501ಕರ್ತನು ನಿನ್ನ ಹೆಸರಿಡಿದು ಕರೆದನಲ್ಲಾ ನಾನು ಆತನವನು. ಆತನು ನನ್ನವನು. ಯೆಶಾ. 43:1
502ನಾನು ಕೂಗಿಕೊಳ್ಳುವಾಗ ಕರ್ತನು ತಕ್ಷಣ ಸದುತ್ತರವನ್ನು ದಯಪಾಲಿಸುತ್ತಾನೆ. ಯೆಶಾ.58:9
503ಅನಾದಿ ದೇವರೇ ನೀನು ನನಗೆ ನಿವಾಸ ಸ್ಥಾನ. ಆತನ ಹಸ್ತವೇ ನನಗೆ ಆಧಾರ. ಧರ್ಮೋ.33:27
504ನಾನು ಬಿದ್ದು ಹೋಗುವದಿಲ್ಲ. ಕರ್ತನ ಕರಗಳು ನನ್ನನ್ನು ಹಿಡಿದಿರುವುದು. ಕೀರ್ತ.34:24
505ಕರ್ತನು ನನ್ನ ಬಲಗೈಯನ್ನು ಹಿಡಿದಿರುವನು. ನಾನು ಕೈ ಬಿಡಲ್ಪಡುವುದಿಲ್ಲ. ಯೆಶಾ.41:13
506ಕರ್ತನು ನನ್ನು ಅಂಗೈಗಳಲ್ಲಿ ಬರೆದಿರುವನು. ನನ್ನನ್ನು ಮರೆಯುವುದಿಲ್ಲ. ಯೆಶಾ.49:15,16
507ಕರ್ತನು ನನ್ನ ರಕ್ಷಕನು, ನನ್ನ ವಿಮೋಚಕನೂ ಆಗಿರುವುದನ್ನು ನರಜನ್ಮದವರೆಲ್ಲರಿಗೂ ಗೊತ್ತಾಗುವುದು. ಯೆಶಾ.9:26
508ಕರ್ತನು ನನಗೆ ಸಹಾಯ ಮಾಡುವನು. ಯೆಶಾ. 50:7
509ಕರ್ತನು ನಿತ್ಯವೂ ನನ್ನನ್ನು ನಡಿಸುವನು. ಯೆಶಾ. 58:11
510ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ. ಕರ್ತನ ಮಹಿಮೆಯು ನನಗೆ ಕಾಣಲ್ಪಡುವುದು ಯೆಶಾ.60:2
511ಹಾರಾಡುವ ಹಕ್ಕಿಯಂತೆ ಸೇನಾಧೀಶ್ವರನಾದ ಕರ್ತನು ನನ್ನನ್ನು ಕಾಪಾಡುವನು. ಯೆಶಾ.31:5
512ನನ್ನ ಶತೃಗಳ ಮುಂಭಾಗದಲ್ಲಿ
513ಕರ್ತನು ನನ್ನ ಸಂಗದ ವ್ಯಾಜ್ಯ ಮಾಡುವವರೊಡನೆ ವ್ಯಾಜ್ಯ ಮಾಡುತ್ತಾನೆ. ಕೀರ್ತ.35:1
514ಕರ್ತನು ನನ್ನ ಮೇಲೆ ಯುದ್ಧ ಮಾಡುವವರ ಸಂಗಡ ಯುದ್ಧ ಮಾಡುತ್ತಾನೆ. ಕೀರ್ತ.35:1
515ಯುದ್ಧವು ಕರ್ತನದು, ಸೋಲು ಸೈತಾನನದು, ಜಯವು ನನ್ನದು ವಿಮೋ.14:14
516ನನ್ನ ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ ನನ್ನ ತಲೆಗೆ ತೈಲವನ್ನು ಹಚ್ಚಿಸುತ್ತೀ ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ. ಕೀರ್ತ.23:5
517ಲೋಕದಲ್ಲಿರುವವನಿಗಿಂತ ನಿಮ್ಮಲ್ಲಿರುವಾತನು ಹೆಚ್ಚಿನವನು. 1 ಯೋಹಾ.4:7
518ನನಗೆ ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು ಯೆಶಾ.54:17
519ನನ್ನ ಮೇಲೆ ಕಿಡಿಯಾದವರು ಆಶಾಭಂಗ ಪಟ್ಟು ಅವಮಾನ ಹೊಂದುವರು. ನನ್ನ ಸಂಗಡ ವ್ಯಾಜ್ಯ ಮಾಡಿದವರು ನಾಶವಾಗಿ ಇಲ್ಲದೇ ಹೋಗುವರು. ಯೆಶಾ41:11,12
520ಕರ್ತನು ನನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವನು. ಹೌದು ಕ್ರೂರರ ಕೈಯಿಂದ ರಕ್ಷಿಸುವನು. ಯೆರೆ.16:21