441ಕರ್ತನು ನನ್ನ ಮೇಲೆ ಕೃಪೆಯ ಆತ್ಮನನ್ನು ವಿಜ್ಞಾಪನೆಯ ಆತ್ಮವನ್ನು ಸುರಿಸುವುದರಿಂದ, ಆತ್ಮಭಾರದಿಂದ ನಾಶ ಹೊಂದುತ್ತಿರುವ ಆತ್ಮಗಳಿಗಾಗಿ ಬಾಗಿಲಿನ ಹೊರಗೆ ನಿಂತು ಪ್ರಾರ್ಥಿಸುವೆ. ಜೆಕ.12:10
442ಪ್ರಾರ್ಥನಾ ವೀರನಾಗಿರುವ ಯೇಸು ಕ್ರಿಸ್ತನು ಪರಿಶುದ್ಧಾತ್ಮನು ನನ್ನ ಕೂಡ ಒಂದಾಗಿ ಪ್ರಾರ್ಥಿಸುವರು. ಆದುದರಿಂದ ನನ್ನ ಪ್ರಾರ್ಥನೆಗಳಿಗೆ ತಂದೆಯು ಉತ್ತರ ಕೊಡುವನು.
443ನಂಬಿಕೆಯಲ್ಲಿ ಸಂತೋಷವಾಗಿರುವೆನು. ಉಪದ್ರವದಲ್ಲಿ ತಾಳ್ಮೆಯಿಂದಿರುವೆ. ಪ್ರಾರ್ಥನೆಯಲ್ಲಿ ಸ್ಥಿರನಾಗಿ ನಿಂತಿರುವೆ. ರೋಮಾ.12:12
444ಯಾವ ಸಮಯದಲ್ಲೂ ಸಕಲ ವಿಧವಾದ ಬೇಡಿಕೆಗಳಿಂದಲೂ ವಿಜ್ಞಾಪಣೆಗಳಿಂದಲೂ ಆತ್ಮನಿಂದ ಪ್ರಾರ್ಥಿಸಿ ಅಧಿಕ ಮನ ಸಂತೋಷದಿಂದಿರುವೆನು. ಎಫೆ.6:18
445ನಾನು ಯಾವುದಕ್ಕೂ ಚಿಂತಿಸದೆ ಎಲ್ಲಾ ವಿಷಯಗಳಿಗೆ ಕುರಿತು ನನ್ನ ವಿಜ್ಞಾಪನೆಗಳನ್ನು ಸ್ತೋತ್ರದಿಂದ ಕೂಡಿದ ಪ್ರಾರ್ಥನೆಯಿಂದಲೂ ದೇವರಿಗೆ ತಿಳಿಯಪಡಿಸುವೆನು. ಫಿಲಿ.4:6
446ಎಡಬಿಡದೇ ಪ್ರಾರ್ಥಿಸುವೆನು; ಸ್ತೋತ್ರದೊಡನೆ ಪ್ರಾರ್ಥನೆಯಲ್ಲಿ ನೆಲೆಗೊಂಡಿರುವೆನು. ಕೊಲೊ.4:2
447ನನ್ನ ದೇವರು ಪ್ರಾರ್ಥನೆಯನ್ನು ಕೇಳುವಾತನಾಗಿರುವುದರಿಂದ ಎಲ್ಲ ಜನರಿಗಾಗಿಯೂ ವಿಜ್ಞಾಪನೆಗಳನ್ನು, ಪ್ರಾರ್ಥನೆಗಳನ್ನು, ಬೇದಿಕೆಗಳನ್ನು ಸ್ತೋತ್ರಗಳನ್ನೂ ನಾನು ಮಾಡುವೆನು 1 ತಿಮೋ.2:2
448ನಂಬಿಕೆಯುಳ್ಳ ಪ್ರಾರ್ಥನೆಯು ರೋಗಿಗಳನ್ನು ಸ್ವಸ್ಥ ಮಾಡುತ್ತದೆ. ಯಾಕೋ.5:15
449ಎಲ್ಲಾದಕ್ಕೂ ಅಂತ್ಯವು ಸಮೀಪವಾಯಿತು. ಆದುದರಿಂದ ನೀವು ಜಿತೇಂದ್ರಿಯರಾಗಿಊ ಪ್ರಾರ್ಥನೆಗೆ ಸಿದ್ದರಾಗುವಂತೆ ಸ್ವಸ್ಥ ಚಿತ್ತರಾಗಿಯೂ ಇರ್ರಿ. 1 ಪೇತ್ರ 4:7
450ನಾನಾದರೋ ಅತಿ ಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರ ಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿ ಹೊಂದುತ್ತಾ ಪವಿತ್ರಾತ್ಮ ಪ್ರೇರಿತರಾಗಿ ಪ್ರಾರ್ಥನೆ ಮಾಡುತ್ತಾ ನಿತ್ಯ ಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರು ನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ. ಯೂದ.20
451ಭಯವೂ ಸಂಕಟವೂ, ಕಳವಳವೂ ನನ್ನನ್ನು ತಟ್ಟದು
452ನಾನು ದೇವರನ್ನು ನಂಬಿದ್ದೇನೆ. ಆದ್ದರಿಂದ ನಾನು ಭಯಪಡುವುದಿಲ್ಲ. ಕೀರ್ತ 56:4
453ನಾನು ಕರ್ತನನ್ನು ಹುಡುಕಿದೆನು. ಆತನು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿ ಸದುತ್ತರವನ್ನು ಕೊಟ್ಟು ತಪ್ಪಿಸಿದನು ಕೀರ್ತ.34:4
454ನಾನು ದೇವರ ಮಗನು. ನಾನು ಕೇಡಿಗೆ ಹೆದರೆನು ಕೀರ್ತ.23:4
455ದೇವರು ನಮಗೆ ಕೊಟ್ಟಿರುವುದು ಆತ್ಮನ ಬಲ, ಪ್ರೀತಿ, ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ 2 ತಿಮೋ.1:7
456ಕರ್ತನು ನನ್ನನ್ನು ಬಲಪಡಿಸಿ ನನಗೆ ಸಹಾಯ ಮಾಡುವನು. ಯೆಶಾ.41:10
457ಯುಗಯುಗಾಂತರಕ್ಕೂ ನೀವು ನಾಚಿಕೆಗೀಡಾಗುವುದಿಲ್ಲ. ಮಾನಭಂಗ ಪಡುವುದಿಲ್ಲ. ಯೆಶಾ.45:17
458ಕರ್ತನು ನಮ್ಮ ಪಕ್ಷದಲ್ಲಿರುವುದರಿಂದ ನಾನು ಭಯಪಡುವುದಿಲ್ಲ. ಕೀರ್ತ.118:6
459ಕರ್ತನು ನನ್ನ ಬಲಪಾರ್ಶ್ವದಲ್ಲಿರುವುದರಿಂದ ನಾನು ಅಗಲುವುದಿಲ್ಲ. ಕೀರ್ತ 16:8
460ಕರ್ತನು ತನ್ನ ಕಣ್ಣು ಗುಡ್ಡೆಯಂತೆ ನನ್ನನ್ನು ಕಾಪಾಡುವನು ಕೀರ್ತ.17:8