561ಆ ಬಾಗಿಲು ಅದು ನಂಬಿಗೆಯ ಬಾಗಿಲು. ಅದ್ಭುತದ ಬಾಗಿಲು. ಆರೋಗ್ಯದ ಬಾಗಿಲು. ವಾಗ್ಧಾನದ ಬಾಗಿಲು ಹಾಗೂ ಆಶೀರ್ವಾದಗಳ ಬಾಗಿಲುಗಳೇ.
562ಆ ಬಾಗಿಲು ಇರುಳಿನಲ್ಲಿಯೂ, ಹಗಲಿನಲ್ಲಿಯೂ ನನಗಾಗಿಯೇ ತೆರೆದಿರುವ ಬಾಗಿಲು. ಅದನ್ನು ನಾನು ಕರ್ತನಿಗಾಗಿ ತೆರೆದಿರುವ ಬಾಗಿಲು. ಅದನ್ನು ನಾನು ಕರ್ತನಿಗಾಗಿ ಕೊಡುವೆನು ಯೆಶಾ 60:14
563ಕರ್ತನು ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯುವವನೂ ಯಾರೂ ತೆರೆಯದಂತೆ ಮುಚ್ಚುವವನೂ ಆಗಿರುವನು. ಪ್ರಕ.3:7
564ದಾವೀದನ ಮನೆಯ ಬೀಗದ ಕೈಯನ್ನು ತನ್ನ ಹೆಗಲಿನ ಮೇಲೆ ವಹಿಸಿಕೊಳ್ಳುವಂತೆ ಮಾಡುವನು. ಅವನು ತೆರೆದರೆ ಯಾರೂ ಮುಚ್ಚರು. ಮುಚ್ಚಿದರೆ ಯಾರೂ ತೆರೆಯರು. ಯೆಶಾ.22:22
565ಕ್ರಿಸ್ತನೇ ಆ ಬಾಗಿಲು. ಆತನ ಮೂಲಕವೇ ಪ್ರವೇಶಿಸಿ ರಕ್ಷಿಸಲ್ಪಡುವೆನು. ಯಾವನಾದರು ಒಳಗೆ ಹೋದರೆ ಸುರಕ್ಷಿತವಾಗಿದ್ದು ಒಳಗೆ ಹೋಗುವನು. ಹೊರಗೆ ಬರುವವನು ಮೇವನ್ನು ಕಂಡುಕೊಳ್ಳುವನು. ಯೋಹಾ.10:9
566ಕ್ರಿಸ್ತನೇ ಮಾರ್ತವೂ ಸತ್ಯವೂ ಜೀವವೂ ಆಗಿದ್ದಾನೆ. ಆತನ ಮೂಲಕವಾಗಿಯೇ ತಂದೆಯ ಬಳಿಗೆ ಹೋಗುವ ಭಾಗ್ಯವನ್ನು ಹೊಂದಿರುವೆನು ಯೆಹೋ.14:6
567ಯೆರಿಕೋ ಪಟ್ಟಣದ ಬಾಗಿಲುಗಳು ಹೇಗೆ ಮುಚ್ಚಲ್ಪಟ್ಟು ತಾಮ್ರದ ಕದಗಳನ್ನು ಮುರಿದು ಕಬ್ಬಿಣದ ಬಾಗಿಲುಗಳನ್ನು ಮುರಿಯುವವನು. ಮುಚ್ಚಲ್ಪಟ್ಟ ಬಾಗಿಲುಗಳು ಸ್ತುತಿಯ ಶಬ್ದದ ಮೂಲಕ ತೆರೆಯುವುದು. ಯೆಹೋ.6:1
568ಪೌಲ ಮತ್ತು ಸೀಲರು ಸೆರೆಮನೆಯಲ್ಲಿ ಸ್ತುತಿಸಿದಾಗ ಕದದ ಬಾಗಿಲುಗಳು ತೆರೆದಂತೆ ನನ್ನ ಸ್ತುತಿಯ ಶಬ್ದದ ಮೂಲಕವಾಗಿ ಕದಗಳೆಲ್ಲಾ ತೆರೆಯುವುದು. ಅ.ಕೃ.16:26
569ತಾಮ್ರದ ಕದಗಳನ್ನು ಒಡೆದು ಅಂಧಕಾರದಲ್ಲಿರುವ ಬೊಕ್ಕಸಗಳನ್ನು ನಿಧಿ ನಿಕ್ಷೇಪ ಆಸ್ತಿ-ಪಾಸ್ತಿಗಳನ್ನು ನಮಗೆ ಕೊಡುವನು. ಯೆಶಾ.45:3,4
570ನನಗೆ ಮುಂದಾಗಿ ಕದಗಳನ್ನು ಒಡೆದು ಅಂಧಕಾರದಲ್ಲಿರುವ ಬಾಗದ ಕೈಗಳನ್ನು ಹಾಕಿದಂತೆ ಕದಗಳನ್ನು ತೆರೆದಿರುವ ಕರ್ತನು ನನ್ನ ಮುಂಭಾಗದಲ್ಲಿ ಹೋಗಿ ದಿಣ್ಣೆಗಳನ್ನು ಸಮ ಮಾಡುವನು. ಯೆಶಾ 45:1,2
571ಮರಣ ದ್ವಾರದೊಳಗಿಂದ ನನ್ನನ್ನು ಎತ್ತಿ ಬಿಡುತ್ತಾನೆ. ಆತನ ಸ್ತುತಿಗಳೆಲ್ಲಾ ಚಿಯೋನ್ ಕುಮಾರ್ತೆಯರ ಕದಗಳನ್ನು ವಿವರಿಸುವದು. ಕೀರ್ತ.9:13
572ಆಗ ದೇವರ ರಕ್ಷಣೆಯು ನನ್ನ ಪೌಳಿಗೋಡೆಗಳು ದೇವಸ್ತೋತ್ರವು ನನ್ನ ಬಾಗಿಲುಗಳು ಎಂದು ಅಂದುಕೊಳ್ಳುವಿ.
