901ಜಯಗೊಂಡವರು ದೇವರ ವೀಣೆಗಳನ್ನಿಡಿದುಕೊಂಡು ಗಾಜಿನ ಸಮುದ್ರದ ಬಳಿ ನಿಂತುಕೊಂಡಿರುವಾಗ ನಾನೂ ಕೂಡ ಅವರೊಡನೆ ನಿಲ್ಲುವೆ. ಪ್ರಕ. 15:2
902ಕ್ರಿಸ್ತನಲ್ಲಿಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಿಮಗೆ ಉಂಟಾಗುವುದು. ಧೈರ್ಯವೂ ದೃಢನಂಬಿಕೆಯೂ ದೇವರ ಬಳಿಗೆ ಸೇರಲು ಶ್ಲ್ಯಾಘ್ಯವೂ ಉಂಟಾಯಿತು. ಎಫೆ.3:12
903ನನ್ನ ದೇವರು ಸರ್ವಶಕ್ತನು. ಮಾತ್ರವಲ್ಲದೆ ನಾಣು ಬೇಡಿಕೊಳ್ಳುವುದಕ್ಕೂ ನೆನಿರುವುದಕ್ಕೂ ಬಹಳ ಅಧಿಕವಾಗಿ ನಮ್ಮೊಳಗೆ ಕ್ರಿಯೆ ಮಾಡುವ ಶಕ್ತಿಯಂತೆಯೇ ನನಗೆ ಶಕ್ತಿಯನ್ನುಂಟು ಮಾಡಲು ಶಕ್ಯನಾಗಿದ್ದಾನೆ. ಎಫೆ.3:20
904ನಾನು ದೇವರ ಕುಮಾರನ ಒಂದೇ ಮನಸ್ಸುಳ್ಳವನಾಗಿ ಕ್ರಿಸ್ತನಲ್ಲಿ ಪರಿಪೂರ್ಣತೆಯೆಂಬ ಪ್ರಯಾಣವನ್ನು ಮುಟ್ಟುವ ತನಕ ಪೂರ್ಣಪುರುಷನಾಗುವೆ ಎಫೆ. 4:12
905ಕರ್ತನಲ್ಲಿಯೂ ಆತನ ಸತ್ವದ ಶಕ್ತಿಯಲ್ಲಿಯೂ ನಾನು ಬಲಹೊಂದುವೆನು. ಎಫೆ. 6:10
906ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲಿಸಲು ತ್ರಾಣವುಳ್ಳವರಾಗಿ ನಾನು ಸರ್ವಾಯುಧಗಳನ್ನು ಧರಿಸಿಕೊಳ್ಳುವೆನು. ಎಫೆ.6:11
907ನಾನು ದೇವರ ಮಗುವಾಗಿರುವುದರಿಂದ ಯೇಸುಕ್ರಿಸ್ತನ ನಾಮದಲ್ಲಿ ನನಗೆ ಸಕಲ ವಿಷಯದಲ್ಲಿಯೂ ಅಧಿಕಾರವುಂಟು, ಶಕ್ತಿಯುಂಟು, ಆಳ್ವಿಕೆಯು ಉಂಟು
908ಜೀವವೂ ಮರಣವೂ ನಾಲಿಗೆಯ ಅಧಿಕಾರದಲ್ಲಿರುತ್ತದೆ. ಆದುದರಿಂದ ನಾನು ಜೀವಕ್ಕೆ ಸಂಬಂಧಪಟ್ಟ ಜೀವಮಾರ್ಗ ಅಧಿಕಾರದ ಮಾತುಗಳನ್ನಾಡುತ್ತೇನೆ. ಪರಿಶುದ್ಧಕ್ಕೆ ಸಂಬಂಧಪಟ್ಟ ಮಾತುಗಳನ್ನು ಆಡುತ್ತೇನೆ. ಜ್ಞಾನೋ:18:21
909ಕರ್ತನು ನನ್ನನ್ನು ರಾಜರನ್ನಾಗಿಯೂ ಯಾಜಕರನ್ನಾಗಿಯೂ ಅಭಿಷೇಕಿಸಿದ್ದಾನೆ. ರಾಜನ ವಾರ್ತೆಗಳು ಎಲ್ಲಿರುತ್ತದೋ ಅಲ್ಲಿ ಅಧಿಕಾರವುಂಟು. ಪ್ರಕ. 1:6, ಪ್ರಸ. 8:4
910ಶತಾಧಿಪತಿಯು ಅಧಿಕಾರಕ್ಕೆ ನೂರು ಜನರು ವಧೇಯರಾಗುವರು ಆದರೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಕಲ ಅಧಿಕಾರವನ್ನು ಹೊಂದಿರುವಾತನು ನನಗೆ ಪ್ರಕೃತಿಯ ಮೇಲೆ ಅಧಿಕಾರವನ್ನು ಕೊಟ್ಟಿರುವನು. ನಾನು ಹೇಳುವುದೆಲ್ಲಾ ನಿಶ್ಚಯವಾಗಿ ನೆರವೇರುವುದು. ಕೀರ್ತ.1:3
