361ನನ್ನ ದೇಹದಲ್ಲಿ ದೇವರು ತನ್ನ ಮಹಿಮೆಯನ್ನು ಐಶ್ವರ್ಯವನ್ನು ತೋರ್ಪಡಿಸಿದ್ದಾನೆ. ರೋಮಾ.9:24
362ಇಗೋ ನನ್ನ ದೇಹವು ದೇವಾದಿ ದೇವರ ನಿವಾಸವೂ ಆಗಿದೆ. ಪ್ರಕ.21:3
363ನನ್ನಲ್ಲಿ ಕರ್ತನು ವಾಸವಾಗಿರುವನು. ನಾನು ಆತನಿಗೆ ಪ್ರಜೆಯಾಗಿರುವೆನು. ಪ್ರಕ.21:3
364ದೇವರ ತೇಜೋಮಯವಾದ ಆತ್ಮನಾಗಿರುವ ದೇವರಾತ್ಮನು ನನ್ನಲ್ಲಿ ನೆಲೆಗೊಂಡಿದ್ದಾನೆ. 1 ಪೇತ್ರ 4:14
365ಕರ್ತನಾಗಿರುವ ದೇವರಾತ್ಮನು ನನ್ನಲ್ಲಿ ನೆಲೆಗೊಂಡಿರುವುದರಿಂದ ಬಡವರಿಗೆ ಶುಭವಾರ್ತೆಯನ್ನು ಸಾರುವುದಕ್ಕೆ ಅಭಿಷೇಕಿಸಿದ್ದಾನೆ. ಯೆಶಾ.61:1
366ಕ್ರಿಸ್ತನಾದಾತನು ಮಹಿಮೆಯ ನಂಬಿಕೆಯಾಗಿ ನನ್ನಲ್ಲಿ ವಾಸ ಮಾಡುತ್ತಾನೆ. ಕೊಲೊ.1:27
367ಈ ಮಹತ್ವವುಳ್ಳ ಬೊಕ್ಕಸದಲ್ಲಿ ನನ್ನ ದೇವರಾಗಿರುವಾತನು ಮಣ್ಣಾಗಿರುವ ಶರೀರದಲ್ಲಿ ನೆಲೆಗೊಂಡಿದ್ದಾನೆ. 2 ಕೊರಿ.4:7
368ನನ್ನನ್ನು ಕರೆದ ದೇವರು ಪರಿಶುದ್ಧನಾಗಿರುವಂತೆ ನಾನು ನಡತೆಗಳಲ್ಲೆಲ್ಲಾ ಪರಿಶುದ್ಧನಾಗಿರುವೆನು. 1 ಪೇತ್ರ 1:15
369ಪರಿಶುದ್ಧರಾಗಿರುವವರು ಇನ್ನೂ ಪವಿತ್ರ ಮಾಡಿಕೊಳ್ಳಲಿ ಎಂಬ ಕರ್ತನ ವಾರ್ತೆಯಂತೆ ನಾನೂ ಸಹ ಅನುದಿನವು ನನ್ನ ಪರಿಶುದ್ಧತೆಯ ಮೇಲೆ ಪರಿಶುದ್ಧತೆಯನ್ನು ಹೊಂದುವೆನು. ಪ್ರಕ 22:11
370ವೇದ ವಾಕ್ಯಗಳಿಂದ ಪರಿಶುದ್ಧತೆಯು
371ಕರ್ತನು ನನ್ನನ್ನು ಪರಿಶುದ್ಧ ಮಾಡಿ ನಾನು ಪರಿಶುದ್ಧತೆಯ ಮೇಲೆ ಪರಿಶುದ್ಧತೆಯನ್ನು ಹೊಂದುವಂತೆ ಪರಿಶುದ್ಧ ವೇದವನ್ನು ನನ್ನ ಕರಗಳಲ್ಲಿ ದಯಪಾಲಿಸಿದ್ದಾನೆ.
372ವೇದ ವಾಕ್ಯಗಳು ಸತ್ಯವಾದದ್ದು ಸತ್ಯವನ್ನು ತಿಳಿದಿರುವ ನನ್ನನ್ನು ಆ ಸತ್ಯವೇ ಬಿಡುಗಡೆ ಮಾಡುತ್ತದೆ. ಯೋಹಾ 8:32
373ಪರಿಶುದ್ಧ ವೇದವನ್ನು ಪರಿಶುದ್ಧಾತ್ಮನು ತಾನೇ ನನಗೆ ಸಿಗುವಂತೆ ಮಾಡಿದ್ದಾನೆ.
374ಅದರಲ್ಲಿರುವ ಅಕ್ಷರಗಳೆಲ್ಲಾ ಪರಿಶುದ್ಧವಾದದ್ದೇ. ಅವುಗಳು ನನ್ನನ್ನು ಪರಿಶುದ್ಧ ಪಡಿಸುತ್ತದೆ.
375ಸತ್ಯವೇದವು ನನ್ನಲ್ಲಿ ನನಗೆ ತಿಳುವಳಿಕೆಯನ್ನುಂಟು ಮಾಡುವ ಕನ್ನಡಿಯಂತಿದೆ ಹಾಗೂ ತಿಳುವಳಿಕೆಯನ್ನುಂಟು ಮಾಡುತ್ತದೆ.
376ದೇವರು ಕೊಟ್ಟ ವೇದವು ನನ್ನ ಹೃದಯದಲ್ಲಿರುತ್ತದೆ. ನಡತೆಗಳೆಲ್ಲಾ ತಪ್ಪುವುದಿಲ್ಲ. ಕೀರ್ತ 37:31
377ನಾನು ವೇದ ವಚನಗಳನ್ನಿಟ್ಟು ಪ್ರಾರ್ಥನೆಯಿಂದಲೂ ಪರಿಶುದ್ಧಪಡಿಸಿಕೊಳ್ಳುತ್ತೇನೆ 1 ತಿಮೋ.4:5
378ಕರ್ತನು ನನ್ನನ್ನು ತನ್ನ ಸತ್ಯದಲ್ಲಿ ಪರಿಶುದ್ಧಪಡಿಸುತ್ತಾನೆ. ಆತನ ವೇದ ವಚನವೇ ಸತ್ಯವಾಗಿದೆ. ಯೋಹಾ.17:17
379ವೇದ ವಚನವು ನನ್ನ ಆತ್ಮವನ್ನು ಉಜ್ಜೀವಿಸುವಂತೆ ಮಾಡುತ್ತದೆ. ಕರ್ತನ ವಾಕ್ಯಗಳೆಲ್ಲಾ ಆತ್ಮವಾಗಿಯೂ ಜೀವವಾಗಿಯೂ ಅವೆ. ಯೋಹಾ 6:63
380ತನ್ನ ನಡತೆಯನ್ನು ಸರಿಪಡಿಸಿಕೊಳ್ಳುವುದು ಯಾತರಿಂದ ಅದು ದೇವರ ವಾಕ್ಯಗಳಿಂದಲೇ. ಅದು ನನ್ನನ್ನು ಕಾಯ್ದು ಕೊಳ್ಳುವುದು ಕೀರ್ತ.119:9