821ನಾನು ಯಾರ ಮೇಲೆ ಕರ್ತನ ಕೈಗಳನ್ನು ಇಡುತ್ತೇನೋ ಅವರಿಗೆ ಎಷ್ಟೋ ಭಯಂಕರವಾದ ವ್ಯಾಧಿಗಳಿದ್ದರೂ ಗುಣಹೊಂದುವರು. ಮಾರ್ಕ.16:18
822ವ್ಯಾಧಿಗಳಿಗೆ ಕಾರಣವಾಗಿರುವ ಸೈತಾನನನ್ನು ಓಡಿಸಲು ದೇವರು ನನಗೆ ಅಧಿಕಾರ ಕೊಟ್ಟಿದ್ದಾನೆ. ಮಾರ್ಕ 16:17
823ಅಪೋಸ್ತಲನಾಗಿರುವ ಪೇತ್ರನ ನೆರಳೀನ ಮೂಲಕ ಜನರನ್ನು ಸ್ವಸ್ಥಪಡಿಸಿದಾತನು ನನ್ನನ್ನು ತೆಗೆದುಕೊಂಡು ಜನರುಗಳನ್ನು ಗುಣಪಡಿಸುವನು. ಅ.ಪೂ. 5:15
824ಅಪೋಸ್ತಲನಾದ ಪೌಲನು ವಸ್ತ್ರಗಳನ್ನು ತೆಗೆದುಕೊಂಡು ವ್ಯಾಧಿಗ್ರಸ್ತರ ಮೇಲೆ ಹಾಕುವಾಗ ಗುಣಹೊಂದಿದರು. ಅ.ಪೂ19:12
825ಅಪೋಸ್ತಲನಾದ ಸ್ತೇಫನನ್ನು ತೆಗೆದುಕೊಂಡು ಜನರನ್ನು ಅದ್ಭುತಗಳನ್ನೂ ಮಹಾತ್ಕಾರ್ಯಗಳನ್ನೂ ನಡೆಸಿದ ಕರ್ತನು ನನ್ನನ್ನು ತೆಗೆದುಕೊಂಡು ಹಾಗೆಯೇ ಮಾಡುವನು. ಅ.ಪೂ,6:8
826ಅಪೋಸ್ತಲನಾದ ಫಿಲಿಪ್ಪನ ಮೂಲಕ ಅಶುದ್ಧಾತ್ಮಗಳನ್ನು ಹೊರಡಿಸಿ ಪಾಶ್ರ್ವವಾಯು ರೋಗಗಳನ್ನು ಕುಂಟರನ್ನೂ ಗುಣಪಡಿಸಿದ ಕರ್ತನು ನನ್ನನ್ನು ತೆಗೆದುಕೊಂಡು ಅದ್ಭುತಗಳನ್ನು ಮಾಡುವನು . ಅ.ಪೂ,8:7
827ಕರ್ತನಾಗಿರುವ ಆತ್ಮನಾದಾತನು ನನ್ನಲ್ಲಿರುವನು. ಬಡವರಿಗೂ ಸುವಾರ್ತೆಯನ್ನು ತಿಳಿಸುವುದಕ್ಕೆ ಮನಮುರಿದವರನ್ನು ಕಟ್ಟುವುದಕ್ಕಾಗಿ ಅದನ್ನು ಬಿಡುಗಡೆ ಮಾಡುವುದಕ್ಕೂ ಕರ್ತನು ನನ್ನನ್ನು ಅಭಿಷೇಕಿಸಿದನು. ಯೆಶಾ. 61:1
828ಕ್ರಿಸ್ತನ ಮೇಲಿದ್ದ ಅಭಿಷೇಕವು ನನ್ನ ಮೇಲಿರುವುದು. ಆತನ ಅಭಿಷೇಕದಿಂದ ನೊಗಗಳು ಮುರಿಯಲ್ಪಡುವುದು. ಅ.ಪೂ,8:7
829ಪರಿಶುದ್ಧಾತ್ಮನ ಅಭಿಷೇಕವು ನನ್ನ ಮೇಲಿರುವುದು. ಆತನ ಅಭಿಷೇಕವು ನಾನು ಒಳ್ಳೆಯದನ್ನು ಮಾಡುವಂತೆ ಸೈತಾನನಿಂದ ಕಟ್ಟಲ್ಪಟ್ಟ ಎಲ್ಲರನ್ನೂ ಬಿಚ್ಚಿ ಬಿಡುಗಡೆ ಮಾಡುವುದಕ್ಕೆ ನನ್ನನ್ನು ಇಟ್ಟಿದ್ದಾನೆ. ಯೆಶಾ. 10:27.