573ಕೃತಜ್ಞತಾ ಸ್ತುತಿಯೊಡನೆ ಆತನ ಮಂದಿರ ದ್ವಾರಗಳಿಗೂ, ಕೀರ್ತನೆಯೊಡನೆ ಆತನ ಅಂಗಳಗಳಿಗೂ ಬನ್ನಿರಿ. ಆತನ ಉಪಕಾರ ಸ್ಮರಿಸಿರಿ. ಆತನ ನಾಮವನ್ನು ಕೊಂಡಾಡಿರಿ ಕೀರ್ತ.100:4
574ನನ್ನ ನಿವಾಸವು ಬೇತೆಲ್ ಎಂದು ಕರೆಯಲ್ಪಡುವುದು. ಬೇತೆಲ್ ಎಂದರೆ "ದೇವರ ಮನೆ" ಆಕಾಶದ ಬಾಗಿಲು ಎಂದು ಅರ್ಥವಾಗುವುದು. ಆದಿ.28:19
575ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಸಲಾರದಷ್ಟು ಸುವರಗಳನ್ನು ಸುರಿಸಿ ನನ್ನನ್ನು ಆಶೀರ್ವದಿಸುವನು. ಮಲಾ.3:10
576ಇಸ್ರಾಯೇಲ್ ಜನಾಂಗಗಳಿಗೋಸ್ಕರ ಆಕಾಶ ದ್ವಾರಗಳನ್ನು ತೆರೆದು ದೇವದೂತರ ಆಹಾರವಾದ ಧಾನ್ಯಗಳನ್ನು ತಂದವನು, ನನಗೆ ಪರಲೋಕದ ಮನ್ನವನ್ನು ಕೊಡುವನು. ಕೀರ್ತ.23:24
577ನೋಹನ ಕಾಲದಲ್ಲಿ ಆಕಾಶ ತೂಬುಗಳನ್ನು ತೆರೆದು ಮಳೆಯನ್ನು ಸುರಿಸಿದನು. ನಾನು ಹೋಗುವ ಮಾರ್ಗದಲ್ಲೆಲ್ಲಾ ಹಿಂಗಾರು ಮಳೆಯಾಗುವ ಅಭಿಷೇಕವು ಸುರಿಸಲ್ಪಡುವುದು. ಆದಿ.7:11.
578ಎಲ್ಲ ಒಳ್ಳೆಯ ದಾನಗಳು ಕುಂದಿಲ್ಲದ ವರಗಳೂ ಮೇಲಿನಿಂದ ಸಕಲ ವಿಧವಾದ ಬೆಳಕಿಗೂ ಮೂಲ ಕಾರಣನಾದವನಿಂದ ಇಳಿದು ಬರುತ್ತದೆ. ಯಾಕೋ.1:17
579ಎಲೀಯನು ಪ್ರಾರ್ಥಿಸಿದಾಗ ಆಕಾಶವು ತೆರೆದು ಅಗ್ನಿ ಇಳಿದು ಬಂದಂತೆ ನಾನು ಪ್ರಾರ್ಥಿಸುವಾಗೆಲ್ಲಾ ಒಂದು ಅಗ್ನಿ ಅಭಿಷೇಕವು ನನ್ನನ್ನು ತುಂಬಿಸುತ್ತದೆ. ಅರ.18:38
580ಪರಲೋಕದ ರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುವೆನು ಎಂದು ನಿನಗೆ ವಾಗ್ಧಾನ ಮಾಡಿದ್ದಾನೆ. ಮತ್ತಾ.16:19