701 ಪರಲೋಕದಲ್ಲಿ ತಂದೆಯ ಚಿತ್ತದಂತೆ ಮಾಡಲು ನಾನು ನನ್ನನ್ನು ಒಪ್ಪಿಸಿಕೊಟ್ಟಿದ್ದರಿಂದ ಆತನ ಸಹೋದರನಾಗಿರುವನು ಮತ್ತಾ 12:20
702 ಯೇಸುಕ್ರಿಸ್ತನು ತನ್ನ ಶಿಷ್ಯರನ್ನು ನನ್ನ ಸಹೋದರನೆಂದು ಕರೆದಂತೆ ಮತ್ತಾ, 28:10, ಯೋಹಾ, 20:7, ನನ್ನನ್ನು ಸಹೋದರನೆಂದು ಪ್ರೀತಿಯಿಂದ ಕರೆಯುತ್ತಾನೆ.
703 ಯೇಸು ನನ್ನ ಸ್ನೇಹಿತನು, ಆತನು ನನ್ನ ಸ್ನೇಹಿತನೆಂದು ಕರೆದನು. ನನಗೆ ಎಷ್ಟೋ ಸಂತೋಷಕರವಾಗಿದೆ. ಯೋಹಾ, 15:5
704 ಅಬ್ರಹಾಮನನ್ನು ಕರ್ತನು ಮೂರು ಸಾರಿ ತನ್ನನ್ನು ಸ್ನೇಹಿತನೆಂದು ಕರೆದಂತೆ ನನ್ನನ್ನು ಸ್ನೇಹಿತನೆಂದು ತಿಳಿದುಕೊಂಡಿದ್ದಾನೆ. ಯಾಕೋ. 2:23
705ಹನೋಕನೊಡನೆ ಕರ್ತನು ನಡೆದಂತೆ ನನ್ನ ಜೊತೆಯಲ್ಲಿ ನಡೆದಾಡುವನು. ಆದಿ 5:24
706 ನಾನು ಕರ್ತನೊಡನೆ ಒಂದಾಗಿರುವೆನು. ಆಮೋ. 3:3
707 ಕ್ರಿಸ್ತನು ನನಗಾಗಿ ಜೀವಕೊಟ್ಟ ಪ್ರೀತಿಯಲ್ಲಿ ಪ್ರೀತಿಯನ್ನು ಯಾರ ಬಳಿ ಕಾಣಲಾರೆನು. ಯೋಹಾ. 15:3
708ನನ್ನ ವಿಮೋಚಕನು ಜೀವದಿಂದಿದ್ದಾನೆ. ಕಡೀ ದಿನದಲ್ಲಿ ಭೂಮಿಯ ಮೇಲೆ ಸಕ್ಷಿಯಾಗಿ ನಿಂತುಕೊಳ್ಳುವನು. ಯೋಬ. 19:25
709ದೇವರು ನನ್ನ ಪರಾತ್ಪರನೆಂದು ಉನ್ನತವಾದ ದೇವರೆಂದು ನನ್ನ ವಿಮೋಚಕನೆಂದು ನೆನಪಿಗೆ ತಂದುಕೊಳ್ಳುತ್ತೇನೆ. ಕೀರ್ತ 78:35
710 ನನ್ನ ವಿಮೋಚಕನಾಗಿರುವ ದೇವರು ಸರ್ವಶಕ್ತನಾಗಿರುವನು. ಆತನು ನನಗಾಗಿ ಯುದ್ಧ ಮಾಡುವನು ಜ್ಞಾನೋ, 23:11
711 ನನ್ನ ವಿಮೋಚಕನಾಗಿ ನಿನ್ನ ನಾಮವು ಇಸ್ರಾಯೇಲ್ಯರ ಪರಿಶುದ್ಧನಾಗಿರುವ ಸೇನಾಧೀಶ್ವರನಾದ ಕರ್ತನು ಎಂಬುದಾಗಿ ಯೆಶಾ. 47:5
712ಕರ್ತನು ಯಾಕೋಬ್ಯರ ಶಕ್ತಿಯುಳ್ಳ ದೇವರು ನನ್ನ ವಿಮೋಚಕನು ನನ್ನ ರಕ್ಷಕನೂ ಆಗಿರುವನು, ಯೆಶಾ. 49:26
713 ನನ್ನ ದೇವರ ಬಳಿಯಲ್ಲಿ ಹೇರಳವಾದ ಪೂರ್ಣ ವಿಮೋಚನೆಯುಂಟು, ಕೀರ್ತ. 130:7
714 ಆತನು ನನ್ನ ಜೀವವನ್ನುನ ನಾಶನದಿಂದ ತಪ್ಪಿಸಿ ಕಾಪಾಡುವನು. ಕೀರ್ತ 103:4
715 ಕಾಪಾಡುವಂತೆ ನನ್ನ ದೇವರ ಕರಗಳು ಮೋಟಗೈಯಲ್ಲ. ಯೆಶಾ. 59:1
716 ಆತನೇ ನನ್ನನ್ನು ಪಾಪದಿಂದಲೂ, ಶಾಪ, ಮರಣ ಎಂಬುವುಗಳಿಂದ ವಿಮೋಚಿಸಿ ರಕ್ಷಿಸಿ ಕಾಪಾಡುತ್ತಾನೆ.
717 ನನ್ನ ವಿಮೋಚಕನಾಗಿರುವ ಯೇಸು ತನ್ನ ಸ್ವಂತ ರಕ್ತದಿಂದ ನಿತ್ಯ ವಿಮೋಚನೆಯನ್ನು ಸಂಪಾದಿಸಿ ಕೊಟ್ಟಿದ್ದಾನೆ, ಇಬ್ರಿ. 9:12
718 ಕರ್ತನಿಂದ ವಿಮೋಚನೆ ಹೊಂದಿದ ನಾನು ಆನಂದ ಧ್ವನಿಯೊಡನೆ ಚಿಯೋನಿಗೆ ಬರುವೆನು. ಯೆಶಾ 35:10
719 ನನ್ನ ಆಶ್ರಯಗಿರಿಯಾಗಿರುವ ದೇವರು ಸ್ತೋತ್ರ ಹೊಂದಲಿ 2ಸಮು, 22:47
720 ಕರ್ತನು ನನ್ನ ಆಶ್ರಯಗಿರಿಯು ನನ್ನ ಕೋಟೆಯು, ನನ್ನ ರಕ್ಷಕನೂ ನಾನು ನಂಬಿರುವ ದುರ್ಗವಾಗಿದ್ದಾನೆ. ಕೀರ್ತ, 18:2