741 ಕರ್ತನು ಯಾವಾಗಲೂ ನನಗೆ ನೀತಿಯನ್ನುಂಟು ಮಾಡುವ ಯೆಹೋವ ಚಿದ್ಕೇನು ಆಗಿರುವನು. ಯೆರೆ 23:6
742 ಯಾವಾಗಲೂ ಎಲ್ಲಾ ಸಮಯದಲ್ಲೂ ನನಗೆ ಜಯವನ್ನು ಕೊಡುವ ಯೆಹೋವನ ನಿಸ್ಸಿಯಾಗಿ ನನ್ನ ದೇವರು ನನ್ನೊಡನಿರುವನು. ವಿಮೋ 17:15
743 ದೈವೀಕ ಆರೋಗ್ಯವೂ ನನ್ನ ಬಾಧ್ಯತೆಯು
744 ನಾನು ವ್ಯಾಧಿಯಿಂದಿದರುವುದು ದೇವರ ಚಿತ್ತವಲ್ಲ. ಎಲ್ಲದರಲ್ಲೂ ನಾನು ಸುಖವಾಗಿ ಬಾಳುವುದೇ ನನ್ನ ದೇವರ ಇಷ್ಟವಾಗಿದೆ. 3ಯೋಹಾ.2
745 ಪರಲೋಕದಲ್ಲಿ ವ್ಯಾಧಿಯಿಲ್ಲ. ದೇವದೂತರ ಬಳಿ ವ್ಯಾಧಿಯಿಲ್ಲ. ನನ್ನ ದೇವರ ಬಳಿ ವ್ಯಾಧಿಯಿಲ್ಲ. ಹಾಗೆಯೇ ಆತನ ಸ್ವರೂಪದಲ್ಲಿ ಉಂಟಾದ ನಾನು ಎಂದೂ ವ್ಯಾಧಿಗ್ರಸ್ತನಾಗುವುದಿಲ್ಲ. ಆದಿ 1:27
746 ಕರ್ತನು ನನ್ನನ್ನು ಸಂತೋಷವಾಗಿಯೂ ಬಲವುಳ್ಳನಾಗಿಯೂ ದೃಢಕಾಯನಾಗಿಯೂ ಆರೋಗ್ಯವುಳ್ಳವನಾಗಿಯೂ ಉಂಟು ಮಾಡಿದ್ದಾನೆ. ಆದಿ 1:27
747 ನನ್ನ ರಕ್ಷಕನಾಗಿರುವ ಯೇಸುವಿನ ಮಧ್ಯದಲ್ಲಿ ಎಲ್ಲಾ ವ್ಯಾಧಿಗಳಿಗೂ ದೈವೀಕ ಸುಖವೂ ಆರೋಗ್ಯವುಂಟು ಮತ್ತಾ 8:16
748 ನಾನು ಕರ್ತನ ಆಜ್ಞೆಗಳಿಗೆ ಭಯವುಳ್ಳವನಾಗಿ ನಡೆಯುವುದರಿಂದ ಐಗುಪ್ತ್ಯರು ಅನುಭವಿಸಿದ ಎಂಥಾ ವ್ಯಾಧಿಯು ನನ್ನ ಬಳಿಗೆ ಬರುವುದಿಲ್ಲ. ವಿಮೋ 15:26
749 ನನ್ನ ದೇವರಾಗಿರುವ ಕರ್ತನು ನಿನಗೆ ಆರೋಗ್ಯದಾಯಕನು. ವಿಮೋ 15:26
750 ಎತ್ತರದಲ್ಲಿಡಲ್ಪಟ್ಟ ತಾಮ್ರದ ಸರ್ಪವನ್ನು ನೋಡಿ ಇಸ್ರಾಯೇಲ್ಯರು ಆರೋಗ್ಯ ಹೊಂದಿದಂತೆ ನನಗಾಗಿ ಕಲ್ವಾರಿ ಶಿಲುಬೆಯಲ್ಲಿ ಎತ್ತರದಲ್ಲಿಡಲ್ಪಟ್ಟ ಯೇಸು ರಕ್ಷಕನನ್ನು ನೋಡಿ ನಾನು ಆರೋಗ್ಯ ಹೊಂದುವೆ. ಯೋಹಾ. 3:15,16
757 ನನ್ನ ದೇವರು ವ್ಯಾಧಿಯನ್ನು ನನ್ನಿಂದ ತೊಲಗಿಸುವನು. ನನ್ನ ರೊಟ್ಟಿ ಮತ್ತು ಪಾನವನ್ನು ಆಶೀರ್ವದಿಸುವನು. ವಿಮೋ:23:25
758 ಕರ್ತನು ನನಗೆ ಆರೋಗ್ಯವನ್ನು ಬರಮಾಡುತ್ತಾನೆ. ನನ್ನ ಗಾಯಗಳನ್ನು ಆತನೇ ಕಟ್ಟುವನು. ಯೆರೆ 30:7
759 ಕರ್ತನು ತನ್ನ ವಾಕ್ಯಗಳನ್ನು ಕಳುಹಿಸಿ ನನ್ನನ್ನು ಗುಣಪಡಿಸಿ ನನ್ನನ್ನು ನಾಶನಕ್ಕೆ ತಪ್ಪಿಸುತ್ತಾನೆ. ಕೀರ್ತ 107:20
760 ನನ್ನ ರಕ್ಷಕನಾದ ಯೇಸುಕ್ರಿಸ್ತನ ಗಾಯಗಳಿಂದ ಗುಣವಾಗದ ರೋಗ ಬಾಧೆ ಯಾವುದೂ ಇಲ್ಲ. ಯೆಶಾ. 53.5