761ನನ್ನನ್ನು ಸುಖಿ ಹೊಂದುವಂತೆ ಆತನು ತನ್ನ ದೇಹವೆಲ್ಲಾ ಗಾಯವನ್ನು ಹೊಂದಿಕೊಂಡನು. ಆ ಗಾಯಗಳಿಂದ ನಾಣು ಆರೋಗ್ಯ ಹೊಂದಿ ಗುಣ ಹೊಂದುವೆ. 1ಪೇತ್ರ 2:24
762ನಿಜವಾಗಿಯೂ ಆತನು ತನ್ನ ಬಲಹೀನತೆಯನ್ನು ಹೊಂದಿಕೊಂಡು ನಮ್ಮ ಬೇನೆಗಳನ್ನು ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು. ಹಾಗೆಯೇ ಇನ್ನು ನಾನು ವ್ಯಾಧಿಯಿಂದ ನೋವುಗಳಿಂದಿರುವುದು ಇಷ್ಟವಿಲ್ಲ. ಮತ್ತಾ. 8:17
763ಕರ್ತನು ಸಕಲ ನೋವುಗಳನ್ನೆಲ್ಲಾ ನನ್ನಿಂದ ತೆಗೆದುಬಿಟ್ಟು ತೊಲಗಿಉವನು. ವಿಮೋ: 7:15
764ಕರ್ತನು ಪಾಳಾಳದ ಶಕ್ತಿಯಿಂದ ಮೇಲೆಳೆದುಕೊಂಡು ಬಿಡಿಸಿದನು. ನನ್ನನ್ನು ಮರಣ ಭಯದಿಂದ ಬಿಡಿಸುವನು. ಹೋಶೆ 13:14
765ಆತನು ನನ್ನ ಎಲ್ಲಾ ಅಕ್ರಮಗಳನ್ನೆಲ್ಲಾ ಮನ್ನಿಸಿ ಎಲ್ಲಾ ನೋವುಗಳನ್ನು ವಾಸಿ ಮಾಡಿ ಗುಣಪಡಿಸಿದನು. ಕೀರ್ತ 103:3
766ನನ್ನ ಪ್ರಾಣವನ್ನು ನಾಶನದಿಂದ ಬಿಡಿಸಿ ನನ್ನನ್ನು ಕೃಪೆ ಕರುಣೆಗಳಿಂದಲೂ ಸುಭಿಕ್ಷ ಕಿರೀಟವಾಗುವಂತೆ ಮಾಡುವನು. ಕೀರ್ತ 105:4
767ನನ್ನ ದೇಹವು ಯೌವನದಲ್ಲಿ ನೋಡುವುದಕ್ಕಿಂತಲೂ ಕೋಮಲವಾಗುವುದು. ನನ್ನ ಬಾಲ್ಯ ವರುಷಗಳಿಗೆ ರೂಪಿತವಾಗಿದೆ. ಯೋಬ 33:25
768ನಾನು ಮುದಿ ಪ್ರಾಯದಲ್ಲಿ ಫಲಕೊಟ್ಟು ಪುಷ್ಟಿಯಾಗಿಯೂ ಶೋಭಿಸುವೆನು. ಕೀರ್ತ 92:15
769ನನ್ನ ಎಲುಬುಗಳನ್ನೆಲ್ಲಾ ಕಾಪಾಡುವನು. ಅವುಗಳಲ್ಲಿ ಒಂದಾದರೂ ಮುರಿದು ಹೋಗುವುದಿಲ್ಲ. ಕೀರ್ತ 34:10
770ಕರ್ತನು ನಿತ್ಯವೂ ನನ್ನನ್ನು ನಡೆಸಿ ಮರುಭೂಮಿಯಲ್ಲಿಯೂ ನಿಮ್ಮ ಆತ್ಮಗಳನ್ನು ತೃಪ್ತಿಗೊಳಿಸಿ ನಿಮ್ಮ ಎಲುಬುಗಳನ್ನು ಸಸಾರ ಮಾಡುವನು. ನೀವು ತಂಪಾದ ತೋಟಕ್ಕೂ ನೀರಿಗೆ ಮೋಸವಿಲ್ಲದ ಬುಗ್ಗೆಗಳಿಗೂ ಸಮಾನರಾಗುವಿರಿ. ಯೆಶಾ 58:11
