801 (ಸೈತಾನನು) ಕಳ್ಳನು ಕದ್ದುಕೊಳ್ಳುವುದಕ್ಕೂ ಹಾಳು ಮಾಡುವುದಕ್ಕೂ ಬರುತ್ತಾನೆ ಹೊರತು ಮತ್ಯಾವುದಕ್ಕೂ ಬರುವುದಿಲ್ಲ. ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅವು ಸಮೃದ್ಧಿಯಾಗಿ ಇರಬೇಕೆಂತಲೂ ಬಂದೆನು. ಯೋಹಾ. 10:10
802 ನೋಡಿರಿ ಹಾವುಗಳನ್ನು ಚೇಳುಗಳೋನ್ನು ತುಳಿದು ಶತ್ರುವಿನ ಕೆಲವು ಶಕ್ತಿಯುತವಾದ ಕಾರ್ಯಗಳನ್ನೂ ನಾಶ ಮಾಡಲು ಯೇಸು ನನಗೆ ಮಹತ್ವಗಳನ್ನು ಮಾಡಲು ಶಕ್ತಿಯನ್ನು ಕೊಟ್ಟಿರುವನು. ಯಾವುದೂ ನಿಮಗೆ ಕೇಡು ಮಾಡುವುದಿಲ್ಲ. ಲೂಕ. 10:19
803 ಸೈತಾನನಿಂದ ವ್ಯಾಧಿಗ್ರಸ್ತನಾದ ಯೋಬನನ್ನು ಸ್ವಸ್ತ ಪಡಿಸಿದ ಕರ್ತನು ನನ್ನನ್ನು ಗುಣಪಡಿಸುವನು. ಯೋಬ. 42:10-12
804 ಹದಿನೆಂಟು ವರ್ಷಗಳು ಒಬ್ಬ ಸ್ತ್ರೀಯು ಬಲಹೀನಳಾಗಿ ಸೈತಾನನಿಂದ ಕಟ್ಟಲ್ಪಟ್ಟಿದ್ದಳು. ಅವಳಲ್ಲಿದ್ದ ದುಷ್ಟ ಆತ್ಮವನ್ನು ಹೊರಡಿಸಿ ಕ್ಷಣದಲ್ಲೇ ಆ ಸ್ತ್ರೀಯು ಗುಣ ಹೊಂದುವಂತೆ ಆಜ್ಞೆ ಮಾಡಿದನು. ಹಾಗೆಯೇ ತನ್ನ ಬಲಹೀನ ಕೈಗಳನ್ನು ಸ್ವಸ್ಥ ಹೊಂದುವಂತೆ ಮಾಡಿ ಆರೋಗ್ಯ ಹೊಂದಲು ಮಾಡಿದನು. ಲೂಕ 13:16
805 ಸಮಾಧಾನದಿಂದ ಮಲಗಿಸಿಕೊಂಡು ನಿದ್ರೆ ಮಾಡುವೆನು. ಕರ್ತನೇ ನೀನೋಬ್ಬನೇ ನನ್ನನ್ನು ಸುಖಪಡಿಸುವಾತನು. ಕೀರ್ತ. 4:8
806 ನನ್ನ ಸುಖದ ಬಾಳು ಶೀಘ್ರವಾಗಿ ಚಿಗುರುತ್ತದೆ. ಯೆಶಾ:58:8
807 ನನ್ನ ನಂಬಿಕೆಯೇ ಸರ್ವಾಂಗ ಸುಖವನ್ನು ತರುತ್ತದೆ. ಅಪೋ:3:13
808 ಕರ್ತನ ವಾಕ್ಯವು ನನಗೆ ಜೀವವೂ ನನ್ನ ದೇಹಕ್ಕೆಲ್ಲಾ ಆರೋಗ್ಯವಾಗಿರುತ್ತದೆ, ಜ್ಞಾನೋ:4:20-22
809 ಸಂಪೂರ್ಣರ್ವಾದ ದೇವ ಪ್ರಸನ್ನತೆಯು ಆತನ ಬಲವೂ ಶಕ್ತಿಯೂ ನನ್ನ ಮೇಲೆ ಬರುವಾಗ ನನ್ನ ಎಲ್ಲಾ ಕೊರತೆಗಳೂ ಬಲಹೀನತೆಗಳೂ ಎಲ್ಲಾ ತಾನಾಗಿ ಮರೆಯಾಗುತ್ತದೆ. 1ಕೊರಿ 13:10
