841ದೇವರ ಕುರಿಮರಿಯಾದಾತನು ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಶತ್ರುಗಳನ್ನು ಜೈಯಿಸವನು. ಆತನು ನನ್ನೊಡನಿರುವುದರಿಂದ ನಾನು ಜಯಹೊಂದುವೆನು. ಪ್ರಕ.17:14
842ನಾನು ಕರ್ತನನ್ನು ಎಡೆಬಿಡದೆ ಕೊಂಡಾಡುವೆನು. ಆತನ ಸ್ತೋತ್ರವು ಯಾವಾಗಲೂ ನನ್ನ ಬಾಯಲ್ಲಿರುವುದು ಕೀರ್ತ. 34:1
843ನನ್ನ ಮನಸ್ಸು ಯೆಹೋವನಲ್ಲಿ ಹಿಗ್ಗುತ್ತಿರುವುದು. ಇದನ್ನು ದೀನರು ಕೇಳಿ ಸಂತೋಷಪಡುವರು. ಕೀರ್ತ 34:2
844ನನ್ನೊಡನೆ ಯೆಹೋವನನ್ನು ಕೊಂಡಾಡಿರಿ. ನಾವು ಒಟ್ಟಾಗಿ ಆತನ ಹೆಸರನ್ನು ಘನಪಡಿಸೋಣ. ಕೀರ್ತ 34:3
845ಯೆಹೋವನೇ ಅನ್ಯ ಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು ನಿನ್ನ ನಾಮವನ್ನು ಸಂಕೀರ್ತಿಸುವೆನು. ಕೀರ್ತ 18:49
846ಇಸ್ರಾಯೇಲ್ ದೇವರಾದ ಯೆಹೋವನನ್ನು ಸ್ತುತಿಸುವೆನು ಹಾಡಿ ಹರಸುವೆನು. 1ಪೂರ್ವ. 16:4
847ಯೆಹೋವನಿಗೆ ಕೃತಜ್ಞತಾ ಸ್ತುತಿ ಮಾಡಿರಿ, ಆತನ ನಾಮವು ಮಹತ್ವವುಳ್ಳದ್ದು. ಜನಾಂಗಗಳಲ್ಲಿ ಆತನ ಕೃತ್ಯಗಳು ಪ್ರಸಿದ್ಧಪಡಿಸಿರಿ. 1ಪೂರ್ವ 16:8
848ಯೆಹೋವನು ದೊಡ್ಡವನು. ಬಹಳವಾಗಿ ಸ್ತುತ್ಯನು ಆಗಿದ್ದಾನೆ. ಎಲ್ಲಾ ದೇವರುಗಳಲ್ಲಿ ಆತನು ಭಯಂಕರನು. 1ಪೂರ್ವ. 16:25
849ಯೆಹೋವನಿಗೆ ಕೃತಜ್ಞತಾ ಸ್ತುತಿ ಮಾಡಿರಿ. ಆತನು ಒಳ್ಳೆಯನು. ಆತನ ಕೃಪೆಯು ಶಾಶ್ವತವಾಗಿರುವುದು. 1ಪೂರ್ವ. 16:34
850ನಮ್ಮ ಸಹಾಯಕನಾಗಿರುವ ದೇವರೇ ನಮ್ಮನ್ನು ರಕ್ಷಿಸು. ಅನ್ಯ ಜನಗಳಲ್ಲಿ ಚದುರಿರುವ ನಮ್ಮನ್ನು ಬಿಡಿಸಿ ಕೂಡಿಸು ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು. 1ಪೂರ್ವ. 16:35
851ಇಸ್ರಾಯೇಲ್ ದೇವರಾದ ಯೆಹೋವನನ್ನು ಮಹಾ ಸ್ವರದಿಂದ ಕೀರ್ತಿಸುವೆನು. 2ಪೂರ್ವ. 20:19
852ಯೆಹೋವನು ಮಾಡಿದ ನ್ಯಾಯವಾದ ತೀರ್ಪಿಗಾಗಿ ನಾನು ಆತನನ್ನು ಕೀರ್ತಿಸುವೆನು, ಕೊಂಡಾಡುವೆನು, ಪರಾತ್ಪರ ದೇವರಾದ ಯೆಹೋವನ ನಾಮವನ್ನು ಸಂಕೀರ್ತಿಸುವೆನು. ಕೀರ್ತ. 7:17
853ಯೆಹೋವನೇ ಮನುಷ್ಯರ್ವಕವಾಗಿ ನಿನ್ನನ್ನು ಕೊಂಡಾಡುವೆನು. ನಾನು ಮಾಡಿದ ಅದ್ಭುತ ಕೃತ್ಯಗಳನ್ನೆಲ್ಲಾ ವರ್ಣಿಸುವೆನು. ಕೀರ್ತ 9:1
854ನಾನು ಕರ್ತನ ಸ್ತೋತ್ರಗಳನ್ನು ಸಿದ್ಧಪಡಿಸುವೆನು. ನಿನ್ನಿಂದಾದ ಕರ್ತನಿಗಾಗಿ ಚಿಯೋನ್ ಎಂಬ ಕುಮಾರಿಯ ಬಾಗಿಲುಗಳಲ್ಲಿ ಹರ್ಷಿಸುವೆನು. ಕೀರ್ತ 9:14
855ನನಗೆ ಆಲೋಚನೆಗಳನ್ನು ಕೊಟ್ಟ ಕರ್ತನನ್ನು ಸ್ತುತಿಸುವೆನು. ರಾತ್ರಿ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುವದು. ಕೀರ್ತ 16.4
856ಇಸ್ರಾಯೇಲ್ಯರ ಸ್ತೋತ್ರ ಸೀಮಹಾಸನದಲ್ಲಿರುವಾತನೇ ನೀನು ಪವಿತ್ರ ಸ್ವರೂಪನು. ಕೀರ್ತ 22.3
857ಮಹಾ ಸಭೆಯಲ್ಲಿ ಕರ್ತನನ್ನು ಸ್ತುತಿಸುವೆ. ಕರ್ತನಿಗೆ ಭಯಪಡುವವರ ಮುಂಭಾಗ ನನ್ನ ಹರಕೆಗಳನ್ನು ಸಲ್ಲಿಸುವೆನು. ಕೀರ್ತ 22.25
858ಎಲ್ಲಾದರಲ್ಲಿ ಸ್ತೋತ್ರವನ್ನು ಸಲ್ಲಿಸುವೆ ಇದೇ ನಿಮ್ಮ ವಿಷಯವಾಗಿ ಕ್ರಿಸ್ತಯೇಸುವಿನಲ್ಲಿ ತೋರಿಬಂದ ದೇವರ ಚಿತ್ತ 1ಥೆಸ.5:18
859ನನ್ನ ನಾಲಿಗೆಯು ನಿನ್ನ ನೀತಿಯನ್ನು ಮಹಿಮೆಯನ್ನು ದಿನವೆಲ್ಲಾ ವರ್ಣಿಸುತ್ತದೆ. ಕೀರ್ತ 36:28
860ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನ ಹಾಡಿ ಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು. ಕೀರ್ತ 63.4