861ನನ್ನ ಬಾಯಲ್ಲಿ ನಿನ್ನ ಸ್ತೋತ್ರವಲ್ಲದೆ ಮತ್ತೊಂದಿಲ್ಲ. ದಿನವೆಲ್ಲಾ ನಿನ್ ಘನತೆಯನ್ನು ವರ್ಣಿಸುತ್ತಿರುವೆನು. ಕೀರ್ತ 71.8
862ಮುಂದಣ ಸಂತತಿಯವರಿಗೆ ನಾನು ಕರ್ತನ ಸ್ತುತಿಗಳನ್ನು ಬಲಗಳನ್ನು ಕರ್ತನು ಮಾಡಿದ ಪರಾಕ್ರಮಗಳನ್ನು ಅದ್ಭುತಗಳನ್ನು ವಿವರಿಸುತ್ತದೆ. ಕೀರ್ತ 78:4
863ಕರ್ತನನ್ನು ಎಂದೆಂದಿಗೂ ವಣ ್ಸುತ್ತಾ ಹೋಗುವೆನು. ಸಂತಾನದವರಿಗೆಲ್ಲಾ ನಿನ್ನ ಮಹತ್ವವನ್ನು ವರ್ಣಿಸುತ್ತಾ ಹೋಗುವೆನು. ಕೀರ್ತ 79:13
864ಕರ್ತನನ್ನು ಸ್ತುತಿಸುತ್ತಿರುವೆನು. ಉನ್ನತವಾದವನನ್ನು ಸಂಕೀರ್ತಿಸುವೆನು. ಕೀರ್ತ 92:1
865ಕರ್ತನ ಮಹಾತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು ? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು ? ಕೀರ್ತ 106:2
866ನಾನು ಸ್ತುತಿಸುವ ನನ್ನ ದೇವರೇ ಸುಮ್ಮನಿರಬೇಡ ಕೀರ್ತ 109:1
867ಕರ್ತನನ್ನು ಸ್ತುತಿಸುವೆನು. ದೇವರನ್ನು ಸಂಕೀರ್ತಿಸುವುದು ಒಳ್ಳೆಯದು. ಸ್ಥಿತಿಯಲ್ಲಿ ಸಂತೋಷಕರವೀ ಆಗಿದೆ. ಕೀರ್ತ 147:1
868ಕರ್ತನಿಗೆ ಕೃತಜ್ಞತಾ ಸ್ತುತಿ ಮಾಡಿರಿ ಕಿನ್ನರಿಯೊಡನೆ ನಮ್ಮ ದೇವರನ್ನು ಕೊಂಡಾಡಿರಿ. . ಕೀರ್ತ 147:1
869ಹಲ್ಲೆಲೂಯ ಕರ್ತನಿಗೆ ಹೊಸ ಹಾಡನ್ನು ಹಾಡುವೆನು. ಭಕ್ತ ಸಭೆಯಲ್ಲಿ ಆತನನ್ನು ಸ್ತುತಿಸಿರಿ . ಕೀರ್ತ 149:1
870ಹಲ್ಲೆಲೂಯ ದೇವರನ್ನು ಆತನ ಪರಿಶುದ್ಧಾಲಯದಲ್ಲಿ ಸ್ತುತಿಸಿರಿ. ಆತನ ಶಕ್ತಿಪ್ರದವಾದ ಆಕಾಶಮಂಡಲದಲ್ಲಿ ಹೊಸ ಆತನನ್ನು ಸ್ತುತಿಸಿರಿ . ಕೀರ್ತ 150:1
871ಕರ್ತನ ಮಹಾತ್ಕಾರ್ಯಗಳಿಗಾಗಿ ಆತನನ್ನು ಸ್ತುತಿಸಿರಿ . ಆತನ ಪ್ರಭಾವಕ್ಕೆ ಸರಿಯಾಗಿ ಆತನನ್ನು ಸ್ತುತಿಸಿರಿ . ಕೀರ್ತ 150:2