810 ಎಲ್ಲಾದರಲ್ಲಿ ಎಲ್ಲಾ ವಿಷಯಗಳಲ್ಲಿ ನನ್ನನ್ನು ತನ್ನ ಆತ್ಮನಿಂದ ತುಂಬಿಸುವನು. ನನ್ನನ್ನು ದೇವರು ತನ್ನ ಬಲದಿಂದ ಆರೋಗ್ಯದಿಂದಲೂ ತುಂಬಿಸುವನು. ಎಫೆ. 1:26
811 ಇಲ್ಲದ್ದನ್ನು ಇರುವುದಾಗಿಯೂ ಕರೆಯುವ ದೇವರನ್ನು ನನ್ನ ಶರೀರವನ್ನು ಹೊಸದಾಗಿ ರೂಪಿಸಿ ಅದ್ಭುತಗಳನ್ನು ಹೊಂದುವಂತೆ ಮಾಡುವನು. ನಾನು ಆತನಲ್ಲಿ ನೂತನ ಸೃಷ್ಠಿ. ರೋಮಾ 4:17
812 ನಾನು ಯಾವಾಗಲೂ ನಿರ್ವಲನಾಗಿದ್ದೆನು ಆಗಲೇ ಬಲವುಳ್ಳವನಾಗಿರುವೆನು. 2ಕೊರಿ. 12:10
813 ಸತ್ಯವೇದದಲ್ಲಿನ ಪರಿಶುದ್ಧ ಜನರು ಹೇಗೆ ತಮ್ಮ ನಂಬಿಕೆಯಿಂದ ಬಲಹೀನತೆಯಲ್ಲಿ ಬಲಗೊಂಡಿರುವರೋ ಹಾಗೆಯೇ ನಾನೂ ನನ್ನ ನಂಬಿಕೆಯಿಂದಲೇ ಬಲಹೀನತೆಯಲ್ಲಿ ಬಲಗೊಳ್ಳುವೆನು. ಇಬ್ರಿ 11:34
814 ಈಗ ನಾಣು ಬಲಹೀನನಲ್ಲ. ನಾನು ಒಬ್ಬ ಬಲಶಾಲಿ ಯೋಹಾ. 3:10
815ನನ್ನ ದೇವರಾಗಿರುವ ಕರ್ತನು ಕರುಣೆಯುಳ್ಳವನೂ ಕೃಪೆಯುಳ್ಳವನೂ ನಿತ್ಯ ಶಾಶ್ವತ ಶಾಂತಿಯುಳ್ಳವನೂ ಮಹಾದೆಯೂ ಕನಿಕರವುಳ್ಳವನೂ ಸತ್ಯವುಳ್ಳ ದೇವರೂ ಆಗಿರುವನು. ವಿಮೋ. 34:6
816 ಕರ್ತನೇ ನನ್ನನ್ನು ಕೈಬಿಡುವುದಿಲ್ಲ, ನ್ನ ತಾಯಿಯ ಗರ್ಭದಲ್ಲಿ ಸೃಷ್ಟಿಸಿದವನೂ ನೀನೇ ಅಲ್ಲವೇ ?
817 ನನ್ನ ದೇವರಾಗಿರುವ ಕರ್ತನು ಆತನ ಸೇವಕನಾದ ನಾನು ಸುಖವಾಗಿರುವುದನ್ನು ಆತನು ಎದುರು ನೋಡುತ್ತಾನೆ. ಕೀರ್ತ. 35:27
818 ದೇವರು ನನಗೆ ಬಲಹೀನತೆಯ ಆತಮ್ವನ್ನು ಕೊಡದೆ ಬಲವು ಪ್ರೀತಿ ಶಿಕ್ಷಣ ಆತ್ಮಗಳನ್ನು ಕೊಟ್ಟಿರುವನು. 2ತಿಮೋ. 1:7
819 ಕ್ರಿಸ್ತನು ನನಗಾಗಿ ಬಲಿಯಾಗಿ ಪಾಪ, ಶಾಪ, ವ್ಯಾಧಿ ಇವುಗಳಿಂದ ನನ್ನನ್ನು ಬಿಡುಗಡೆ ಮಾಡಿದ್ದಾನೆ. ಯೋಹಾ 8:36
820 ನಾನು ಬಿಡುಗಡೆ ಹೊಂದುವುದು ಮಾತ್ರವಲ್ಲದೆ ಇತರರನ್ನು ಬಿಡುಗಡೆ ಮಾಡುವ ಶಕ್ತಿಯನ್ನು ನನಗೆ ಕೊಟ್ಟಿದ್ದಾನೆ. ಯೋಹಾ 14:12