771ಅವನ ಅಸ್ಥಿಗಳ ಮಜ್ಜೆಯು ಸರವಾಗಿರುವುದು ಯೋಬ.21:24
772ನೂರು ಇಪ್ಪತ್ತನೇ ವಯಸ್ಸಿನಲ್ಲೂ ಮೋಶೆಯ ಕಣ್ಣುಗಳು ಮೊಬ್ಬಾಗಲಿಲ್ಲ. ಅವನ ಜೀವಕಳೆ ಕುಂದಿಹೋಗಲಿಲ್ಲ. ಯೆಹೋವನು ಮೋಶೆಯನ್ನು ಬಲಪಡಿಸಿ ಸಹಾಯ ಮಾಡಿದನು. ಧರ್ಮೋ.34:7
773ಎಂಭತ್ತ ನಾಲ್ಕನೇ ವಯಸ್ಸಿನ ಕಾಲೇಬನು ಯುದ್ಧವನ್ನು ಮಾಡಲು ಬಲವನ್ನು ಕೊಟ್ಟವನು ನನಗೂ ಬಲವನ್ನು ಕೊಡಲು ಶಕ್ತನಾಗಿರುವನು. ಯೆಹೋ.14:10-12
774ಎಂಭತ್ತೈದು ವಯಸ್ಸುಳ್ಳ ಹನ್ನಳೆಂಬ ವಿಧವೆಗೆ ಹಗಲು ಇರುಳು ಉಪವಾಸ ಮಾಡಿ ಪ್ರಾರ್ಥಿಸಲು ಆಕೆಗೆ ಕೃಪೆ ತೋರಿಸಿದನು. ನಮಗೂ ಕೃಪೆ ಮಾಡುವನು. ಲೂಕ.2:37
775ಇಸ್ರೇಯೇಲಿನ ದೇವರು ಆತನ ಮಕ್ಕಳಾಗಿರುವ ನಮಗೆ ಬಲಪರಾಕ್ರಮಗಳನ್ನು ದಯಪಾಲಿಸುವನು. ಕೀರ್ತ 68:35
776ಕರ್ತನ ನಾಮದಲ್ಲಿ ಭಯಭಕ್ತಿಯಿಟ್ಟಿರುವ ನಿಮಗೋ ಧರ್ಮವೆಂಬ ಸೂರ್ಯನು ಸ್ವಸ್ಥತೆಯನ್ನುಂಟು ಮಾಡುವ ಕರುಣೆಗಳುಳ್ಳವನಾಗಿ ಮಾಡುವನು. ಮಲಾ.4:8
777ನನ್ನನ್ನು ಕರ್ತನು ಉದ್ಧರಿಸುವನು., ಆತನು ರೋಗಗಳನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟು ಮಾಡುವನು ಕೀರ್ತ 41:3
778ಉನ್ನತವಾದ ಕರ್ತನಿರುವಾಗ ಕ್ರಿಸ್ತನನ್ನು ಆಶ್ರಯವಾಗಿಟ್ಟುಕೊಂಡು ನನಗೆ ಯಾವ ಕೇಡು ಸಂಭವಿಸದು, ಉಪದ್ರವವು ನನ್ನ ಗುಡಾರದ ಸಮೀಪದಲ್ಲೆ ಬಾರದು ಕೀರ್ತ. 91:10
779ನಿನ್ನ ಪೌಳಿಗೋಡೆಗಳೊಳಗೆ ಭುಶವುಂಟಾಗಲಿ. ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ ಕೀರ್ತ.122:7
780ದೇವರಾಗಿರುವ ಕರ್ತನು ನನಗೆ ಸೌಖ್ಯವನ್ನು ಕೊಟ್ಟು ಗುಣಪಡಿಸುತ್ತಾನೆ. ಯೆರೆ:33:6