41ನಾನು ಜೀವವುಳ್ಳ ದೇವರ ಮಗುವೆಂದು ಕರೆಯಲ್ಪಡುವಂತೆ ನನಗೆ ಅಧಿಕಾರ ಕೊಟ್ಟನು. ರೋಮಾ.9:26
42ಮಕ್ಕಳಿಗೆ ತಂದೆ ತಾಯಿಗಳು ದ್ರವ್ಯಗಳನ್ನು ಕೂಡಿಸಿ ಕೊಡುವಂತೆ ಕರ್ತನು ನನಗೆ ಮೇಲ್ಮೆಯಾದ ಪರಲೋಕದ ಬೊಕ್ಕಸಗಳನ್ನು ಶೇಖರಿಸುವನು 2 ಕೊರಿ.12:14
43ನಾನು ಕರ್ತನಿಗೆ ಪ್ರಿಯವಾದ ಮಗುವು ಆತನನ್ನು ಹಿಂಬಾಲಿಸುವ ಬೆಳಕಿನ ಪುತ್ರರೂ ಆಗಿ ನಡೆದುಕೊಳ್ಳುತ್ತೇವೆ ಎಫೆ 5:1,8
44ನಾನು ಕರ್ತನಿಗೆ ನಿರ್ದೋಷ ಮಗುವಾಗಿಯೇ, ವಕ್ರ ಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕ ಮಗುವಾಗಿ ನಡೆದುಕೊಳ್ಳುವೆ. ಫಿಲಿ.2:15
45ನಾನು ಹಗಲಿನ ಮಗುವಾಗಿರುವೆ. ದೇವರು ನನ್ನೊಂದಿಗಿಟ್ಟ ಬೆಳಕನ್ನು ಕಾಯ್ದುಕೊಳ್ಳುವೆ 1 ಥೆಸ.5:5
46ನಾನು ಕರ್ತನಿಗೆ ವಿಧೇಯನಾದ ಮಗುವಾಗಿದ್ದು ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವೆ 1 ಪೇತ್ರ 1:14
47ನಾನು ದೇವ ಮಗುವೆಂದು ಕರೆಯಲ್ಪಡುವದರಿಂದ ತಂದೆಯು ಎಂಥಾ ಪ್ರೀತಿಯನ್ನಿಟ್ಟಿದ್ದಾನೆಂದು ನೋಡಿರಿ 1 ಯೋಹಾ.3:1
48ಇಂದಿನಿಂದ ನಾನು ದೇವರ ಮಗುವಾಗಿರುತ್ತೇನೆ. ಕ್ರಿಸ್ತನು ಬೆಳಕಿನವನಾಗಿರುವುದರಿಂದ ನಾನು ಆತನನ್ನು ದರ್ಶಿಸುವುದರಿಂದ ಆತನಿಗೆ ನಾನು ಒಪ್ಪಿಗೆಯಾಗಿರುವೆನು 1 ಯೋಹಾ. 3:2
49ನಾನು ದೇವ ಮಗುವಾಗಿರುವುದರಿಂದ ನಾನು ಸೈತಾನನನ್ನು ಜೈಯಿಸುವೆನು. ಯಾಕೆಂದರೆ ಲೋಕದಲ್ಲಿರುವವನಿಗಿಂತ ನಿಮ್ಮೊಳಗಿರುವಾತನು ಹೆಚ್ಚಿನವನು . 1 ಯೋಹಾ 4:4
50ನಾನು ಸತ್ಯವಂತನಾಗಿ ನಡೆಯುವದನ್ನು ಕಂಡು ಕರ್ತನು ನನ್ನನ್ನು ನೋಡಿ ಬಹಳ ಆನಂದಿಸುವನು 2 ಯೋಹಾ.1:4
51ನಾನು ಯೇಸು ಕ್ರಿಸ್ತನ ಮೂಲಕವಾಗಿ ಅಬ್ರಹಾಮನ ಮಗನೂ ದಾವೀದನ ಸಂತತಿಯವನೂ ಆಗಿದ್ದೇನೆ; ಅಬ್ರಹಾಮನಿಗೆ ಕೊಡಲ್ಪಟ್ಟಿರುವ ವಾಗ್ಧಾನಗಳೆಲ್ಲವೂ ನನಗೆ ಸ್ವಂತ ರೋಮಾ.9:7, ಮತ್ತಾ.1:1
