661ತಂದೆಯು ಮಕ್ಕಳನ್ನು ಕನಿಕರಿಸುವಂತೆ ಕರ್ತನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕರುಣ ಸುತ್ತಾನೆ. ಕೀರ್ತ.103:13
662ನನ್ನ ದೇವರು ಸಮಾಧಾನದ ಪ್ರಭುವಾಗಿರುವನು. ಆತನು ನಮಗೆ ಸಮಾಧಾನವನ್ನು ಕೊಡುತ್ತಾನೆ. ಯೆಶಾ.9:6, ಅರಣ್ಯ.6:26
663ಕರ್ತನು ಅವರಿಗೂ ತನ್ನ ಪ್ರಜೆಗೂ ನನಗೂ ಸಮಾಧಾನವನ್ನು ಕೊಟ್ಟು ಆಶೀರ್ವದಿಸುತ್ತಾನೆ. ಕೀರ್ತ.29;11
664ಕರ್ತನ ವೇದವಚನಗಳನ್ನು ಪ್ರೀತಿಸುವ ನನಗೆ ಹೆಚ್ಚಾದ ಸಮಾಧಾನವನ್ನುಂಟು ಮಾಡುವದು. ಕೀರ್ತ.119:165
665ಕರ್ತನನ್ನೇ ಶಾಶ್ವತವಾಗಿ ಆಶ್ರಯಿಸಿಕೊಡ ನಾನು ಆತನನ್ನೇ ನಂಬಿರುವುದರಿಂದ ಆತನು ನಿನ್ನನ್ನು ಪೂರ್ಣ ಸಮಾಧಾನದಿಂದ ಕಾಯ್ದುಕೊಂಡಿರುತ್ತೇನೆ. ಯೆಶಾ.26:3
666ಕರ್ತನಾಗಿರುವ ನನ್ನ ದೇವರು ಸಮಾಧಾನಕ್ಕೆ ಕಾರಣನಾಗಿರುವನು. ಮಿಕ.5:5
667ಆತನು ನನ್ನ ಕುಟುಂಬದಲ್ಲೂ, ನನ್ನೊಳಗೂ ತನ್ನ ಸಮಾಧಾನವನ್ನು ಕೊಡುವನು.
668 ಬಿರುಗಾಳಿಯೂ ಮೊರೆಯುತ್ತಿರುವ ಸಮುದ್ರದ ತೆರೆಗಳನ್ನು ಗದರಿಸಿ ಸಮಾಧಾನವನ್ನು ಹೊಂದುವಂತೆ ಮಾಡಿದ ದೇವರು ಮತ್ತಾ 8:26 ನನಗೆ ಸಮಾಧಾನವನ್ನು ಕೊಡುತ್ತಾನೆ.
669 ಯೇಸುಕ್ರಿಸ್ತನು ನನಗೆ ಸಮಾಧಾನವನ್ನು ಕೊಡುವವನಾಗಿದ್ದಾನೆ. ಯೋಹಾ 14:27
670 ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ರೋಮಾ 14:27
671 ಸಮಾಧಾನದಿಂದಿರುವಂತೆ ಕರ್ತನು ನಿನ್ನನ್ನು ಕರೆದಿದ್ದಾನೆ 1ಕೊರಿ 3:15
672 ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣ ಸಿಕೊಳ್ಳುವುದಕ್ಕೆ ಪ್ರಯಾಸ ಪಡಿರಿ. 2ಪೇತ್ರ 3:14
673 ನನ್ನ ಕರ್ತನು ಕೃಪಾಪೂರ್ಣನು ಆತನ ಕೃಪೆಯು ಮಹಾ ದೊಡ್ಡದು. 2ಸಮು 24:14
674 ನಾನು ಮನುಸ್ಯರ ದಯೆಗೆ ಪಾತ್ರನಾಗಿರುವುದಕ್ಕಿಂತಲೂ ಕರ್ತನ ಮೇಲೆ ನಂಬಿಕೆಯಿಂದಿರುವುದು ಒಳ್ಳೆಯದು ಆತನ ದಯೆಗೆ ಕೊನೆಯೇ ಇಲ್ಲ. ಪ್ರಲಾ 3:22
675 ನನ್ನ ದೇವರು ಕರುಣೆಯ ತಂದೆ ಆತನು ಕರುಣೆಯಲ್ಲಿ ಮಹಾ ಐಶ್ವರ್ಯವುಳ್ಳವನು ಎಫೆ. 2:4
676 ಕರ್ತನು ದಯೆಯೂ ಕನಿಕರವೂ, ದೀರ್ಘಶಾಂತನು ಕೃಪೆಯುಳ್ಳವನೂ ಸಾವಿರಾರು ತಲೆಗಳವರೆಗೂ ದಯೆತೋರಿಸುವವನೂ ಆಗಿದ್ದಾನೆ. ವಿಮೋ :34:6
677 ನನ್ನ ದೇವರಾಗಿರುವ ಕರ್ತನು ನನಗೆ ಕರುಣೆಯನ್ನು ತೋರಿಸುವವರೆಗೂ ನನ್ನ ಕಣ್ಣುಗಳು ಆತನನ್ನೇ ನೋಡುತ್ತಿರುವುದು. ಕೀರ್ತ 123:2
678 ಕರ್ತನು ನನಗೆ ಬಹಳವಾಗಿ ಕನಿಕರಿಸಿ ನನ್ನ ಪ್ರಾಣವನ್ನು ಪಾತಾಳದಿಂದ ತಪ್ಪಿಸಿದ್ದೀಯಲ್ಲಾ. ಕೀರ್ತ 86:13
679 ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ಕೃಪೆಯು ಅಷ್ಟು ಅಪಾರವಾಗಿದೆ. ಕೀರ್ತ 103:11
680 ಯೆಹೋವನಲ್ಲಿ ಭರವಸವಿಟ್ಟವರನ್ನು ಆತನ ಕೃಪೆಯು ಆವರಿಸಿಕೊಳ್ಳವದು. ಕೀರ್ತ 32:10