381ಕರ್ತನ ವಚನಗಳು ನನ್ನ ಕಾಲಿಗೆ ದೀಪವು ನನ್ನ ಪಾದಗಳಿಗೆ ಬೆಳಕೂ ಆಗಿದೆ. ಕೀರ್ತ.119:105
382ಸತ್ಯವನ್ನು ತಿಳಿದುಕೊಳ್ಳುವುದರಿಂದ ಅವು ನನಗೆ ತಿಳುವಳಿಕೆ ನೀಡಿ ನನಗೆ ಆಶೀರ್ವಾದ ತರುತ್ತದೆ. ಸತ್ಯವು ನನ್ನನ್ನು ಬಿಡುಗಡೆ ಮಾಡುತ್ತದೆ. ಯೋಹಾ.8:36
383ದೇವರ ವಾಕ್ಯಗಳು ನನಗೆ ಜೀವವೂ ಬಲವು ಆಗಿರುತ್ತದೆ. ಇಬ್ರಿ.4:12
384ದೇವರ ವಾಕ್ಯಗಳು ಸಜೀವವಾದದ್ದು ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿ ಕತ್ತಿಗಿಂತಲೂ ಅದು ಹದವಾಗಿರುತ್ತದೆ. ಇಬ್ರಿ.4:12
385ದೇವರ ವಾಕ್ಯಗಳು ನನ್ನ ಆತ್ಮವನ್ನು ಪ್ರಾಣವನ್ನೂ ಕೀಲು ಮಜ್ಜೆಗಳನ್ನು ವಿಭಾಗಿಸುವಷ್ಟರ ಮಟ್ಟಿಗೂ ತೂರಿ ಹಾದು ಹೋಗುವಂತದ್ದಾಗಿದೆ. ಇಬ್ರಿ 4:12.
386ದೇವರ ವಾಕ್ಯಗಳು ನನ್ನ ಹೃದಯದ ಆಲೋಚನೆಯನ್ನು ಉದ್ದೇಶಗಳನ್ನು ವಿವೇಚಿಸುವಂಥದ್ದು ಆಗಿದೆ. ಇಬ್ರಿ 4:12
387ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವನ ಮಾರ್ಗ. ಜ್ಞಾನೋ.6:23
388ವೇದ ಪುಸ್ತಕವು ನನಗೆ ಜೇನಿಗಿಂತ ಮಧುರವಾದದ್ದಾಗಿದೆ ಕೀರ್ತ.19:10
389ಬಂಗಾರಕ್ಕಿಂತಲೂ ಅಪರಂಜಿಗಿಂತಲೂ ಅಪೇಕ್ಷಿಸತಕ್ಕವುಗಳಾಗಿವೆ. ಕೀರ್ತ 19:10
390ನನ್ನೊಳಗೆ ನನ್ನ ಮನಸ್ಸಿನೊಳಗೆ ಬೇರೂರಿಸುವ ವಾಕ್ಯಕ್ಕೆ ನಮ್ರತೆಯಿಂದ ಎಡೆಗೊಡಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುವುದಕ್ಕೆ ಸಾಮರ್ಥ್ಯವುಳ್ಳವುಗಳಾಗಿದೆ. ಯಾಕೋ.1:21
391ವೇದವಾಕ್ಯಗಳೆಲ್ಲಾ ದೇವರ ಆತ್ಮನಿಂದ ದೊರೆತದ್ದಾಗಿದೆ. ಅವುಗಳು ನನಗೆ ತುಂಬಾ ಪ್ರಯೋಜನಕರವಾಗಿದೆ. 2 ತಿಮೋ.3:17
392ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನ ಮಾರ್ಗದಲ್ಲಿ ನನ್ನನ್ನು ನಡಿಸು ಕೀರ್ತ.139:24
393ಕರ್ತನ ವಾಗ್ಧಾನಗಳು ದೊರಕಿದ್ದರಿಂದ ನಮ್ಮ ಶರೀರಾತ್ಮಗಳನ್ನು ತೊಲಗಿಸಿ ನಮ್ಮನ್ನು ಶುಚಿ ಮಾಡಿಕೊಂಡು ದೇವರ ಭಯಭಕ್ತಿಯಿಂದ ಕೂಡಿದವರಾಗಿ ಪಾವಿತ್ರ್ಯವನ್ನು ಹೊಂದಿಕೊಳ್ಳೋಣ. 2 ಕೊರಿ.7:1
394ಯೇಸು ಕ್ರಿಸ್ತನು ನುಡಿಯುವ ವಾರ್ತೆಗಳೂ ಉಪದೇಶಗಳು ನನ್ನೊಳಗೆ ಪರಿಶುದ್ಧತೆಯನ್ನು ತರುತ್ತದೆ. ಯೋಹಾ 15:3
395ಕರ್ತನ ಮಾತುಗಳು ಯತಾರ್ಥವಾದದ್ದು. ಅವುಗಳು ಏಳು ಸಾರಿ ಪುಟಕ್ಕೆ ಹಾಕಿದ ಚೊಕ್ಕ ಬಂಗಾರದೋಪಾದಿಯಲ್ಲಿರುತ್ತದೆ. ಕೀರ್ತ.12:6
396ಇಚ್ಛೆಯಿಂದ ಲೋಕದಲ್ಲುಂಟಾದ ಕೇಡಿನಿಂದ ತಪ್ಪಿಸಿ ಕ್ರಿಸ್ತನ ದಿವ್ಯ ಸ್ವಭಾವಕ್ಕೆ ನಾನು ಬಾಧ್ಯನಾಗಿದ್ದೇನೆ.
397ದೇವರು ತನ್ನ ಗುಣಾತಿಶಯದಿಂದ ಅಮೂಲ್ಯವಾಗಿಯೂ ಉತ್ಕೃಷ್ಟವಾಗಿ ಇರುವ ವಾಗ್ಧಾನಗಳನ್ನು ನಮಗೆ ದಯಪಾಲಿಸಿದ್ದಾನೆ. 2 ಪೇತ್ರ 1:4
398ಯೇಸು ಕ್ರಿಸ್ತನು ನಮಗೆ ಬರೆದಿರುವನೆಂದು ಭಾವಿಸಿ ವಾಕ್ಯಗಳನ್ನು ಕೈಕೊಂಡು ತೋರಿಸಿ ಸೈತಾನನನ್ನು ಜೈಸಿದಂತೆ ನಾನೂ ಕೂಡ ವೇದ ವಾಕ್ಯಗಳನ್ನು ಅರಿಕೆ ಮಾಡಿ ಸೈತಾನನನ್ನು ಜೈಯಿಸುವೆನು.
399ನಂಬಿಕೆಯೆಂಬ ಗುರಾಣ ಯನ್ನು ಹಿಡಿದುಕೊಳ್ಳಿರಿ. ಆದುದರಿಂದ ನೀವು ಕೆಡುಕನ ಅಗ್ನಿ ಬಾಣಗಳನ್ನೆಲ್ಲಾ ಆರಿಸಿ ಬಿಡುವದಕ್ಕೆ ಶಕ್ತರಾಗುವಿರಿ. ಎಫೆ.6:16
400ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ. ಎಫೆ.6:17