಧತೆಗಳಿಂದ ತಪ್ಪಿಸಿಕೊಂಡಿದ್ದೇನೆ. 2 ಪೇತ್ರ 2:20
330ಕರ್ತನು ನನ್ನನ್ನು ದೇವ ಸ್ವರೂಪದಲ್ಲಿ ದೇವರೂಪದಂತೆ ಪರಿಶುದ್ಧನನ್ನಾಗಿ ಸೃಷ್ಟಿ ಮಾಡಿದ್ದಾನೆ.
331ನಾವು ಕರ್ತನಿಗೆ ಮೀಸಲಾದ ಜನಾಂಗವಾಗಿದ್ದರಲ್ಲವೆ ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನರಾಗುವುದಕ್ಕೆ ಆದುಕೊಂಡನು. ಧರ್ಮೋ.7:6
332ನಾನು ಪರಿಶುದ್ಧ ಜಾತಿ, ನಾನು ಕರ್ತನಿಂದ ದೇವರಾದುಕೊಂಡ ಜನಾಂಗವೂ ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೇನೆ. 1 ಪೇತ್ರ 2:9
333ನಾನು ರಾಜವಂಶಸ್ಥರ ಯಾಜಕರೂ, ಮೀಸಲಾದ ಜನವೂ ದೇವರ ಸ್ವಕೀಯ ಪ್ರಜೆಯೂ ಆಗಿದ್ದೇನೆ. 1 ಪೇತ್ರ 1:9
334ನಾನು ಪರಿಶುದ್ಧ ನಿವಾಸಸ್ಥಾನ ಉನ್ನತವಾದ ದೇವರು ವಾಸವಾಗಿರುವ ಪರಿಶುದ್ಧ ಸ್ಥಳವಾಗಿ ತನ್ನ ಶರೀರವನ್ನು ಒಪ್ಪಿಸಿಕೊಟ್ಟಿದ್ದೇನೆ. ಕೀರ್ತ.46:4
335ನಾನು ಪರಿಶುದ್ದ ನಗರವೂ ಹೊಸ ಯೆರೂಸಲೇಮ್ ಆಗಿರುವ ಪರಿಶುದ್ಧ ನಗರದಂತೆ ಕರ್ತನು ನನ್ನನ್ನು ತಿಳಿದುಕೊಂಡಿರುವನು.
336ಮನುಷ್ಯನ ಮಧ್ಯದಲ್ಲಿ ವಾಸ ಮಾಡುವ ದೇವರಾಗಿರುವ ಕರ್ತನು ನನ್ನಲ್ಲಿ ವಾಸವಾಗಿರುವನು. ಪ್ರಕ.21:2
337ನಾನು ಪರಿಶುದ್ಧ ಆಲಯವೂ ದೇವರ ಪರಿಶುದ್ಧವೂ ನಿತ್ಯ ನಿವಾಸವಾಗಿ ಆತನ ಆಲಯದಲ್ಲಿ ಭೂಷಣವಾಗಿರುವುದು ಕೀರ್ತ.93:5
338ಪರಿಶುದ್ಧವೆಂಬ ಭೂಷನದೊಡನೆ ಕರ್ತನಿಗೆ ನಮಸ್ಕರಿಸಿರಿ. ಕೀರ್ತ.96.9
339ನಾನು ಕರ್ತನಿಗೆ ಮುಂಭಾಗದಲ್ಲಿ ಪರಿಶುದ್ಧ ಪರ್ವತವಾಗಿ ಇರುತ್ತೇನೆ. ಕೀರ್ತ.43:3
340ಕರ್ತನು ನನ್ನನ್ನು ನಡಿಸಿ ತನ್ನ ಪರಿಶುದ್ಧ ಪರ್ವತಕ್ಕೂ ತಮ್ಮ ನಿವಾಸ ಸ್ಥಳಗಳಿಗೂ ನನ್ನನ್ನು ತೆಗೆದುಕೊಂಡು ಹೋದನು. ಕೀರ್ತ43:3