521ಕರ್ತನು ನನ್ನ ಮುಂದೆ ಹೋಗಿ ದಿಣ್ಣೆಗಳನ್ನು ಸಮ ಮಾಡುವನು. ಯೆಶಾ.45:2
522ಯಾರು ನನ್ನ ಮೇಲೆ ವ್ಯಾಜ್ಯ ಮಾಡುತ್ತಾರೋ ಅವರು ನನ್ನ ನಿಮಿತ್ತ ಕೆಡವಲ್ಪಡುವರು. ಅವರು ನನ್ನ ಪಕ್ಷಕ್ಕೆ ಬರುವರು ಯೆಶಾ.54:15
523ನನ್ನನ್ನು ಅಸಡ್ಡೆ ಮಾಡಿದವರು ನನ್ನ ಕಾಲ ಕೆಳಗೆ ಅಡ್ಡ ಬೀಳುವಂತೆ ಕರ್ತನು ಮಾಡುವನು. ಯೆಶಾ.60:14
524ಈ ಹೊತ್ತು ಕಂಡ ಐಗುಪ್ತ್ಯರನ್ನು ಇನ್ನು ಮುಂದೆ ಕಾಣುವುದಿಲ್ಲ. ವಿಮೋ.14:13
525ನನ್ನನ್ನು ಹರ್ಷಿಸುವಂತೆ ಮಾಡುವಾತನೇ ಆಗಿದ್ದಾನೆ.
526ಕರ್ತನ ಮೇಲೆ ನನ್ನ ಚಿಂತಾಭಾರವನ್ನು ಹಾಕಿದೆನು. ಆತನು ನನ್ನನ್ನು ಉದ್ಧಾರ ಮಾಡುವನು. ಕೀರ್ತ.55:2
527ನನ್ನ ದೇವರು ಪ್ರೀತಿಯಿಂದ ನನ್ನನ್ನು ವಿಚಾರಿಸಿ ತಿಳಿದುಕೊಳ್ಳುವನು. ಆದುದರಿಂದ ನನ್ನ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿದ್ದೇನೆ. 1 ಪೇತ್ರ 5:7
528ನಿಶ್ಚಯವಾಗಿಯೂ ಕೊನೆಯುಂಟು. ನನ್ನ ನಂಬಿಕೆಯು ನಿರರ್ಥಕವಾಗದು. ಜ್ಞಾನೋ.23:18
529ನಾನು ಕಾದಿದ್ದು ಕ್ರಿಸ್ತನೇ ದೇವರೆಂದು ತಿಳಿದುಕೊಳ್ಳಲು ಕೀರ್ತ.46:10
530ಅತಿ ಬೇಗನೇ ನಿಮ್ಮ ದುಃಖವು ಹೋಗಿ ಸಂತೋಷವನ್ನು ಹೊಂದುವಿರಿ. ಯೋಹಾ.16:20
531ನನಗೆ ಸಂತೋಷವೂ ಉಲ್ಲಾಸವೂ ಉಂಟಾಗುವುದು. ಲೂಕ1:14
532ಕರ್ತನಲ್ಲಿ ಉಲ್ಲಾಸದಿಂದಿರುವುದು ನನಗೆ ಬಹುಬಲವಾಗಿದೆ. ನೆಹೆ.8:10
533ನಾನು ದುಃಖಿಸುವ ದಿನಗಳು ಕೊನೆಗಾಣುವುದು ಯೆಶಾ.60:20
534ನನ್ನ ಕಣ ್ಣೀರನ್ನೆಲ್ಲಾ ಕರ್ತನು ಒರೆಸಿ ಬಿಡುವನು. ಪ್ರಕ 21:4
535ಕಣ ್ಣೀರಿನ ತಗ್ಗನ್ನು ಒರತೆಗಳ ನೀರಿನ ಸ್ಥಳವಾಗ ಮಾಡಿಕೊಳ್ಳುವೆನು. ಕೀರ್ತ.84:6
536ನಾನು ಅನುಭವಿಸಿದ ಅವಮಾನದ ದಿನಗಳನ್ನು ಬದಲಾಯಿಸಿ ಎರಡರಷ್ಟು ಮಾನವನ್ನು ಹೊಂದುವೆನು. ಯೆಶಾ.61:7
537ಕರ್ತನಲ್ಲಿ ನಾನು ಯಾವಾಗಲೂ ಸಂತೋಷದಿಂದಿರುವೆನು. ಫಿಲಿ.4:4
538ನಾನು ಯಾವುದಕ್ಕೂ ಚಿಂತಿಸುವುದೇ ಇಲ್ಲ. ಎಲ್ಲದ್ದಕ್ಕೂ ಸ್ತೋತ್ರ ಸಲ್ಲಿಸುತ್ತಾ ದೇವರಿಗೆ ತಿಳಿಯಪಡಿಸುವೆನು. ಫಿಲಿ.4:6
539ನಾನು ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವುದನ್ನು ಕಂಡು ಕಲಿತುಕೊಂಡಿದ್ದೇನೆ. ಫಿಲಿ.4:11,12
540ನನ್ನ ಚಂಚಲವು ಸಂತೋಷವಾಗಿಯೂ ನನ್ನ ದುಃಖವು ಆನಂದವಾಗಿಯೂ ಮಾರ್ಪಡುವುದು. ಎಸ್ತೇ.9:21