911ಯೆಹೋಶುವನು ಸೂರ್ಯನ ಮೇಲೆಯೂ ಚಂದ್ರನ ಮೇಲೆಯೂ ಅಧಿಕಾರ ಹೊಂದಿ ಸೂರ್ಯನೇ ನೀನು ಗಿದ್ಯೋನಿನಲ್ಲಿಯೂ ಚಂದ್ರನೇ ನೀನು ಅಯ್ಯಾಲೋನ್ ತಗ್ಗಿನಲ್ಲಿಯೂ ನಿಲ್ಲಿರಿ ಎಂದು ಆಜ್ಞಾಪಿಸಿದನು. ನನಗೂ ಆ ಅಧಿಕಾರವುಂಟು. ಯೆಹೋ 10:12
912ಎಲೀಯನು ಮಳೆಯ ಮೇಲೂ ಮಂಜಿನ ಮೇಲೆಯೂ ಅಧಿಕಾರ ಹೊಂದಿ ಮಳೆ ಬೀಳದಂತೆ ಆಜ್ಞೆ ಮಾಡಿದನು. ನನಗೂ ಅದೇ ಅಧಿಕಾರವುಂಟು. 1ಅರ. 17:1, ಯಾಕೋ. 5:17
913ಕರ್ತನು ನನಗೆ ಅಧಿಕಾರ ಕೊಟ್ಟಂತೆಯೇ ನಾನು ಸೈತಾನನನ್ನು ಓಡಿಸಿಬಿಡುವೆ. ಹೊಸ ಭಾಷೆಗಳನ್ನು ಮಾತಾಡುವೆ. ರೋಗಿಗಳ ಮೇಲೆ ಕೈಗಳನ್ನಿಡಲು ಸ್ವಸ್ಥತೆ ಹೊದುವರು. ಮಾರ್ಕ. 16:17,18
914ಆಕಾಶದಲ್ಲೂ ಭೂಮಿಯಲ್ಲೂ ಸಕಲ ಅಧಿಕಾರವು ಅಶುದ್ಧಾತ್ಮಗಳನ್ನು ಓಡಿಸುವುದಕ್ಕೂ ಸಕಲ ವ್ಯಾಧಿಗಳನ್ನು ನೀಗಿಸಲು ಕ್ರಿಸ್ತನು ನನಗೆ ಅಧಿಕಾರ ಕೊಟ್ಟಿದ್ದಾನೆ. ಮತ್ತಾ. 10:1
915ಆದುದರಿಂದಲೇ ವ್ಯಾಧಿಗ್ರಸ್ತರನ್ನು ಸ್ವಸ್ಥಪಡಿಸುವೆನು. ಸತ್ತವರನ್ನು ಬದುಕಿಸುವೆನು. ಸೈತಾನನನ್ನು ಓಡಿಸಿ ಬಿಡುವೆನು. ಮತ್ತಾ.10:8
916ನಾನು ಅಧಿಕಾರದಿಂದ ಅಶುದ್ಧಾತ್ಮಗಳಿಗೆ ಆಜ್ಞೆ ಮಾಡುವಾಗ ಅವುಗಳು ನನಗೆ ವಿಧೇಯರಾಗುತ್ತವೆ. ಮಾರ್ಕ.1:27
917ಹಾವುಗಳನ್ನು ಚೇಳುಗಳನ್ನು ತುಳಿದು ಹಾಕಲು ಶತ್ರುವಿನ ಸಕಲ ಶಕ್ತಿಯನ್ನು ಎದುರಿಸಲು ಕರ್ತನು ನನಗೆ ಅಧಿಕಾರವನ್ನು ಕೊಟ್ಟಿರುವನು. ಒಂದೂ ನನಗೆ ತೊಂದರೆ ಪಡಿಸುವುದಿಲ್ಲ. ಲೂಕ.10:19
918ಬಿದ್ದು ಹೋದಂತಹ ವಿಶ್ವಾಸಿಗಳಿಗೆ ಅವರ ಬಾಳನ್ನು ಸರಿಸಪಡಿಸಿ ಸ್ಥಿರ ಪಡಿಸಲು ನನಗೆ ಅಧಿಕಾರ ಕೊಟ್ಟಿದ್ದಾನೆ. ಆದುದರಿಂದ ಬಿದ್ದು ಹೋದ ಕುಟುಂಬಗಳನ್ನು ಯೇಸುವಿನ ನಾಮದ ಮೂಲಕ ಕಟ್ಟಿ ಎಬ್ಬಿಸುವೆನು. 2ಕೊರಿ.10:8, 13:10
919ಎಲ್ಲಾ ದೊರೆತನಕ್ಕೂ ರಾಜತ್ವದ ಅಧಿಕಾರಕ್ಕೂ ಮಹತ್ವಕ್ಕೂ, ಪ್ರಭುತ್ವಾಧಿಗಳಿಗೂ, ಈ ಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿ ಸಹ ಹೆಸರುಗೊಂಡವರೆಲ್ಲರ ಮೇಲೆಯೂ ಎಲ್ಲಾ ಲೋಕದಲ್ಲಿ ಮೇಲೆಆದ ನನ್ನ ಪ್ರೀತಿಯ ದೇವರಾದ ಯೇಸು ಕ್ರಿಸ್ತನು ಜೀವದಿಂದಿದ್ದಾನೆ. ಎಫೆ.1:21
920ನಾನು ಜಯಶಾಲಿಯಾಗಿದ್ದು, ಆದರ ಮೂಲಕ ಕರ್ತನಿಂದ ಜನಾಂಗಗಳ ಮೇಲೆ ಅಧಿಕಾರವನ್ನು ಹೊಂದುವೆ. ಪ್ರಕ.2:26