81ನನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು. ನನ್ನ ಮಕ್ಕಳು ಎಣ್ಣೆಮರದ ಸಸಿಗಳಂತಿರುವರು ಕೀರ್ತ.128:3
82ನನ್ನ ಮಕ್ಕಳು ಊಟದ ಮಣೆಯ ಸುತ್ತಲೂ ಕೂತುಕೊಳ್ಳುವರು ಕೀರ್ತ.128:3
83ಸನ್ಮಾರ್ಗವನ್ನನುಸರಿಸಿ ನಡೆಯುವೆನು. ನನ್ನ ಮನೆಯಲ್ಲಿ ಉತ್ತಮವಾದ ಶುದ್ಧ ಹೃದಯದಿಂದ ನಡೆಯುವೆನು ಕೀರ್ತ.101:2
84ನಾನು ಪರದೇಶಿಯಾಗಿ ನೆಲೆಸುವ ನಿವಾಸದಲ್ಲಿ ನನ್ನ ದೇವರ ನಿಬಂಧನೆಗಳು ನನಗೆ ಗಾಯನವಾದವು. ಕೀರ್ತ.119:54
85ನನ್ನ ನಿವಾಸವು ದೇವರ ಕುಟುಂಬವಾದಾತನ ನಿವಾಸ; ನನ್ನ ನಿವಾಸದಲ್ಲಿ ಕ್ರಿಸ್ತನ ರಕ್ತವು ಪ್ರೊಕ್ಷಿಸಲ್ಪಟ್ಟಿದೆ. ವಿಮೋ.18:3, 13
86ಕೇಡು ನನಗೆ ಸಂಭವಿಸದು. ಉಪದ್ರವವು ನನ್ನ ಗುಡಾರದ ಸಮೀಪಕ್ಕೂ ಬಾರದು. ಕೀರ್ತ.91:10
87ನಿನ್ನ ನಿವಾಸದ ಅಲಂಕಾರವು ಕರ್ತನ ವಚನಗಳು ಅವುಗಳನ್ನು ನಮ್ಮ ಮನೆ ಬಾಗಿಲ ಮೇಲೆಯೂ ನಿಲವು ಪಟ್ಟಿಗಳಲ್ಲಿಯೂ ಹೊರಬಾಗಿಲಿನ ತಲೆಯ ಮೇಲೆಯೂ ಇವುಗಳನ್ನು ಬರೆಯಬೇಕು ಧರ್ಮೋ.6:9
88ನಾನು ನನ್ನ ಮನೆಯವರೊಡನೆ ಕರ್ತನ ವಾಗ್ಧಾನಗಳನ್ನು, ನಿಬಂಧನೆಗಳನ್ನು ಕುರಿತು ತಿಳಿಸುವೆನು. ಧರ್ಮೋ.6:7, 11:20
89ಅಸಹ್ಯವಾದ ವಿಗ್ರಹಗಳನ್ನು, ಕರ್ತನಿಗೆ ಪ್ರಿಯವಿಲ್ಲವಾದದ್ದನ್ನು ನನ್ನ ಮನೆಗೆ ತೆಗೆದುಕೊಂಡು ಬರುವದಿಲ್ಲ. ಧರ್ಮೋ.7:26
90ಸದಾಕಾಲವೂ ನನ್ನ ಮುಂಭಾಗದಲ್ಲಿರುವಂತೆ ಆಶೀರ್ವದಿಸು 1ಪೂರ್ವ.17:27
91ಕರ್ತನಾಗಿರುವ ದೇವರು ಅದನ್ನು ಆಶೀರ್ವದಿಸಿದ್ದರಿಂದ ಅದು ಯಾವಾಗಲೂ ಆಶೀರ್ವದಿಸಲ್ಪಟ್ಟಿದೆ 1 ಪೂರ್ವ.17:27
92ನನ್ನ ಮನೆಯನ್ನು ಕಟ್ಟುತ್ತೇನೆಂದು ನನ್ನ ದೇವರಾಗಿರುವ ನೀನು ನಿನ್ನ ಸೇವಕನಿಗೆ ತಿಳಿಸಿದ್ದಿ. 1 ಪೂರ್ವ.17:25
93ಜ್ಞಾನವೆಂಬಾಕೆಯು ತನ್ನ ಮನೆಯನ್ನು ಕಟ್ಟುವಳು. ಕಂಬಗಳನ್ನು ಕಡಿದು ತನ್ನ ಮನೆಯನ್ನು ಕಟ್ಟಿಕೊಂಡಿದ್ದಾಳೆ. ಆಗ ಕರ್ತನಿಗಾಗಿ ಆತ್ಮೀಕ ಮನೆಯನ್ನು ಕಟ್ಟುತ್ತೇನೆ ಜ್ಞಾನೋ.9:1
94ಸಜ್ಜನರ ಮನೆಯು ಸ್ಥಿರವಾಗಿ ನಿಲ್ಲುವಂತೆ ಎಂದು ಸತ್ಯವೇದ ತಿಳಿಸಿರುವಂತೆ ನನ್ನ ಮನೆಯು ಸ್ಥಿರವಾಗಿ ನಿಲ್ಲುವುದು ಜ್ಞಾನೋ.123:7
95ಶಿಷ್ಟನ ಮನೆಯಲ್ಲಿ ದೊಡ್ಡ ನಿಧಿ ಉಂಟು ಜ್ಞಾನೋ.15:6
96ಮನೆಮಾರು ಆಸ್ತಿಪಾಸ್ತಿಯು ಪಿತೃಗಳಿಂದ ದೊರಕುವವು ಕರ್ತನೇ ನನ್ನ ಬಾಧ್ಯತೆಯಾಗಿರುವನು. ಜ್ಞಾನೋ.19:14
97ನಮ್ಮ ಮನೆಯು ಆಶೀರ್ವಾದಕ್ಕೆ ನೆಲೆಯಾಗಿರುವಂತೆ ಮೊದಲನೆಯ ಹಿಟ್ಟನ್ನು ಯಾಜಕರಿಗೆ ಕೊಡತಕ್ಕದ್ದು. ದೇವರ ಸೇವಕರಿಗೆ ಕೈಲಾದ್ದನ್ನು ಕೊಟ್ಟು ಘನಪಡಿಸುವೆನು. ಯೆಹೆ.44:30
98ಕರ್ತನಾಗಿರುವ ದೇವರ ವಾಕ್ಯದ ಬೆಳಕು ನನ್ನ ಮನೆಯಲ್ಲಿ ಎಲ್ಲರಿಗೂ ಬೆಳಕನ್ನು ಕೊಡುತ್ತದೆ. ಮತ್ತಾ.5:15
99ನನ್ನ ಮನೆಯೂ ಬೆಟ್ಟದ ಮೇಲೆ ಕಟ್ಟಲ್ಪಟ್ಟಂತೆ ಕ್ರಿಸ್ತನ ಮೇಲೆ ಕಟ್ಟಲ್ಪಟ್ಟ ಮನೆಯಾಗಿ ಸ್ಥಿರವಾಗಿರುವುದು. ಮತ್ತಾ.7:24
100ಕರ್ತನು ನನಗೆ ಮಾಡಿದ ಎಲ್ಲವನ್ನೂ ನನ್ನ ಮನೆಗೆ ಬರುವಂತೆ ತಿಳಿಸುತ್ತೇನೆ. ಮಾರ್ಕ 5:19; ಲೂಕ 8:39