421ನಾನು ಕರ್ತನೊಡನಿರುವೆನು. ಆತನೊಡನೆ ಒಂದೇ ಆತ್ಮವುಳ್ಳವನಾಗಿರುವೆನು 1 ಕೊರಿ.6:17
422ನಾನು ದೇವರಿಂದ ಹುಟ್ಟಿದವನಾಗಿದ್ದೇನೆ. ಈಗ ನಾನು ಇನ್ನು ಪಾಪ ಮಾಡುವುದಿಲ್ಲ. 1 ಯೋಹಾ.5:18
423ಕ್ರಿಸ್ತನ ಬೀಜವು ನನ್ನೊಳಗೆ ನೆಲೆಗೊಂಡಿರುವುದು. ಪಾಪವು ನಾಶ ಪಡಿಸದಂತೆ ದೇವರು ನನ್ನನ್ನು ಕಾಪಾಡುವನು 1 ಯೋಹಾ 3:9
424ನಾನು ತಿಳಿಯದೆ ಪಾಪ ಮಾಡಿದ್ದಾದರೆ ನೀತಿ ಪರನಾದ ಯೇಸು ಕ್ರಿಸ್ತನು ತಂದೆಯಾಗಿರುವ ದೇವರ ಬಳಿ ನಮ್ಮ ಪರವಾಗಿ ಮಾತಾಡುವನು 1 ಯೋಹಾ.2:1
425ನಾನು ದೇವರ ಆತ್ಮನಿಂದ ನಡಿಸಲ್ಪಡುತ್ತೇನೆ ರೋಮಾ.8:14
426ನಾನು ಪರಿತ್ರಾತ್ಮನಿಗೆ ಅನುಸರಿಸಿ ನಡೆದುಕೊಳ್ಳುವುದರಿಂದ ಶರೀರದ ಭಾವದ ಅಭಿಲಾಶೆಗಳು ಎಷ್ಟು ಮಾತ್ರಕ್ಕೂ ನೆರವೇರುವುದಿಲ್ಲ. ಗಲಾ 5:16
427ಪರಿಶುದ್ದಾತ್ಮನು ನನಗಾಗಿ ಸಾಕ್ಷಿಯಾಗಿ ಜೀವಿಸಲು ಪರಿಶುದ್ಧರಾಗಿ ಜೀವಿಸಲು ಬಲಪಡಿಸುವನು ಅಪೆÇೀ.1:8
428ನನ್ನ ಪ್ರಾರ್ಥನೆಯನ್ನು ಕೇಳುವಾತನೇ
429ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವವನೂ ನರರೆಲ್ಲರೂ ಆತನ ಬಳಿಗೆ ಬರುವವರು ಕೀರ್ತ.65.2
430ನನ್ನ ಪ್ರಾರ್ಥನೆಯನ್ನು ಕೇಳುವುದಕ್ಕೆ ಕರ್ತನ ಕಿವಿಗಳು ಗಮನಿಸಿ ಆತನ ಕಣ್ಣುಗಳು ತೆರೆದಿರುತ್ತವೆ ನೆಹೆ.1:6
431ಕರ್ತನು ನನ್ನ ವಿಜ್ಞಾಪನೆಯನ್ನು ಕೇಳಿದನು. ಕರ್ತನು ನನ್ನ ಪ್ರಾರ್ಥನೆಯನ್ನು ಲಾಲಿಸುತ್ತಾನೆ. ಕೀರ್ತ.6:9
432ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ. ಯಾಕೋಬ್ಯನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲು ಕೀರ್ತ.20:1
433ಕರ್ತನು ನನ್ನ ಪ್ರಾರ್ಥನೆಯನ್ನು ಕೇಳಿ ನನ್ನ ಮೊರೆಗೆ ಕಿವಿಗೊಡು. ನನ್ನ ಕಣ ್ಣೀರನ್ನು ನೋಡಿ ಆತನು ಮೌನವಾಗಿರನು, ಕೀರ್ತ.39:12
434ದೇವರು ನನ್ನ ಮೊರೆಗೆ ಲಕ್ಷಿಸಿ ಕೇಳಿದ್ದಾನಲ್ಲಾ. ಕೀರ್ತ.66:19
435ನನ್ನ ಪ್ರಾರ್ಥನೆಯನ್ನು ತಳ್ಳಿ ಹಾಕದೆಯೂ ಕೃಪೆಯೂ ನನ್ನನ್ನು ಬಿಟ್ಟುಹೋಗದೆಯೂ ಇರುವ ದೇವರಿಗೆ ಸ್ತೋತ್ರವುಂಟಾಗಲಿ ಕೀರ್ತ.66:20
436ದಿಕ್ಕೆಟ್ಟವನ ಪ್ರಾರ್ಥನೆಯನ್ನು ಅಲಕ್ಷ ಮಾಡದೆ ಯಾವಾಗಲೂ ನನ್ನ ಮೊರೆಯನ್ನು ಕೇಳಿ ಅಂಗೀಕರಿಸುವ ದೇವರಿಗೆ ಮಹಿಮೆಯುಂಟಾಗಲಿ ಕೀರ್ತ.102:15
437ಕರ್ತನ ಮುಂದೆ ನನ್ನ ಪ್ರಾರ್ಥನೆಯು ಅಂಗೀಕೃತವಾಗುತ್ತದೆ. ಅದು ಮಾತ್ರವಲ್ಲದೇ ನನ್ನ ಪ್ರಾರ್ಥನೆಯು ಆಗನಿಗೆ ಪ್ರಿಯವಾಗಿರುತ್ತದೆ. ಜ್ಞಾನೋ.15:8
438ದುರ್ಮಾರ್ಗಿಗಳಿಗೆ ಕರ್ತನು ದೂರವಾಗಿರುವನು. ನೀತಿವಂತನಾದ ನನ್ನ ಪ್ರಾರ್ಥನೆಯನ್ನು ಕೇಳುವನು. ಜ್ಞಾನೋ.15:29
439ಮೇಲಾಗಿ ನಾನು ವಿಶ್ವಾಸವುಳ್ಳವನಾಗಿ ನಂಬಿಕೊಂಡ ಪ್ರಾರ್ಥನೆಯಲ್ಲಿ ಏನೇನು ಬೇದಿಕೊಳ್ಳುವಿರೋ ಅದನ್ನೆಲ್ಲಾ ಹೊಂದುವಿರಿ. ಮತ್ತಾ.21:22
440ನಾನು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸುವೆನು. ಮತ್ತಾ.26:4