830ಸುಟ್ಟು ಹಾಕುವ ಆತ್ಮನಿಂದ ಕರ್ತನು ನನ್ನ ಕಟ್ಟುಗಳನ್ನು ಮಾಟ ಮಂತ್ರದ ಶಕ್ತಿಗಳನ್ನು ಹಾಗೂ ಇತರ ಅಶುದ್ಧಾತ್ಮಗಳ ಶಕ್ತಿಗಳನ್ನು ಸುಟ್ಟು ನಾಶ ಮಾಡುವನು.
831ಕ್ರಿಸ್ತನನ್ನು ಸತ್ತವರೊಳಗಿನಿಂದ ಎಬ್ಬಿಸಿದಾತನು ನನ್ನಲ್ಲಿ ವಾಸವಾಗಿರುವನು. ತನ್ನ ಆತ್ಮನಿಂದ ಸಾವಿಗೆ ಎದುರಾಗಿರುವ ನನ್ನ ಶರೀರವನ್ನು ಎಬ್ಬಿಸುವನು. ರೋಮಾ:8:11
832ವೈದ್ಯರಿಂದ ಆಗದೆಯಿರುವ ಚಿಕಿತ್ಸೆ ಔಷದೋಪಚಾರಗಳಿಂದ ಕೈಬಿಡಲ್ಪಟ್ಟ ವ್ಯಾಧಿಗಳನ್ನು ಕರ್ತನು ಆತ್ಮನಿಂದ ಗುಣಪಡಿಸಲು ಸಾಧ್ಯವಾಗಿದೆ. ಜೆಕ:4:6
833ಆ ಹೊತ್ತು ಸತ್ತು ಹೋಗಿದ್ದ ಎಲುಬುಗಳಿಗೆ ಜೀವಕೊಟ್ಟು ದೊಡ್ಡ ಸೈನ್ಯವಾಗಿ ಎಬ್ಬಿಸಿದಾತನು ಅದ್ಭುತಗಳನ್ನು ಮಾಡಲು ಇಂದೂ ಶಕ್ತನಾಗಿರುವನು. ಯೆಹೆ:37:10
834ನನ್ನ ನಂಬಿಕೆಯಂತೆಯೇ ದೈವೀಕ ಸುಖವನ್ನು ಹೊಂದಿಕೊಳ್ಳುವೆ. ಮತ್ತಾ 9:23
835ಕರ್ತನು ನನ್ನನ್ನು ಬಲಪಡಿಸಿ ನನಗೆ ಸಹಾಯ ಮಾಡುವನು. ಕೀರ್ತ. 4:10
836ಕರ್ತನು ನನ್ನ ಮೇಲೆ ಪ್ರೀತಿಯಾಗಿರುವುದರಿಂದ ಎಲ್ಲಾ ಕೇಡಿನಿಂದ ನನ್ನನ್ನು ತಪ್ಪಿಸುತ್ತಾನೆ. ಕೀರ್ತ.18:19
837ನನ್ನ ದೇವರ ಕೈಯಲ್ಲಿ ಆಗದೆಯಿರುವ ಕಾರ್ಯಗಳು ಯಾವುದೂ ಇಲ್ಲ. ಯೆರೆ.32:17
838ಆತನು ಅಪ್ರಮೇಯ ಕಾರ್ಯಗಳನ್ನು ಅಸಂಖಯವಾದ ಅದ್ಭುತಕಾರ್ಯಗಳನ್ನು ಮಾಡುತ್ತಾನೆ. ಯೋಬ. 5:9
839ಮನುಷ್ಯರಿಂದಲೂ, ವೈದ್ಯರಿಂದಲೂ, ವೈದ್ಯಕೀಯ ವಿಜ್ಞಾನದಿಂದಲೂ ಮಾಡಲಾಗದ ಕಾರ್ಯಗಳನ್ನು ನನ್ನ ದೇವರು ಮಾಡಲು ಶಕ್ತನಾಗಿರುವನು. ಲೂಕ 18:27
840ಕರ್ತನು ನನ್ನ ದುಃಖವನ್ನು ನನ್ನ ಸಂಕಟ ಕಳವಳಗಳಿಂದಲೂ ಬಿಡಿಸಿ ನನ್ನನ್ನು ವಿಶ್ರಾಂತಿಗೊಳಿಸುವನು. ಯೆಶಾ.14:3