401ಪರಿಶುದ್ಧಾತ್ಮನಿಂದ ಪರಿಶುದ್ಧತೆಯು
402ಪರಿಶುದ್ಧಾತ್ಮನು ನನ್ನನು ಪರಿಶುದ್ಧ ಪಡಿಸುವನು. ಅನ್ಯ ದೇಶಸ್ಥರೆಂಬ ಕಾಣ ಕೆಯು ಪವಿತ್ರಾತ್ಮನ ಮೂಲಕವಾಗಿ ಪವಿತ್ರವಾಗಿದ್ದು ದೇವರಿಗೆ ಸಮರ್ಪಕವಾಗುವಂತೆ ರೋಮಾ.15:15
403ನಾನು ಆತ್ಮನಿಂದ ಪರಿಶುದ್ಧವಾಗುವೆನು. ಸತ್ಯವನ್ನು ನಂಬುವುದರಿಂದ ಪರಿಶುದ್ಧವಾಗುತ್ತೇನೆ.
404ನನ್ನನ್ನು ಪರಿಶುದ್ಧ ಪಡಿಸುವ ಆತ್ಮನಾದಾತನು ಎಲ್ಲಾ ಗ್ರಹಿಕೆಯನ್ನು ತಿಳಿದುಕೊಂಡಿರುವನು.
405ನಮ್ಮ ಶರೀರವು ದೇವರಿಂದ ದೊರಕಿ ನಿಮ್ಮೊಳಗೆ ನೆಲೆಗೊಂಡಿರುವ ಪವಿತ್ರಾತ್ಮನಿಗೆ ನಿಮ್ಮ ದೇಹವು ಗರ್ಭಗುಡಿಯೂ ಆಗಿದೆ. 1 ಕೊರಿ.6:19
406ಪರ್ಣಶಾಲೆಯ ಗುಡಾರದ ಹೊರಗಿನ ಸ್ಥಳವು ಪರಿಶುದ್ಧ ಸ್ಥಳ ಹಾಗೂ ಮಹಾ ಪರಿಶುದ್ಧ ಸ್ಥಳವೂ ಆಗಿರುವಂತೆ ನನಗೆ ನನ್ನ ಶರೀರ, ಪ್ರಾಣ, ಆತ್ಮಗಳುಂಟು.
407ಪರಿಶುದ್ದವುಳ್ಳವನು ಇನ್ನು ತನ್ನನ್ನು ಪರಿಶುದ್ಧ ಪಡಿಸಿಕೊಳ್ಳಲಿ ಎಂಬ ವಾಕ್ಯದಂತೆಯೇ ನಾನು ಪೂರ್ಣ ಪರಿಶುದ್ಧತೆಯನ್ನು ನೋಡಿ ಮುನ್ನಡೆಯುತ್ತಿದ್ದೇನೆ. ಪ್ರಕ.22:11
408ಪರಿಶುದ್ದತೆಯನ್ನು ಕೊಡುವಂತೆ ನನ್ನೊಳಗೆ ಬಂದು ವಾಸವಾಗಿರುವ ಪರಿಶುದ್ಧಾತ್ಮನನ್ನು ಒಂದು ದಿನವೂ ನಾನು ದುಃಖಪಡಿಸುವದಿಲ್ಲ.
409ವಿಮೋಚನೆಯ ದಿನಕ್ಕಾಗಿ ಆತನು ಮುದ್ರೆ ಮಾಡಿ ನನ್ನೊಡನಿರುವನು ಎಫೆ.4:30
410ನಾನು ನನ್ನ ಪರಿಶುದ್ಧತೆಯಲ್ಲಿ ಕೊರತೆಯುಳ್ಳವನಾಗಿರುವಾಗ ನನ್ನ ಬಲಹೀನತೆಯಲ್ಲಿ ಪರಿಶುದ್ಧಾತ್ಮನು ಸಹಾಯ ಮಾಡುತ್ತಾನೆ.
