621ನನ್ನ ದೇವರು ಕರ್ತನೇ ಸಾಮರ್ಥ್ಯವನ್ನು ಕೊಟ್ಟು, ಬಲವನ್ನು ಐಶ್ವರ್ಯವನ್ನು ಕೊಡುವನು. ಧರ್ಮೋ.8:17
622ಕರ್ತನೇ ನಿನ್ನನ್ನು ತನ್ನ ಬಲದಿಂದಲೂ ಮಹಾ ಶಕ್ತಿಯಿಂದಲೂ ಭುಜಬಲದಿಂದಲೂ ನೀನು ಬಲಪಡಿಸಿದ ನಿನ್ನ ಸ್ವಕೀಯ ಜನರಲ್ಲವೋ. ಧರ್ಮೋ.9:29
623ನಿಮ್ಮ ಕೋಟೆಯ ಬಾಗಿಲುಗಳಿಗೆ ಕಬ್ಬಿಣದ ಮತ್ತು ತಾಮ್ರದ ಅಗುಳಿಗಳು ಇರುವವು. ನೀನು ಇರುವವರೆಗೂ ನಿಮಗೆ ಬಲವು ಇರುವುದು. ಧರ್ಮೋ.33:25
624ನಾನು ಕರ್ತನ ನಾಮದಲ್ಲಿ ಹೋಗು ಹೋಗುತ್ತಾ ದೊಡ್ಡವನಾದೆ. ನನ್ನ ಶತ್ರುಗಳು ಬಲಹೀನ ಹೊಂದುತ್ತಾ ಹೋದರು 2 ಸಮು.3:1
625ಕರ್ತನು ನನ್ನನ್ನು ಶೌರ್ಯವೆಂಬ ನಡುಕಟ್ಟನ್ನು ಕಟ್ಟಿ ನನಗೆ ವಿರೋಧವಾಗಿ ಇದ್ದ ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನ ಮಾಡಿದನು. ಕೀರ್ತ.18:39
626ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನು, ನನ್ನ ಮಾರ್ಗವನ್ನು ಸರಾಗ ಮಾಡುವವನು ಆಗಿದ್ದಾನೆ. ಕೀರ್ತ.18:32
627ನಾನು ಮೊರೆಯಿಟ್ಟಾಗ ಸದುತ್ತರವನ್ನು ದಯಪಾಲಿಸಿದಿ. ನನ್ನ ಆತ್ಮಕ್ಕೆ ಬಲಕೊಟ್ಟು ನನ್ನನ್ನು ಧೈರ್ಯಪಡಿಸಿದ್ದೀ. ಕೀರ್ತ.138:3
628ಇಕ್ಕಟ್ಟಾದ ಸಮಯದಲ್ಲಿ ನಾನು ಸೋತು ಹೋಗುವುದಿಲ್ಲ. ಕರ್ತನೇ ನನ್ನ ಬಲವಾಗಿರುವನು. ಜ್ಞಾನೋ.21:10
629ನನಗೆ ಬಲವಾದ ಪಟ್ಟಣವಿದೆ. ರಕ್ಷಣೆಯೇ ಅದಕ್ಕೆ ಕೋಟೆಯನ್ನಾಗಿಯೂ ಹೊರ ಪೌಳಿಗಳನ್ನಾಗಿಯೂ ಮಾಡಿದ್ದಾನೆ. ಯೆಶಾ.26:1
630ನಾನು ಬೇರೂರಿ ಹೂ ಬಿಟ್ಟು, ಕಾಯಿಬಿಟ್ಟು, ಭೂಮಂಡಲವೆಲ್ಲಾ ಫಲದಿಂದ ತುಂಬಿಸುವ ದಿನಗಳು ಬರುವದು ಯೆಶಾ.27:6
631ನಾನು ಕರ್ತನ ಸನ್ನಿಧಾನದಲ್ಲಿ ಕಾದಿರುವೆನು. ಶಾಂತರಾಗಿ ಭರವಸದಿಂದಿರುವುದೇ ನಿಮಗೆ ಬಲ. ಯೆಶಾ.30;15
632ನಿರ್ಬಲನಿಗೆ ಕರ್ತನು ಬಲವನ್ನು ಕೊಟ್ಟು, ತ್ರಾಣವಿಲ್ಲದವನಿಗೆ ತ್ರಾಣವನ್ನು ಕೊಟ್ಟು ಬಲಪಡಿಸುತ್ತಾನೆ ಯೆಶಾ.40:29
633ಕರ್ತನಿಗಾಗಿ ಕಾದಿರುವವನೋ ಹೊಸ ಬಲವನ್ನು ಹೊಂದಿ ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು (ಏರುವರು) ಯೆಶಾ.40:31
634ಕರ್ತನ ಆತ್ಮಾವೇಶದಿಂದ ಬಲ ಪರಾಕ್ರಮ ನ್ಯಾಯಭರಿತವಾಗಿ ತುಂಬಿರುವೆನು. ಮಿಕ 3:8
635ಕರ್ತನಾಗಿರುವ ಜೀವಂತನಾಗಿ ಎದ್ದು ಬಂದನೆಂದು ಬಲವಾದ ಸಾಕ್ಷಿ ಕೊಡುವೆನು. ನನ್ನ ಮೇಲೆ ಪೂರ್ಣ ಕೃಪೆಯುಂಟು ಅ.ಕೃ.4:33
636ಕ್ರಿಸ್ತೇಸುವಿನ ಕುರಿತು ನಾನು ನಾಚಿಕೆ ಪಡುವುದಿಲ್ಲ ಅದು ರಕ್ಷಣೆಯನ್ನುಂಟು ಮಾಡುವುದಕ್ಕೆ ದೇವಬಲವಾಗಿದೆ. ರೋಮಾ.1:16
637ಕ್ರಿಸ್ತನ ದ್ವಿತಿಯಾಗಮನಕ್ಕೆ ಜನರನ್ನು ಸಿದ್ಧಪಡಿಸುವಂತೆ ನಾನು ಎಲೀಯನ ಗುಣಶಕ್ತಿಗಳಿಂದ ಆತನ ಮುಂದೆ ನಡೆಯುವೆನು. ಲೂಕ 1:17
638ಪವಿತ್ರಾತ್ಮನ ಬಲದಿಂದ ನನಗೆ ನಂಬಿಕೆಯು ಹೆಚ್ಚಾಗುವುದು ರೋಮಾ.21:13
639ನನ್ನ ವಿಶ್ವಾಸವು ಮನುಷ್ಯರ ಜ್ಞಾನದಿಂದಲ್ಲ, ಅದು ದೇವರ ಬಲದಲ್ಲಿದೆ. 1 ಕೊರಿ.2:14
640ನಮ್ಮ ನಂಬಿಕೆಯು ಮನುಷ್ಯ ಜ್ಞಾನವನ್ನು ಆಧಾರ ಮಾಡಿಕೊಳ್ಳದೇ ದೇವರ ಶಕ್ತಿಯನ್ನು ಆಧಾರ ಮಾಡಿಕೊಂಡಿರಬೇಕೆಂದು ಬೋಧನೆಗಳಲ್ಲಿಯೂ, ಸಂದೇಶಗಳಲ್ಲಿಯೂ ಮನವೊಲಿಸುವ ಜ್ಞಾನ ವಾಕ್ಯಗಳನ್ನು ನಾನು ಪ್ರಯೋಗಿಸದೇ, ದೇವರಾತ್ಮ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು. 1 ಕೊರಿ.2:5