481ಕರ್ತನ ಸಮೂಹವು ನನ್ನ ಮುಂಭಾಗದಲ್ಲಿ ಹಾದು ಹೋಗುವುದು. ಅದು ನನಗೆ ವಿಶ್ರಾಂತಿಯನ್ನುಂಟು ಮಾಡುವುದು. ವಿಮೋ.33:14
482ತಡೆಗಳನ್ನು ಒಡೆದು ಹಾಕುವವನು ನನ್ನ ಮುಂಭಾಗದಲ್ಲಿ ಹೊರಟು ಹೋಗುವನು. ನಮ್ಮ ತಡೆಗಳನ್ನು ನೀಗಿಸಿ ಬಾಗಿಲಲ್ಲಿ ಪ್ರವೇಶಿಸಿ ಹಾದು ಹೋಗುವೆನು. ನನ್ನ ರಾಜನು ನನ್ನ ಮುಂದೆ ಹೋಗುವನು. ಮೀಕ 2:13
483ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು ನನ್ನ ದೇವರ ಸಹಾಯದಿಂದ ಪ್ರಾಕಾರವನ್ನು ಹಾರುವೆನು ಕೀರ್ತ.18:29
484ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ. ಅವನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ. ಕೀರ್ತ.16:11
485ಕರ್ತನ ಸಮ್ಮುಖದಲ್ಲಿ ಮಾನ ಮಹಿಮೆಗಳೂ ಆತನ ಪವಿತ್ರಾಲಯದಲ್ಲಿ ಬಲ ಸಂತೋಷಗಳು ಇರುತ್ತವೆ. 1 ಪೂರ್ವ.16:27.
486ಮಾರ ಎಂಬ ನೀರನ್ನು ಮಧುರವನ್ನಾಗಿ ಮಾಡಿದ ಕರ್ತನು ಇಸ್ರಾಯೇಲ್ಯರ ಜೊತೆ ನಡೆದು ಬಂದ ರೀತಿಯಂತೆ ನನ್ನ ಬಲವನ್ನು ಮಧುರ ಮಾಡುವ ಕರ್ತನಾಗಿ ಜೊತೆಯಲ್ಲಿ ಬರುವನು ಎಫೆ.15:25
487ಇಸ್ರಾಯೇಲ್ಯರೊಡನೆ ಕೂಡಿ ನಡೆದ ದೈವೀಕವಾದ ಬಂಡೆಯಾದ ಕರ್ತನು ನನ್ನೊಡನೆ ಬರುವನು. ಹಾಗೆಯೇ ನಾನು ದೈವೀಕವಾದ ಒಂದೇ ನೀರನ್ನು ಕುಡಿಯುವೆನು 1 ಕೊರಿ.10:4
488ಕರ್ತನು ಕೊಡುವ ನೀರನ್ನು ಕುಡಿಯುವವನಿಗೆ ಎಂದೆಂದಿಗೂ ನೀರಡಿಕೆಯಾಗುವುದಿಲ್ಲ. ನಾನು ಕೊಡುವ ನೀರು ಅವನಲ್ಲಿ ಒಕ್ಕುವ ಒರತೆಯಾಗಿದ್ದು ನಿತ್ಯ ಜೀವವನ್ನುಂಟು ಮಾಡುವುದು. ಯೋಹಾ 4:14
489ನೀನಂತೂ ಹೆದರಬೇದ ನಾನೇ ನಿನ್ನೊಂದಿಗಿದ್ದೇನೆ. ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು. ನನ್ನೊಳಗೆ ನಿತ್ಯಜೀವವು ಕಾಲವೆಲ್ಲಾ ಕೊಡುವದಾಗಿ ನಿತ್ಯ ನಿರಂತರವಾಗಿರುವದು.
490ನಾನು ನೀರಿನಲ್ಲಿ ಹಾದು ಹೋಗುವಾಗ ಕರ್ತನು ನನ್ನ ಜೊತೆಯಲ್ಲಿರುವನು. ನದಿಯನ್ನು ದಾಟುವಾಗ ಅದು ನನ್ನನ್ನು ಮುಣುಗಿಸುವದಿಲ್ಲ.
491ನೀನು ಉರಿಯಲ್ಲಿ ನಡೆಯುವಾಗ ನೀನು ಕಂದದಿರುವಿ. ಜ್ವಾಲೆಯು ನಿನ್ನನ್ನು ದಹಿಸದು. ಯೆಶಾ.43:2
492ನನ್ನೊಡನೆ ಇದ್ದು, ನನ್ನ ದೇವರು ಮಾಡುವಂಥ ಮಹತ್ಕಾರ್ಯಗಳು ಬಹು ಭಯಂಕರವಾಗಿರುವುದು. ವಿಮೋ.34:10
493ಸೆರೆಮನೆಯಲ್ಲಿ ಯೋಸೇಫನೊಡನೆ ಸುತ್ತಲು ಇದ್ದು ಅವನನ್ನು ಎಲ್ಲದರಲ್ಲೂ ರಕ್ಷಿಸಿ ಕಾಪಾಡಿದ ಕ್ರಿಸ್ತನು ನಾನು ಮಾಡುವ ಕಾರ್ಯಗಳನ್ನು ಮಾಡುವನು ಆದಿ.39:2
494ಸಿಂಹಗಳ ಗವಿಯಲ್ಲಿ ಹಾಕಿದುದಾಗಿ ದಾನಿಯೇಲನಿಗೆ ಜಯವನ್ನು ಕೊಟ್ಟು ನನ್ನೊಂದಿಗಿದ್ದು ನನಗೂ ಜಯವನ್ನು ಕೊಡುವನು. ದಾನಿ.6:28
495ಕರ್ತನು ನನಗಾಗಿ ಎಲ್ಲವನ್ನೂ ಮಾಡಿ ಮುಗಿಸುವನು ಕೀರ್ತ.138:8
496ಕರ್ತನೇ ನನ್ನ ಬಂಡೆಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ. ಕೀರ್ತ.18:2
497ನನ್ನ ಗುರಾಣ ಯೂ ನನ್ನ ರಕ್ಷಣೆಯ ಕೊಂಬೂ ನನ್ನ ದುರ್ಗವೂ ಆಗಿದ್ದಾನೆ. ಕೀರ್ತ 18:2
498ಕಷ್ಟ ಕಾಲದಲ್ಲಿ ಕರ್ತನೇ ನನಗೆ ಆಧಾರವಾಗಿದ್ದಾನೆ. ಕೀರ್ತ.18:7
499ನೀತಿವಂತನಿಗೆ ಸಂಭವಿಸುವ ಕಷ್ಟಗಳು ಅನೇಕವಿದ್ದರೂ ಕರ್ತನು ಅವೆಲ್ಲವುಗಳಿಂದ ಅವನನ್ನು ಬಿಡಿಸುವನು. ಕೀರ್ತ.34:19
500ಕರ್ತನ ಕಣ್ಣುಗಳು ನನಗೆ ಅದ್ಭುತ ಮಾಡುವಂತೆ ಯಾವಾಗಲೂ ಆತನ ದೃಷ್ಟಿಯಲ್ಲಿರುವುದು. ಕೀರ್ತ.34:15