411ನನಗಾಗಿ ಆತ್ಮನಾದಾತನಲ್ಲಿ ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ. ರೋಮಾ.8:26
412ನಾನು ಕರ್ತನಿಗೆ ವಿರೋಧವಾಗಿ ಪಾಪ ಮಾಡದಂತೆ ಪರಿಶುದ್ಧಾತ್ಮನು ನನ್ನನ್ನು ತಡೆದು ನಿಲ್ಲಿಸುತ್ತಾನೆ. ಆದಿ.26:6
413ನಾನು ಪರಿಶುದ್ಧಾತ್ಮನಿಂದ ಪರಿಶುದ್ಧತೆ ಹೊಂದುವಂತೆ ಸತ್ಯವನ್ನು ನಂಬುವುದರಿಂದ ರಕ್ಷಿಸುವಂತೆ ದೇವರು ನನ್ನನ್ನು ತಿಳಿದುಕೊಂಡನು 2 ಥೆಸ.2:13
414ನನ್ನೊಳಗೆ ವಾಸವಾಗಿರುವ ಪರಿಶುದ್ಧಾತ್ಮನು ಎಲ್ಲಾ ವಿಷಯಗಳನ್ನು ಕೂಡ ಪರಿಶೋಧಿಸುವವನಾಗಿದ್ದಾನೆ. ದೇವರ ಆಲೋಚನೆಗಳನ್ನು ದೇವರ ಆತ್ಮನೇ ಹೊರತು ಬೇರೆ ಯಾರೂ ಗ್ರಹಿಸುವುದಿಲ್ಲ. 1 ಕೊರಿ.2:10
415ಮನುಷ್ಯನ ಆತ್ಮವು ಕರ್ತನ ದೀಪವಾಗಿದೆ. ಅದು ಅಂತರಂಗವನ್ನೆಲ್ಲ ಶೋಧಿಸುತ್ತದೆ. ಜ್ಞಾನೋ.20:27
416ನಾನು ಆರಾಧಿಸುವ ದೇವರು ಆತ್ಮವಾಗಿರುವವನು. ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು. ಯೋಹಾ.4:25
417ನನ್ನನ್ನು ಹಿಂಬಾಲಿಸುವವನು ಪಾಪ ಸ್ವಭಾವಗಳನ್ನು ಆತ್ಮನಾದಾತನು ತನ್ನ ಅಗ್ನಿ ಅಭಿಷೇಕದಿಂದ ಶುದ್ಧೀಕರಿಸುತ್ತಾನೆ.
418ಯೇಸು ಕ್ರಿಸ್ತನು ತನ್ನ ಮೇಲೆ ಅಗ್ನಿಯನ್ನು ಸುರಿಸುವಂತೆ ಅದು ನನ್ನೊಳಗೆ ಹತ್ತಿ ಉರಿಯಬೇಕೆಂದು ಇಚ್ಛಿಸುತ್ತಾನೆ. ಲೂಕ 12:49
419ದೇವರು ನನ್ನ ಅಶುದ್ಧತೆಯನ್ನು ನೀಗಿಸಿ ನ್ಯಾಯದ ಆತ್ಮನಿಂದಲೂ ದಹಿಸುವ ಅಗ್ನಿಯಿಂದಲೂ ಪಾಪ ಸ್ವಭಾವಗಳನ್ನು ನಮ್ಮ ಆಕ್ರಮ ರಕ್ತಪಾತವನ್ನು ನನ್ನಿಂದ ತೊಲಗಿಸಿ ಬಿಡುವನು. ಯೆಶಾ.4:3
420ಸೈತಾನನ ಕ್ರಿಯೆಗಳನ್ನು ನಾಶ ಪಡಿಸಲು ನನಗಾಗಿ ದೇವಕುಮಾರನು ಪ್ರತ್ಯಕ್ಷನಾದನು 1 ಯೋಹಾ.3:8