52ಪುನರುತ್ಥಾನವನ್ನು ಹೊಂದಿದವರಾಗಿದ್ದು ದೇವದೂತರಿಗೆ ಸರಿಸಮಾನರೂ, ದೇವರ ಮಕ್ಕಳೂ ಆಗಿದ್ದೇವೆ. ಲೂಕ 20:36
53ನಾನು ಪರಾತ್ಪರನ ಮಗುವಾಗಿರುವುದರಿಂದ ಶತ್ರುಗಳನ್ನು ಪ್ರೀತಿಸಿ ಒಳ್ಳೆಯದನ್ನು ಮಾಡುತ್ತೇನೆ. ಧೈರ್ಯವನ್ನು ಬಿಡದೇ ಸಾಲ ಕೊಡಿರಿ. ಲೂಕ 6:35
54ನಾನು ದೇವ ಮಗುವಾಗಿ ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ಬೆಳೆಯುವೆನು. ದೇವರ ಕೃಪೆಯು ನನ್ನ ಮೇಲಿರುತ್ತದೆ. ಲೂಕ 2:40
55ನಾನು ಶಿಶುಭಾವದಿಂದ ತಗ್ಗಿಸಿಕೊಂಡು ದೇವರ ರಾಜ್ಯವನ್ನು ಅಂಗೀಕರಿಸುತ್ತೇನೆ. ನಾನು ನಿಶ್ಚಯವಾಗಿ ಅದರಲ್ಲಿ ಪ್ರವೇಶಿಸುವೆನು. ಮಾರ್ಕ 10:15.
56ನಾನು ಮಗುವಾಗಿರುವುದರಿಂದ ಮಕ್ಕಳ ರೊಟ್ಟಿಯಾಗಿರುವ ದೈವೀಕ ಸುಖವು ದೈವೀಕ ಆರೋಗ್ಯವೂ ನನಗುಂಟು. ಮತ್ತಾ.15:26
57ನಾನು ನನ್ನ ಮಕ್ಕಳಿಗೆ ಒಳ್ಳೆಯ ಪದಾರ್ಥಗಳನ್ನು ಕೊಡಲು ತಿಳಿದವನಾಗಿರುವುದರಿಂದ ಪರಲೋಕ ತಂದೆಯು ನನಗೆ ಪರಿಶುದ್ಧಾತ್ಮನ ವರಗಳನ್ನು, ಒಳ್ಳೆಯ ಫಲಗಳನ್ನೂ, ಒಳೆಯ ಪದಾರ್ಥಗಳನ್ನೂ ಕೊಡಲು ತಿಳಿದಿರುವನು ಮತ್ತಾ.7:11
58ತಂದೆಯು ಮಕ್ಕಳನ್ನು ಕನಿಕರಿಸುವಂತೆ ಕರ್ತನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ ಕೀರ್ತ. 103:13
59ಒಬ್ಬ ಹೆಂಗಸು ತಾನು ಹೆತ್ತ ಮಗುವಿನ ಮೇಲೆ ಕರುಣೆಯಿಡದೇ ತನ್ನ ಮೊಲೆ ಕೂಸುಗಳನ್ನು ಮರೆತಾಳೇ? ಒಂದು ವೇಳೆ ಮರೆತರೂ ನಾನಾದರೆ ನಿನ್ನನ್ನು ಮರೆಯೇ. ನನ್ನ ದೇವರು ಎಂದಿಗೂ ನನ್ನನ್ನು ಮರೆಯುವುದಿಲ್ಲ ಯೆಶಾ. 49:15
60ತಾಯಿ ಮಗನನ್ನು ಸಂತೈಸುವ ಪ್ರಕಾರ ನಾನು ನಿನ್ನನ್ನು ಸಂತೈಸುವೆನು. ಯೆರೂಸಲೇಮಿನಲ್ಲೇ ನಿನಗೆ ದುಃಖ ಶಮನವಾಗುವುದು ಯೆಶಾ.66:13.