581ಆದುದರಿಂದ ಇಕ್ಕಟ್ಟಾದ ಬಾಗಿಲಿಂದ ಪ್ರವೇಶಿಸಿ ಪರಲೋಕ ರಾಜ್ಯಕ್ಕೆ ಪ್ರವೇಶಿಸುವೆ. ಲೂಕ 13:24; ಮತ್ತಾ.7:13
582ಐಶ್ವರ್ಯವನ್ನು ಮೇಲ್ಮೆಗಳನ್ನು, ಘನತೆಯನ್ನು ಕರ್ತನು ನನಗೆ ಕೊಡುವನು. 2 ಪೂರ್ವ.1:12
583ದೇವರು ತನ್ನ ಐಶ್ವರ್ಯದಂತೆ ನಿನ್ನ ಕೊರತೆಯನ್ನೆಲ್ಲಾ ಕ್ರಿಸ್ತೇಸುವಿನಲ್ಲಿ ನೆರವೇರಿಸುತ್ತಾನೆ. ಫಿಲಿ.4:19
584ಕರ್ತನು ಈ ದಿನ ಮೊದಲುಗೊಂದು ನನ್ನನ್ನು ಆಶೀರ್ವದಿಸುತ್ತಾನೆ. ಹಗ್ಗಾ. 2:19
585ನಾನು ನನ್ನ ದೇವರು ಕೊಡುವ ಒಳ್ಳೇ ವರಗಳಿಂದ ನಾನು ತೃಪ್ತಿ ಹೊಂದುವೆನು. ಯೆರೆ.31:14
586ಕರ್ತನು ನನಗೆ ಬಲವನ್ನು ಕೊಟ್ಟು ಸಮಾಧಾನವನ್ನು ದಯಪಾಲಿಸಿ ನನ್ನನ್ನು ಆಶೀರ್ವದಿಸುತ್ತಾನೆ. ಕೀರ್ತ.29:11
587ಶ್ರೇಷ್ಠವಾದ ಗೋಧಿಯಿಂದ ಬಂಡೆಯೊಳಗಿನ ಜೇನಿನಿಂದ ನನ್ನನ್ನು ತೃಪ್ತಿಪಡಿಸುವನು. ಕೀರ್ತ.81:16
588ಕರ್ತನನ್ನು ಹುಡುಕುವ ನನಗೆ ಒಂದೂ ಕೊರತೆಯು ಉಂಟಾಗುವುದಿಲ್ಲ. ಕೀರ್ತ.31:10
589ನನ್ನ ಕೈಯ ಪ್ರಯಾಸದಿಂದ ನಾನು ಊಟ ಮಾಡುವೆನು. ನನಗೆ ಭಾಗ್ಯವೂ ಶುಭವೂ ಇರುವುದು. ಕೀರ್ತ.128:2
590ನಾನು ಈಗ ಇರುವುದನ್ನು ಮಾಡುವುದಕ್ಕಿಂತ ಸಾವಿರ ಭಾಗ ಅಧಿಕವಾಗುವಂತೆ ಕರ್ತನು ನನ್ನನ್ನು ಆಶೀರ್ವದಿಸುತ್ತಾನೆ. ಧರ್ಮೋ.1:11
591ಕರ್ತನು ನನ್ನನ್ನು ದೊಡ್ಡ ಜನಾಂಗವಾಗಿ ಮಾಡಿ ನನ್ನನ್ನು ಆಶೀರ್ವದಿಸಿ ನನ್ನ ಹೆಸರನ್ನು ಘನತೆ ಪಡಿಸುವನು. ಆದಿ.12:2
592ನನ್ನ ಜೀವಮಾನದಲ್ಲಿ ಆಶೀರ್ವಾದದ ಮಳೆಯು ಬೀಳುವುದು. ಯೆರೆ.34:24
593ನನ್ನ ಬಲವಾದಾತನೇ
594ಕರ್ತನು ನನ್ನ ಬಲವೂ ಕೀರ್ತನೆಯೂ ಆಗಿದ್ದಾನೆ. ಆತನೇ ನನಗೆ ರಕ್ಷಕನಾಗಿರುವನು. ವಿಮೋ15:2
595ನನ್ನ ದೇವರಾಗಿರುವ ಕರ್ತನ ಬಳಿಯಲ್ಲಿ ನಿನ್ನ ಪೂರ್ಣ ಬಲದಿಂದ ಪ್ರೀತಿಸುತ್ತೇನೆ. ಧರ್ಮೋ.6:5
596ನನ್ನ ದೇವರ ಕರದಲ್ಲಿ ಸತ್ವವು ಬಲವು ಪರಾಕ್ರಮಗಳು ನನಗುಂಟು 1 ಪೂರ್ವ.29:12
597ನನ್ನ ದೊಡ್ಡಸ್ತಿಕೆಗೂ ಶಕ್ತಿಯೂ ನೀನೇ ಮೂಲನು 1 ಪೂರ್ವ.29:12
598ನಿನಗೆ ವಿರೋಧವಾಗಿ ನಿಂತು ಮುಯ್ಯಿ ತೀರಿಸುವ ವೈರಿಗಳ ಬಾಯನ್ನು ಕಟ್ಟುವುದಕ್ಕೋಸ್ಕರ ನನ್ನ ಬಾಯನ್ನು ಬಲಪಡಿಸಿದ್ದೀ. ಕೀರ್ತ.8:2
599ನನ್ನ ಬಲವಾಗಿರುವ ಕರ್ತನೇ ನಿನ್ನ ಮೇಲೆ ಪ್ರೀತಿ ತೋರಿಸುತ್ತೇನೆ. ಕೀರ್ತ.18:1
600ಕರ್ತನು ತನ್ನ ಪರಾಕ್ರಮದಿಂದ ನಿನ್ನನ್ನು ಪ್ರಸಿದ್ಧಿ ಪಡಿಸಿಕೊ ಆಗ ನಿನ್ನ ಗಾಯನ ಮಾದುತ್ತಾ ನಿನ್ನ ಶೂರತ್ವವನ್ನು ಕೊಂಡಾಡುವೆನು. ಕೀರ್ತ.21:13