872ಕೊಂಬುದುತ್ತಾ ಆತನನ್ನು ಸ್ತುತಿಸಿರಿ ಸ್ವರಮಂಡಲ ಕಿನ್ನರಿಗಳಿಂದ ಆತನನ್ನು ಸ್ತುತಿಸಿರಿ . ಕೀರ್ತ 150:3
873ದಮ್ಮಡಿ ಬಡಿಯುತ್ತಾ ಕುಣ ಯುತ್ತಾ ಆತನನ್ನು ಸ್ತುತಿಸಿರಿ ತಂತಿವಾದ್ಯಗಳಿಂದಲೂ, ಕೊಳಲುಗಳಿಂದಲೂ ಆತನನ್ನು ಸ್ತುತಿಸಿರಿ . ಕೀರ್ತ 150:4
874ತಾಳದಿಂದ ಆತನನ್ನು ಸ್ತುತಿಸಿರಿ ಝಲ್ಲರಿಯಿಂದ ಆತನನ್ನು ಸ್ತುತಿಸಿರಿ . ಕೀರ್ತ 150:5
875ಕರ್ತನಿಗೆ ನೂತನ ಗೀತವನ್ನು ಹಾಡುವೆನು ದೀಪಾಂತಗಳೇ, ದ್ವೀಪ ನಿವಾಸಿಗಳೇ ಕಟ್ಟ ಕಡೆಯಿಂದ ಕರ್ತನ ಸ್ತುತಿಯನ್ನು ಹಾಡುವೆನು. ಯೆಶಾ 42:12
876ಕರ್ತನಿಗೆ ಮಹಿಮೆ ಸಲ್ಲಿಸಿ ಆತನ ಸ್ತುತಿಯನ್ನು ದೀಪಾಂತರಗಳಲ್ಲಿ, ಸ್ತೋತ್ರಗಳನ್ನು ಹಬ್ಬಿಸಾರುವೆನು. 42:12
877ನನ್ನನ್ನು ಕರ್ತನು ತಾನಾಗಿ ಏರ್ಪಡಿಸಿದ್ದಾನೆ. ಆದ್ದರಿಂದಲೇ ಕರ್ತನ ಸ್ತುತಿಯನ್ನು ಹಾಡಿ ಹರಸುವೆನು. ಯೆಶಾ 43:21
878ಕರ್ತನು ನಮ್ಮನ್ನು ಏದೇನಿನಂತೆಯೂ, ಕರ್ತನ ತೋಟದಂತೆಯೂ ಮಾಡುವನು. ಸಂತೋಷವು ಸ್ತುತುಯೂ ಗೀತೆಗಳ ಶಬ್ಧವೂ ನಿನ್ನಲ್ಲಿ ಉಂಟಾಗಿರುತ್ತದೆ. ಯೆಶಾ. 51:3
879ನಮ್ಮ ದಏಶದಲ್ಲಿ ಬಲಾತ್ಕಾರದ ಸುದ್ದಿಯೇ ಕಿವಿಗೆ ಕೇಳದು, ನನ್ನ ಪ್ರಾಂತ್ಯದಲ್ಲಿ ಭಂಗನಾಶನಗಳ ವಾರ್ತೆಯೇ ಕೇಳಬರುವುದಿಲ್ಲ. ಆಗ ದೇವರ ಕರುಣೆಯು ನನ್ನ ಪೌಳಿಗೋಡೆಗಳು ದೇವ ಸ್ತೋತ್ರವು ನನ್ನ ಬಾಗಿಲುಗಳು ಎಂದುಕೊಳ್ಳುವಿ. ಯೆಶಾ. 60:18
880ಭೂಮಿಯು ತನ್ನೊಳಗಿಂದ ಮೊಳೆಕೆಯನ್ನೂ ಹೊರಡಿಸುವಂತೆಯೂ ತೋಟವು ತನ್ನಲ್ಲಿ ಬಿತ್ತಿದ್ದನ್ನು ಮೊಳೆಯಿಸುವ ಹಾಗೂ ಕರ್ತನಾದ ಯೆಹೋವನು ಎಲ್ಲಾ ಜನಾಂಗಗಳ ಎದುರಿನಲ್ಲಿ ಧರ್ಮವನ್ನೂ ಸ್ತೋತ್ರವನ್ನೂ ಮೊಳೆಯಿರಿಸು ವೆನು ಯೆಶಾ.61:11