641ದೇವರ ರಾಜ್ಯವು ನನ್ನ ಮಾತಿನಲ್ಲಿಲ್ಲ. ಅದು ನನ್ನ ಬಲದಲ್ಲಿದೆ. 1 ಕೊರಿ.4:20
642ನಾವು ಪ್ರಯೋಗಿಸುವ ಆಯುಧಗಳು ಲೋಕ ಸಂಬಂಧವಾದ ಆಯುಧಗಳಲ್ಲ. ಅವು ದೇವರ ಎಣ ಕೆಯಲ್ಲಿ ಬಲವಾದದ್ದು, ಕೋಟೆಗಳನ್ನು ಕೆಡವಿ ಹಾಕುವಂತಹುಗಳಾಗಿವೆ. 2 ಕೊರಿ.10:4
643ಕರ್ತನ ಕೃಪೆಯು ನನಗೆ ಸಾಕಾಗಿದೆ. ನನ್ನ ಬಲಹೀನತೆಯಲ್ಲಿ ಆತನ ಬಲವು ಪೂರ್ಣವಾಗಿರುವುದು. 2 ಕೊರಿ.12:9
644ದೇವರು ನನ್ನ ಮೇಲೆ ಯಾವಾಗಲೂ ಪ್ರೀತಿಯನ್ನಿಟ್ಟಿದ್ದಾನೆ. 1 ಯೋಹಾ 4:8
645ಆತನ ಅತ್ಯಧಿಕವಾದ ಶಕ್ತಿಯನ್ನು ಆಶ್ರಯಿಸಿಕೊಂಡು ಬಲಗೊಳ್ಳುವೆನು ಎಫೆ.6:10
646ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲವನ್ನು ಬಲಪ್ರಯೋಗ ಮಾಡಿ ಅದಕ್ಕೋಸ್ಕರವೇ ಹೋರಾಡಿ ಪ್ರಯಾಸಪಡುತ್ತೇನೆ. ಕೊಲೊ.1:10
647ನಾನು ಆತನ ಆತ್ಮನಿಂದಾದ ಒಳಮನಸ್ಸಿನಿಂದ ಬಲಹೊಂದುವೆ ಎಫೆ.3:16
648ನನ್ನನ್ನು ಬಲಪಡಿಸಿ ದೃಢಪಡಿಸುವ ಕರ್ತನು ತನ್ನ ದೂತನನ್ನು ಕಳಿಸುವನು. ಲೂಕ 22:43.
649ಕ್ರಿಸ್ತನ ಒಂದೇ ನಾಮವನ್ನು ಹೊಂದಿರುವ ನಂಬಿಕೆಯೇ ನನ್ನನ್ನು ಬಲಪಡಿಸುವದು. ಅ.ಪೋ.3:16
650ನನ್ನ ಬಲಪಡಿಸುವ ಕ್ರಿಸ್ತನಿಂದಲೇ ಎಲ್ಲವನ್ನು ಮಾಡಿ ಮುಗಿಸಲು ನನಗೆ ಬಲವುಂಟು. ಫಿಲಿ.4:13
651ಯೇಸು ಕ್ರಿಸ್ತನು ನನ್ನನ್ನು ಯೋಗ್ಯ ಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸಿ ಸ್ಥಿರಪಡಿಸುವನು 1 ಪೇತ್ರ 5:10
652ನಾನು ನನ್ನ ದೇವರು
653ಕರ್ತನು ನನ್ನ ದೇವರು. ಆತನೇ ನನ್ನನ್ನು ರೂಪಿಸಿದಾತನು. ಆತನೇ ನನ್ನನ್ನು ಪ್ರೀತಿಯಿಂದ ಹುಡುಕಿಕೊಂಡು ನನ್ನನ್ನು ಕೊಂಡುಕೊಂಡನು.
654ಯಾರು ಕರ್ತನನ್ನು ತನ್ನ ದೇವರನ್ನಾಗಿಸಿಕೊಂಡಿರುತ್ತಾನೋ ಅವರೇ ಭಾಗ್ಯವಂತರು. ಕೀರ್ತ.144:15
655ನನ್ನ ದೇವರೂ ನನ್ನ ಸೃಷ್ಟಿಕರ್ತನೂ ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ದೇವರಿಂದಲೇ ನಾನು ಆಶೀರ್ವದಿಸಲ್ಪಡುವೆನು. ಕೀರ್ತ.121:5
656ಕರ್ತನು ನನ್ನ ದೇವರು. ಆತನು ನನ್ನನ್ನು ಕಾಪಾಡಿ ನಡಿಸುವಾತನು. ನನ್ನ ಇಡೀ ಆಳ್ವಿಕೆಯು ಆತನಿಗೆ ಉಂಟು. ಕೀರ್ತ.95:7
657ಆಕಾಶ ಭೂಮಂಡಲದಲ್ಲಿ ಸಕಲ ಅಧಿಕಾರವು ದೇವರಿಗೆ ಕೊಡಲ್ಪಟ್ಟಿದೆ. ಮತ್ತಾ.28:18
658ನಮ್ಮ ದೇವರಾಗಿರುವ ಕರ್ತನು ಬಹು ದೊಡ್ಡವನಾಗಿ ಮಹಿಮೆಯು ಮಹತ್ವವೂ ಆಗಿರುವನು ಕೀರ್ತ.104:1
659ನನ್ನ ದೇವರು ದೊಡ್ಡವನು ಬಹು ಪರಾಕ್ರಮಿಯಾಗಿರುವನು. ಆತನು ಪರಿಶುದ್ಧ ಪರ್ವತದಲ್ಲಿ ಬಹು ಸ್ತುತಿಗೆ
660ತಂದೆ ತಾಯಿಗಳು ನನ್ನನ್ನು ತೊರೆದುಬಿಟ್ಟರೂ ಕರ್ತನು ನನ್ನನ್ನು ಎಂದೆಂದಿಗೂ ಸೇರಿಸಿಕೊಳ್ಳುವನು. ಕೀರ್ತ.27:10