61ನಾನು ಬಲಹೀನನಲ್ಲ ಬಲಶಾಲಿ
62ನಾನು ಬಲಹೀನನಲ್ಲ, ಕಾರಣ ನನ್ನ ಬಲಹೀನತೆಯಲ್ಲಿ ಕರ್ತನ ಬಲವು ಪೂರ್ಣವಾಗಿ ತುಂಬಿರುವುದು. ನಾನು ಬಲಶಾಲಿ 1 ಕೊರಿ.12:9
63ನನ್ನಲ್ಲಿ ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ ಫಿಲಿ 4:13
64ನಾನು ದರಿದ್ರನೂ, ಇಕ್ಕಟ್ಟಿನ ತೊಂದರೆಯಲ್ಲಿರುವವನೂ ಅಲ್ಲ; ಕಾರಣ ನನ್ನ ದೇವರು ಕ್ರಿಸ್ತೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು ಫಿಲಿ.4:19
65ನಾನು ಯಾವುದಕ್ಕೂ ಭಯಪಡುವುದಿಲ್ಲ. ಕಾರಣ ದೇವರು ನನಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಶಿಕ್ಷಣಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ 2 ತಿಮೋ.1:7
66ನನಗೆ ವಿಶ್ವಾಸವೂ, ನಂಬಿಕೆಯೂ ಇಲ್ಲ ಎಂದು ಹೇಳುವುದಿಲ್ಲ, ಯಾಕೆಂದರೆ ಕರ್ತನು ನನಗೆ ಬೇಕಾದ ವಿಶ್ವಾಸವನ್ನು ಕೊಟ್ಟಿದ್ದಾನೆ. ರೋಮಾ.12:3
67ನಾನು ಬಲಹೀನತೆಯ ಕುರಿತು ಮಾತನಾಡುವದಿಲ್ಲ ಕಾರಣ ಕರ್ತನು ತನ್ನ ಪ್ರಾಣದ ಆಧಾರವು ಆಗಿದ್ದಾನೆ, ಯಾರಿಗೂ ಹೆದರುವದಿಲ್ಲ ಕೀರ್ತ.27:1
68ನಾನು ಸೈತಾನನನ್ನು ಕುರಿತು ಇಂದಿನಿಂದ ದಿನವೂ ಮಾತನಾಡುವುದಿಲ್ಲ. ಯಾಕೆಂದರೆ ಲೋಕದಲ್ಲಿರುವವನಿಗಿಂತ (ಸೈತಾನ) ನಿಮ್ಮಲ್ಲಿರುವಾತನು ಹೆಚ್ಚಿನವನಾಗಿರುವುದರಿಂದ. 1 ಯೋಹಾ 4:4
69ನನ್ನ ಸೋಲಿನ ಕುರಿತಾಗಿ ಒಂದು ದಿನವೂ ಮಾತನಾಡುವದಿಲ್ಲ. ಯಾಕೆಂದರೆ ದೇವರು ಯಾವಾಗಲೂ ನನ್ನನ್ನು ಕ್ರಿಸ್ತನಲ್ಲಿ ಜಯವನ್ನು ಹೊಂದುವಂತೆ ಮಾಡಿದ್ದಾನೆ.
70ಎಲ್ಲಾ ಸ್ಥಳಗಳಲ್ಲಿಯೂ ದೇವರು ತನ್ನನ್ನು ತೆಗೆದುಕೊಂಡು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾನೆ 2 ಕೊರಿ 2:14.
