721 ಆಶ್ರಯಗಿರಿಯಾಗಿರುವ ಕ್ರಿಸ್ತನ ಗಾಯಗಳೊಂದಿಗೆ ನಾನು ಅಡಗಿರುವೆ. ವಿಮೋ, 33:22, ಯಾವ ಕೇಡು ನನ್ನನ್ನು ಮುಟ್ಟುವುದಿಲ್ಲ.
722 ಅಪಾಯ ಕಾಲದಲ್ಲಿ ನನ್ನ ದೇವರು ನನ್ನನ್ನು ಗುಪ್ತ ಸ್ಥಳದಲ್ಲಿರಿಸಿ ನನ್ನನ್ನು ಪರ್ವತಾಗ್ರದಲ್ಲಿ ಸುರಕ್ಷಿತವಾಗಿರಿಸಿ, ಕಾಪಾಡುವನು. ಕೀರ್ತ 27:5
723 ನನ್ನ ದೇವರಾಗಿರುವ ಕರ್ತನು ನಾಣು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರುವಿ ಕೀರ್ತ, 71:3
724 ಆದಿಯಿಂದಲೂ ದೇವರೇ ನನಗೆ ನಿವಾಸ ಸ್ಥಾನವಾಗಿದ್ದೀಯಲ್ಲಾ, ಸದಾ ದೇವರ ಹಸ್ತವೇ ನನಗೆ ಆಧಾರ, ಧರ್ಮೋ 33:27.
725ನನ್ನ ದೇವರು ನನಗೆ ಆಶ್ರಯಗಿರಿಯೂ ನನ್ನ ದುರ್ಗವೂ ನನ್ನ ರಕ್ಷಣೆಯ ಕೊಂಬೂ ಆಗಿದ್ದಾನೆ. ನನ್ನನ್ನು ಬಲಾತ್ಕಾರಿಯಿಂದ ತಪ್ಪಿಸಿ ರಕ್ಷಿಸುವಾತನಾಗಿದ್ದಾನೆ. 2ಸಮು, 22:3
726 ಕರ್ತನು ನನ್ನ ಪ್ರಾಣವೂ ರಕ್ಷಕನು ಆತನು ನನ್ನನ್ನು ತನ್ನ ಸ್ವಂತ ರಕ್ತದಿಂದ ಸಂಪಾದಿಸಿಕೊಂಡನು, ಅ,ಪೂ 20:28.
727ನಾನು ಕ್ರಿಸ್ತನೆಂಬ ಒಬ್ಬನೇ ಪುರುಷನಿಗೆ ಶುದ್ಧ ಕನ್ಯೆಯಂತೆ ನೇಮಿಸಲ್ಪಟ್ಟಿದ್ದೇನೆ. 2ಕೊರಿ 11:2
728 ಕಳಂಕ, ಸುಕ್ಕು ಮುಂತಾದದ್ದೊಂದೂ ಇಲ್ಲದ ಶುದ್ಧ ಕನ್ನಿಕೆಯೋ ಎಂಬಂತೆ ಪರಿಶುದ್ಧವೂ ನಿರ್ದೋಷವೂ ಮಹಿಮೆಯುಳ್ಳದ್ದೂ ಆಗಿರುವಂತೆ ನನಗಾಗಿ ತನ್ನನ್ನು ಸಮರ್ಪಿಸಿಕೊಟ್ಟನು. ಎಫೆ. 5:27
729 ನಾನು ಆತನ ದೇಹದ ಅಂಗಗಳಾಗಿಯೂ ಆತನ ಶರೀರದಲ್ಲಿರುವ ಮಾಂಸಕ್ಕೂ ಆತನ ಎಲುಬುಗಳಿಗೂ ನಾನು ಬಾದ್ಯಸ್ಥನಾಗಿದ್ದೇನೆ. ಪ್ರಕ. 19:30
730 ಯಜ್ಞದ ಕುರಿಯಾದಾತನ ವಿವಾಹಕ್ಕೆ ನಾನು ಕರೆಯಲ್ಪಟ್ಟಿದ್ದೇನೆ. ಪ್ರಕ 19:7
731 ಪ್ರಕಾಶಮಾನವೂ ನಿರ್ಮಲವಾದ ನಯವಾದ ನಾರು ಮಡಿ ನನಗೆ ಸಿಕ್ಕಿತು. ಪ್ರಕ 19:8
732 ನಾನು ಹೊಸ ಯೆರುಸಲೇಮಿನಂತೆ ಪ್ರಕಾಶಿಸುವೆನು. ಅದು ತನ್ನ ಪುರುಷನಿಗಾಗಿ ಅಲಂಕೃತಳಾದ ಮದಲಗಿತ್ತಿಯಂತೆ ಇರುತ್ತದೆ. ಪ್ರಕ 21:2
733 ನನ್ನ ಆತ್ಮದ ಎನ್ನಿನಿಯನು ನನ್ನವನು ನಾನು ಅವನವಳು. ಆತನ ಪ್ರೀತಿಯು ನನ್ನ ಮೇಲಿರುವುದು. ಪರ: 2:16
734 ಕರ್ತನು ನನಗಾಗಿ ಯಾವುದನ್ನು ಮಾಡಿ ಮುಗಿಸುವ ಯೆಹೋವ ಯಿರೆಯಾಗಿದ್ದಾನೆ. ಆದಿ 22:14
735ಕರ್ತನು ನನಗೆ ಸಮಾಧಾನವನ್ನು ಕೊಡುವ ಯೆಹೋವ ಷಾಲೋಮ್ ಆಗಿದ್ದಾನೆ. ನ್ಯಾಯ. 6:24
736 ಕರ್ತನು ಒಂದು ಸಾರಿಯೂ ನನ್ನನ್ನು ಬಿಟ್ಟು ಅಗಲದೆ ಯೆಹೋವ ಶಮ್ಮಾನಾಗಿರುವನು. ಯೆಶಾ 48:35
737 ನನಗೆ ಆರೋಗ್ಯವನ್ನುಂಟು ಮಾಡಿ ಕಾಯ್ದುಕೊಂಡು ಯೆಹೋವ ರಾಫಾ ಆಗಿ ಯೆಹೋವನು ನನ್ನ ಸಂಗಡವಿರುವನು. ವಿಮೋ 15:26
738 ಕರ್ತನು ಯಾವಾಗಲೂ ನನ್ನನ್ನು ಪರಿಶುದ್ಧ ಪಡಿಸಿ ಯಾವ ಕಳಂಕ ಸುಕ್ಕಿಲ್ಲದವನಾಗಿ ಕಾಯ್ದು ಕಾಪಾಡುವ ಯೆಹೋವ ಮಕ್ಕದೇಶ್ ಆಗಿರುವನು. ಯಾಜ 20:8
739ಆಕಾಶವನ್ನು ಭೂಮಿಯನ್ನು ಸೃಷ್ಠಿಸಿದ ಉನ್ನತವಾದ ದೇವರು ಯೆಹೋವ ಈಲಿಯೋನ್ ಆಗಿರುವನು. ಕೀರ್ತ 7:17
740ನನ್ನನ್ನು ಅನುದಿನವೂ ನಡಿಸಿ ಕಾಯುವ ಒಳ್ಳೇ ಕುರುಬನಾಗಿರುವ ಕರ್ತನು ನನಗೆ ಯೆಹೋವ ರಾಫಿಯಾಗಿರುವನು ಕೀರ್ತ 23:1