881ಕರ್ತನು ನನಗೆ ಅನುಗ್ರಹಿಸಿದ್ದನ್ನೆಲ್ಲಾ ಸ್ಮರಿಸಿ ಆತನ ಕೃಪಾಕಾರ್ಯಗಳನ್ನು ಸ್ತುತ್ಯಕೃತ್ಯಗಳನ್ನು ಆತನ ಕನಿಕರದಿಂದಲೂ ಕೃಪಾತಿಶಯದಿಂದಲೂ ಇಸ್ರಾಯೇಲ್ ವಂಶದವರಿಗೆ ದಯಪಾಲಿಸಿರುವ ಮಹೋಪಕಾರಗಳನ್ನು ಪ್ರಸಿದ್ಧಿ ಪಡಿಸುವೆನು. ಯೆಶಾ.63:7
882ಕರ್ತನನ್ನು ಸಂಕೀರ್ತಿಸುತ್ತೇನೆ. ಕರ್ತನನ್ನು ಸ್ತುತಿಸುತ್ತೇನೆ.
883ಕೆಡುಕರ ಕೈಯಿಂದ ದೀನನ ಪ್ರಾಣವನ್ನು ರಕ್ಷಿಸಿದ್ದಾನೆ. ಯೆರೆ. 20:13
884ನಾನು ಹೊಟ್ಟೆ ತುಂಬ ಊಟ ಮಾಡಿ ತೃಪ್ತಿಗೊಂಡು ನನ್ನನ್ನು ಆಶ್ಚರ್ಯವಾಗಿ ನಿವಾಸಕೊಂಡು ಬಂದ ನನ್ನ ದಏವರಾಗಿರುವ ಕರ್ತನ ನಾಮವನ್ನು ಸ್ತುತಿಸುವೆನು ಯೋವೆ. 2:26
885ಮಕ್ಕಳ ಬಾಯಿಂದಲೂ ಮೊಲೆಕೂಸುಗಳ ಬಾಯಿಂದಲೂ ಸ್ತುತಿ ಉಂಟಾಗುವಂತೆ ಉಂಟು ಮಾಡಿದ ಕರ್ತನನ್ನುಸ್ತುತಿಸುತ್ತೇನೆ. ಮತ್ತಾ. 21:16
886ಮೇಲಣ ಲೋಕದಲ್ಲಿ ದೇವರಿಗೆ ಮಹಿಮೆಯೂ ಭೂಲೋಕದಲ್ಲಿ ಮನುಷ್ಯರೊಳಗೆ ಸಮಾಧಾನ ದೇವರು ಅವನಿಗೆ ಒಲಿಯುತ್ತಾನೆ. ಲೂಕ 2:14
887ಫೆಸದವರಿಗೆ ಬರೆದ ಪತ್ರಿಕೆಯಿಂದ
888ನನ್ನ ದೇವರು ಕ್ರಿಸ್ತನೊಂದಿಗೆ ಉನ್ನತದಲ್ಲಿ ಆತ್ಮೀಕ ಸಂಬಂಧವಾದ ಸಕಲ ಆತ್ಮೀಕ ಆಶೀರ್ವಾದಗಳಿಂದ ನನ್ನನ್ನು ಆಶೀರ್ವದಿಸುತ್ತಾನೆ ಎಫೆ. 1:3
889ನನ್ನ ದೇವರು ನನ್ನನ್ನು ಜಗದುತ್ಪತ್ತಿಗೆ ಮುಂಚೆಯೇ ಕ್ರಿಸ್ತನಲ್ಲಿ ಆರಿಸಿಕೊಂಡನು. ಆದುದರಿಂದ ನಾನು ಕರ್ತನವನು. ಎಫೆ.1:4
890ಕರ್ತನು ತನ್ನ ದಯಾಪೂರ್ವಕವಾದ ತನ್ನ ಚಿತ್ತಾನುಸಾರವಾಗಿ ನನ್ನನ್ನು ಯೇಸುಕ್ರಿಸ್ತನ ಮೂಲಕವಾಗಿ ನಮಗೆ ಸ್ವೀಕಾರ ಪುತ್ರರಾಗುವಂತೆ ಮಾಡಿದ್ದಾನೆ. ಎಫೆ.1:6
