341ನನ್ನ ಶರೀರದಲ್ಲಿ ನನ್ನ ಎಲ್ಲಾ ಅಶುದ್ಧತೆಗಳನ್ನು ಪರಿಹರಿಸಿ ನನ್ನನ್ನು ಶುದ್ಧೀಕರಿಸುವನು 2 ಕೊರಿ.7:1
342ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವನು. 2 ಕೊರಿ 7:1
343ನಾನು ದೇವರಿಗೆ ಭಯಭಕ್ತಿಯುಳ್ಳವನಾಗಿರುವೆ. ಪಾಪ ದ್ವೇಷಗಳನ್ನು ಬಿಟ್ಟು ದೂರವಿರುವೆನು. ಜ್ಞಾನೋ.8:13
344ನಾನು ಧರ್ಮಶಾಸ್ತ್ರಕ್ಕೆ ಅಧೀನನಲ್ಲ; ಕೃಪೆಗೆ ಅಧೀನನಾಗಿರುವುದರಿಂದ ಪಾಪವು ನನ್ನನ್ನು ಜೈಯಿಸದು ರೋಮಾ.6:14
345ನಾನು ನನ್ನನ್ನು ಪಾಪದ ಪಾಲಿಗೆ ಸತ್ತವರು, ದೇವರಿಗಾಗಿ ಜೀವಿಸುವವರು ಎಂದೆನಿಸಿಕೊಳ್ಳಬಾರದು (ಎಂದೆನಿಸಿಕೊಳ್ಳಬೇಕು) ರೋಮಾ.6:11
346ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸದೇ, ನೀವು ದೇಹದ ದುರಾಶೆಗಳಿಗೆ ಒಳಪಡಬೇಡಿರಿ. ರೋಮಾ.6:12
347ನೀವು ನಿಮ್ಮ ಅಂಗಗಳನ್ನು ನೀತಿಯುಳ್ಳ ಆಯುಧಗಳಾಗಿ ಒಪ್ಪಿಸಿಕೊಡಿರಿ. ರೋಮಾ.6:13
348ಪಾಪಗಳಿಂದ ನಾನು ಸಂಪೂರ್ಣವಾಗಿ ಬಿಡುಗಡೆ ಹೊಂದಿ ನೀತಿಗೆ ದಾಸನಾಗಿರುವೆನು. ರೋಮಾ.6:18
349ಈಗಿನಿಂದ ಪರಿಶುದ್ಧರಾಗಿ ನಡೆದುಕೊಳ್ಳುವಂತೆ ನನ್ನ ಅಂಗಗಳನ್ನು ನೀತಿಗೆ ಒಪ್ಪಿಸಿಕೊಟ್ಟಿದ್ದೇನೆ. ರೋಮಾ.6:19
350ಆದುದರಿಂದ ಪರಿಶುದ್ಧರಾಗಿರುವುದಕ್ಕೆ ನನಗೆ ದೊರೆತ ಬಲವು ಅಂತ್ಯವು ನಿತ್ಯಜೀವವೂ ಆಗಿದೆ. ಪಾಪವು ಕೊಡುವ ಸಂಬಳ ಮರಣ. ದೇವರ ಉಚಿತಾರ್ಥ ವರವು ನಿತ್ಯ ಜೀವವು ರೋಮಾ.6:22
351ನಿಮ್ಮ ತಂದೆಯು ಯಾವ ದೋಷವೂ ಇಲ್ಲದವನಾಗಿರುವುದರಿಂದ ನೀವು ದೋಷವಿಲ್ಲದವರಾಗಿರಿ ಮತ್ತಾ.5:48
352ಯಾವ ತರಹದ ಭೋಜನ ಪದಾರ್ಥಗಳನ್ನು ತಿಂದು ಲೋಕದವರು ಕುಡಿಯುವ ದ್ರಾಕ್ಷಾರಸವನ್ನು ಕುಡಿದು ತನ್ನನ್ನು ಅಶುದ್ಧ ಮಾಡಿಕೊಳ್ಳುವುದಿಲ್ಲ. ದಾನಿ.1:8
353ದಾನಿಯೇಲ ಪ್ರವಾದಿಯು ತನ್ನ ಪರಿಶುದ್ಧತೆಯನ್ನು ಕಾಪಾಡಿಕೊಂಡಂತೆ ನಾನು ದೇವರ ಕೃಪೆಯಿಂದ ನನ್ನ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುತ್ತೇನೆ.
354ಯೋಸೇಫನು ಪಾಪಕ್ಕೆ ದೂರ ಓಡಿದಂತೆ ನಾನು ಕೂಡ ಪಾಪ ಸ್ವಭಾವಗಳಿಗೆ ದೂರ ಓಡಿ ಹೋಗಿ ನನ್ನ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುತ್ತೇನೆ. ಆದಿ.39:12
355ನೀವು ದೇವರ ಆಲಯವಾಗಿದ್ದೀರೆಂದು ದೇವರ ಆತ್ಮನು ನಿಮ್ಮಲ್ಲಿ ವಾಸ ಮಾಡುತ್ತಾನೆಂದು ನಿಮಗೆ ಗೊತ್ತಿಲ್ಲವೋ? 1 ಕೊರಿ.3:16
356ಕರ್ತನ ಸಂಸರ್ಗದಲ್ಲಿರುವಾತನೋ ಆತನೊಂದಿಗೆ ಒಂದೇ ಆತ್ಮನಾಗಿದ್ದಾನೆ 1 ಕೊರಿ.6:17
357ನಾನು ಶರೀರವಾಗಿರುವ ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯಾಗಿದೆಯೆಂದು ತಿಳೀಯದೋ 1 ಕೊರಿ.6:19
358ನಾನು ನನ್ನ ಶರೀರವನ್ನು ದೇವರಿಗೆ ಮೀಸಲಾಗಿಯೂ ಮೆಚ್ಚಿಕೆಯಾಗಿಯೂ ಇರುವ ಸಜೀವ ಯಜ್ಞವಾಗಿ ಸಮರ್ಪಿಸುವೆನು. ರೋಮಾ.12:1
359ಇಹಲೋಕದ ನಡವಳಿಕೆಯನ್ನು ಅನುಸರಿಸದೇ ಮನಸ್ಸನ್ನು ಹೊಂದಿಕೊಂಡು ಪರಲೋಕ ಭಾವದವರಾಗಿರ್ರಿ. ದೇವರ ಚಿತ್ತಾನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವುದು ಯಾವುದೆಂದು ವಿವೇಚಿಸಿ ತಿಳಿದುಕೊಳ್ಳಿರಿ. ರೋಮಾ.12:2
360ನಾನು ನನ್ನ ಶರೀರವೆಂಬುದು ದೇವರ ಮಹಿಮೆಗಾಗಿ ಪ್ರಭಾವ ಹೊಂದುವುದಕ್ಕಾಗಿ ತಾನು ಮಾಡಿಸಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ದೇವರು ತೋರ್ಪಡಿಸಿದ್ದಾನೆ. ರೋಮಾ.9:23