461ಕರ್ತನು ನನ್ನ ಮೇಲೆ ಪ್ರೀತಿಯಿಂದ ಇರುವುದರಿಂದ ಎಲ್ಲ ಕೇಡಿನಿಂದ ನನ್ನನ್ನು ತಪ್ಪಿಸುತ್ತಾನೆ. ಕೀರ್ತ 18:19
462ಕಷ್ಟ ಕಾಲದಲ್ಲಿ ಆತನೇ ನನ್ನನ್ನು ಬಿಡದೆ ಕಾಪಾಡುವನು ಕೀರ್ತ.50:15.
463ನಾನು ಭಯಪಡುವುದಿಲ್ಲ; ಕಳವಳದಿಂದ ದೂರವಿರುವೆನು. ಅದು ನನ್ನನ್ನು ಬಾಧಿಸುವುದಿಲ್ಲ. ಯೆಶಾ.54:14
464ನನ್ನ ಒಂಟಿತನದಲ್ಲಿ ಭಯಪಡುವುದಿಲ್ಲ.
465ನಾನು ಅನಾಥನಲ್ಲ, ಸೇನಾಧೀಶ್ವರನಾದ ಕರ್ತನು ನಮ್ಮ ಸಂಗಡ ಇದ್ದಾನೆ. ಯಾಕೋಬ್ಯನ ವಂಶದವರ ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ. ಕೀರ್ತ.46:7
466ಕರ್ತನು ನನ್ನ ಸಂಗಡ ಯಾವಾಗಲೂ ಇರುವನು. ಆತನು ನನ್ನನ್ನು ಬಿಟ್ಟು ಇರುವುದಿಲ್ಲ. ನನ್ನನ್ನು ಕೈಬಿಡುವುದಿಲ್ಲ. ಯೆಹೋ.1:5
467ನನ್ನ ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸಗಳ ತನಕ ನನ್ನ ದೇವರು ನನ್ನ ಸಂಗಡವಿರುವನು. ಮತ್ತಾ.28:20
468ನನ್ನ ದೇವರ ನಾಮವು ಇಮ್ಮಾನುವೇಲ್ ಅಂದರೆ ದೇವರು ನಮ್ಮ ಕೂಡ ಇದ್ದಾನೆಂದು ಆ ಹೆಸರಿನ ಅರ್ಥ ಮತ್ತಾ.1:23
469ನನ್ನನ್ನುದ್ಧರಿಸಲು ನಾನೇ ನಿನ್ನೊಂದಿಗಿರುವೆನು. ಯೆರೆ 1:19
470ನನ್ನನ್ನುದ್ಧರಿಸಲು ಕರ್ತನು ತಾನೇ ನನ್ನೊಂದಿಗಿರುವನು ಯೆರೆ.15:20
471ನನ್ನನ್ನು ಕಾದು ಕಾಪಾಡಲು ದೇವರು ನನ್ನೊಂದಿಗಿರುವನು ಯೆರೆ.1:8
472ಕರ್ತನು ನನ್ನನ್ನು ಎಲ್ಲಾ ಕೇಡಿನಿಂದ ತಪ್ಪಿಸುವನು. ನಿನ್ನ ಪ್ರಾಣವನ್ನು ಕಾಯುವನು ಕೀರ್ತ 121:7
473ನನ್ನ ಜೊತೆಯಲ್ಲಿರುವ ಕರ್ತನು ನಂಬಿಗಸ್ತನು. ಆತನು ನನ್ನನ್ನು ಸ್ಥಿರಪಡಿಸಿ ಕೇಡಿನಿಂದ ತಪ್ಪಿಸಿ ಕಾಪಾಡುವನು. ಕೀರ್ತ.121:8
474ರಾತ್ರಿ ಕಾಲದಲ್ಲಿ ಪೌಲನಿಗೆ ಕರ್ತನು ದರ್ಶನ ಕೊಟ್ಟು ನೀನು ಹೆದರಬೇಡ ಸುಮ್ಮನಿರದೇ ಮಾತಾಡುತ್ತಲೇ ಇರು. ನಾನೇ ನಿನ್ನೊಂದಿಗಿರುತ್ತೇನೆ. ಯಾರೂ ನಿನ್ನ ಮೇಲೆ ಬಿದ್ದು ಕೇಡು ಮಾಡುವುದಿಲ್ಲ ಅ.ಕೃ.18:9,10
475ಕರ್ತನು ಮೋಶೆಯ ಜೊತೆಯಲ್ಲಿದ್ದಂತೆಯೇ ಯೆಹೋಶುವನ ಸಂಗಡಲು ಇದ್ದನು. ಅದರಂತೆಯೇ ಈ ಹೊತ್ತು ನನ್ನ ಸಂಗಡ ಇರುವನು ಯೆಹೋ.1:5
476ಈ ಜೀವನದ ಪ್ರಯಾಣದಲ್ಲಿ ಕರ್ತನು ನನ್ನ ಸಂಗಡ ಬರುವನು. ಆತನು ನನ್ನೊಡನೆ ಬರುವುದರಿಂದ ಭೂಮಿಯ ಮೇಲಿರುವ ಜನರಿಗಿಂತಲೂ ನಾನು ವಿಶೇಷವಾದವನಾಗಿದ್ದೇನೆ. ವಿಮೋ.33:16
477ಕರ್ತನು ನನ್ನೊಡನೆ ಬರುವುದರಿಂದ ದೇವದೂತರುಗಳು ಕೆರೂಬಿಯರು, ಸೆರಾಫಿಯರು ಮಾತ್ರವಲ್ಲದೆ ಇಡೀ ಪರಲೋಕವೇ ನನ್ನ ಸಂಗಡ ಬರುವುದು.
478ನನಗಾಗಿ ದೇವರು ಎದ್ದು ಹೊರಡುವಾಗ ಆತನ ವೈರಿಗಳು ಚದುರಿ ಬೆಂಗೆಟ್ಟು ಓಡಿ ಹೋಗುವರು. ಕೀರ್ತ 56:1
479ಆತನು ನನ್ನೊಡನೆ ನನ್ನ ಪಕ್ಷದಲ್ಲಿರುವುದರಿಂದ ನನಗೆ ವಿರೋಧವಾಗಿರುವವರ್ಯಾರು ರೋಮಾ.8:31
480ಇಸ್ರಾಯೇಲ್ ಜನರೊಡನೆ ಹಗಲಲ್ಲಿ ಮೇಘಸ್ತಂಭವೂ, ಇರುಳಲ್ಲಿ ಅಗ್ನಿ ಸ್ತಂಭವನ್ನು ಕಳಿಸಿದಂತೆ ದೇವರ ಸಮೂಹವು ದೇವ ಪ್ರಸನ್ನತೆಯು ನನ್ನ ಸಂಗಡ ಬರುವುದು.