71ನನಗೆ ಬುದ್ಧಿ, ಜ್ಞಾನವಿಲ್ಲವೆಂದು ಹೆಚ್ಚಳಪಡುವುದಿಲ್ಲ (ಕೊರಗುವುದಿಲ್ಲ), ಯಾಕೆಂದರೆ ಕ್ರಿಸ್ತನೇ ನನಗೆ ಜ್ಞಾನವೂ, ನೀತಿಯೂ, ಪರಿಶುದ್ಧನೂ ಎಲ್ಲವೂ ಆತನೇ ಆಗಿದ್ದಾನೆ. 1 ಕೊರಿ.1:31
72ನಮ್ಮ ಬೇನೆಗಳ(ನ್ನೂ), ಬಲಹೀನತೆಯ(ನ್ನು) ಕುರಿತಾಗಿ ಮಾತನಾಡುವುದಿಲ್ಲ. ಕಾರಣ (ಕ್ರಿಸ್ತನು ತಾನೇ) ನಮ್ಮ ಬೇನೆಗಳನ್ನು (ಕ್ರಿಸ್ತನು) ತಾನೇ ತೆಗೆದುಕೊಂಡು ನಮ್ಮ ರೋಗಗಳನ್ನು ಹೊತ್ತುಕೊಂಡನು. ಮತ್ತಾ.8:17, ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು ಯೆಶಾ.53:5
73ನಮ್ಮ ಚಿಂತೆಗಳ(ನ್ನೂ), ನಮ್ಮ ದುಃಖಗಳ(ನ್ನೂ) ಕುರಿತಾಗಿ ಮಾತನಾಡುವದಿಲ್ಲ. ಕ್ರಿಸ್ತೇಸುವೇ ನಮಗೋಸ್ಕರ ಚಿಂತಿಸುತ್ತಾನೆ. ಆದ್ದರಿಂದ ನಮ್ಮ ದುಃಖಗಳನ್ನೆಲ್ಲಾ ಆತನ ಮೇಲೆ ಹಾಕಿರುವೆವು 1 ಪೇತ್ರ 5:7
74ದಾಸತ್ವದ ಕುರಿತಾಗಿ ಮಾತಾಡಿಕೊಳುವ ಅವಶ್ಯಕತೆಯಿಲ್ಲ. ಕಾರಣ ಮಗನು ನನ್ನನ್ನು ಬಿಡುಗಡೆ ಮಾಡಿದ್ದಾನೆ ಯೋಹಾ.8:36, ಸತ್ಯವು ನನ್ನನ್ನು ಬಿಡುಗಡೆ ಮಾಡುತ್ತದೆ ಯೋಹಾ 8:32. ದೇವರಾತ್ಮನು ನನ್ನನ್ನೂ ಬಿಡುಗಡೆ ಮಾಡಿದ್ದಾನೆ 2 ಕೊರಿ.3:17
75ದಂಡನೆಯನ್ನು ಕುರಿತೋ, ಆಜ್ಞೆಯ ತೀರ್ಪುಗಳನ್ನು ಕುರಿತೋ ನಾನು ಅನಾವಶ್ಯಕವಾಗಿ ಮಾತಾಡುವುದಿಲ್ಲ. ಕಾರಣ ಕ್ರಿಸ್ತೇಸುವಿನಲ್ಲಿದ್ದು ಶರೀರದ ಪಾಪದ ದೆಸೆಯಿಂದ ನಡೆಯದೇ, ಆತ್ಮನಿಂದ ನಡೆದ ನನಗೆ ಆಜ್ಞೆಯ ತೀರ್ಪಿಲ್ಲ. ರೋಮಾ.8:1
76ನನ್ನ ಮನೆಯು ಆಶೀರ್ವದಿಸಲ್ಪಡುವದು
77ನಾನು ಕರ್ತನವನು, ಆತನು ನನ್ನವನು, ನನ್ನ ನಿವಾಸವು ದೇವರ ಪ್ರಸನ್ನತೆಯಿಂದ ತುಂಬಿಸಲ್ಪಟ್ಟಿರುವ ಮನೆ. ನನ್ನ ಮನೆಯಲ್ಲಿ ದೇವದೂತರು ಇಳಿದು ಬಂದು ಚಲಿಸುತ್ತಿರುವರು.
78ಕ್ರಿಸ್ತನೇ ನನ್ನ ನಿವಾಸದ ಯಜಮಾನನೂ, ಶಿರಸ್ಸೂ ನನ್ನ ಅತಿಥಿಯೂ ಹೌದು. ಆತನ ಪ್ರಸನ್ನತೆಯಿಂದ ನನ್ನ ಮನೆಯು ತುಂಬಿರುವುದು
79ನನ್ನ ನಿವಾಸವು ಸಕಲ ಜಾತಿಗಳಿಗೂ ಪ್ರಾರ್ಥನಾ ಮಂದಿರವಾಗಿರುವದು. ಪ್ರಾರ್ಥನಾತ್ಮನಿಂದಲೂ ವಿಜ್ಞಾಪನೆಯಿಂದಲೂ ನಾನು ನನ್ನ ಕುಟುಂಬದವರು ತುಂಬಿರುತ್ತೇವೆ. ಯೆಶಾ.56:7; ಮತ್ತಾ.21:13
80ನಾನು ನನ್ನ ಮನೆಯವರೂ ಯೆಹೋವನನ್ನೇ ಸೇವಿಸುತ್ತೇವೆ. ಯೆಹೋ.24:15