891ಆತನ ಕೃಪೆಯು ಐಶ್ವರ್ಯದಂತೆಯೇ ಕ್ರಿಸ್ತನ ರಕ್ತದಿಂದಲೇ ಪಾಪ ಮನ್ನಿಸುವಿಕೆಯಿಂದ ನಮಗೆ ಬಿಡುಗಡೆಯಾಯಿತು. ಎಫೆ. 1:7
892ಅದಾಗಿ ಕ್ರಿಸ್ತನ ಮೇಲೆ ನಂಬಿಕೆಯಾಗಿರುವ ನಾನು ಆತನ ಮಹಿಮೆಗೋಸ್ಕರ ಎದುರು ನೋಡುತ್ತೇನೆ. ಎಫೆ.1:11
893ನಾಣು ಸುವಾರ್ತೆಯೆಂಬ ಸತ್ಯವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ನಿಧಾನ ಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದ್ದೀರಿ. ಎಫೆ.1:13
894ನನ್ನ ದೇವರು ಎಲ್ಲವನ್ನು ಎಲ್ಲಾ ವಿಷಯದಲ್ಲೂ ವ್ಯಾಪಿಸುವಾತನಿಂದ ಅದು ಪರಿಪೂರ್ಣತೆಯುಳ್ಳದ್ದಾಗಿದೆ. ಎಫೆ.1:23
895ಸತ್ಯವನ್ನು ತಿಳಿದುಕೊಂಡಿರುವೆ. ಅಂತ್ಯವು ನನ್ನನ್ನು ಉದ್ಧರಿಸಿ ಬಿಡುಗಡೆ ಮಾಡುತ್ತದೆ. ಯೆಹೋ. 8:32
896ಕೃಪೆಯಿಂದ ವಿಶ್ವಾಸವನ್ನು ಹೊಂದಿ ರಕ್ಷಿಸಲ್ಪಟ್ಟಿದ್ದೇನೆ. ಇದು ನಿನ್ನಿಂದುಂಟಾದದ್ದಲ್ಲ ಇದು ದೇವರ ವರವೇ. ಎಫೆ.2:8
897ನಾನು ಸತ್ಕಾರ್ಯಗಳನ್ನು ಮಾಡುವುದಕ್ಕಾಗಿಯೇ ಯೇಸುಕ್ರಿಸ್ತನಲ್ಲಿ ಸೃಷ್ಠಿಸಲ್ಪಟ್ಟೆವು. ದೇವರು ನಮ್ಮ ಮೇಲೆ ನೇಮಿಸಿದನು. ಎಫೆ.2:10
898ಮೊದಲು ದೂರವಾಗಿದ್ದ ನಾನು ಈಗ ಕ್ರಿಸ್ತ ಯೇಸುವಿನಲ್ಲಿ ಕ್ರಿಸ್ತನ ರಕ್ತದಿಂದ ಕರ್ತನಲ್ಲಿ ಸಮೀಪಸ್ಥನಾಗಿರುವೆನು. ಎಫೆ.2:13
899ಆದುದರಿಂದ ನಾನು ಅನ್ಯನಲ್ಲ. ಪರದೇಶಿಯೂ ಅಲ್ಲ. ಭಕ್ತರೊಡನೆ ಒಂದೇ ನಗರದವರಂತೆ ಒಂದೇ ಅಸ್ತಿವಾರದಂತೆ ಒಂದೇ ಕುಟುಂಬವಾಗಿದ್ದೇವೆ, ಎಫೆ. 2:20
900ನಾವು ಅಪೋಸ್ತಲರು ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿಯೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ ಎಫೆ. 2:20